
ಕೆ.ಆರ್.ನಗರ: ಪಟ್ಟಣದಲ್ಲಿ ಸುಮಾರು ೯ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.
ಪಟ್ಟಣದ ವಾರ್ಡ್ ನಂ. ೧೭, ೫ ಹಾಗೂ ೧೨ನೇ ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯರ ನಿಧಿಯಲ್ಲಿ ಈಗಾಗಲೇ ೯ ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರಯಲಾಗಿದ್ದು, ಈಗ ಹೊಸದಾಗಿ ಮತ್ತೆ ೩ ಘಟಕಗಳನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ತರಕಾರಿ ಮಾರಾಟಗಾರರ ಅನುಕೂಲಕ್ಕಾಗಿ ಸನ್ಯಾಸಿ ಪಾರ್ಕ್‌ನಲ್ಲಿ ಶುದ್ಧ ನೀರಿನ ಘಟಕವನ್ನು ತೆರಯಲಾಗುವುದು ಎಂದು ಘೋಷಿಸಿದರಲ್ಲದೆ ಅಗತ್ಯವಿರುವಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲಾಗುವುದು. ನಾಗರೀಕರು ಶುದ್ಧ ನೀರಿನ ಘಟಕಗಳನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಶಾಸಕ ಡಿ.ರವಿಶಂಕರ್, ಪುರಸಭೆ ಸದಸ್ಯರಾದ ನಟರಾಜ್, ಶಂಕರ್, ಸುಬ್ರಹ್ಮಣ್ಯ(ಓಮ), ಶಿವುನಾಯಕ್, ಮಾಜಿ ಅಧ್ಯಕ್ಷ ನರಸಿಂಹರಾಜ್, ಸದಸ್ಯ ವಿನಯ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್(ಕೆಂಚಿ), ಮುಖಂಡರಾದ ಪೋಟೋ ಮಹದೇವ್, ಮಂಜು, ಆದರ್ಶ್, ಮುಖ್ಯಾಧಿಕಾರಿ ಸುಧಾರಾಣಿ, ಇನ್ನಿತರರು ಹಾಜರಿದ್ದರು.