ಹುಣಸೂರು: ಅತಿಯಾದ ವಿಶ್ವಾಸವೇ ನನ್ನ ಸೋಲಿಗೆ ಕಾರಣವಾಗಿದ್ದು, ಯಾರೂ ದೃತಿಗೆಡುವ ಅವಶ್ಯವಿಲ್ಲ. ನಿಮ್ಮೊಂದಿಗೆ ನಾನಿದ್ದೇನೆಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಸಲಿಂಪ್ಯಾಲೆಸ್‌ನಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು ನನಗೆ ೯೨,೨೪೦ ಮಂದಿ ಮತನೀಡಿದ್ದು, ಕ್ಷೇತ್ರದ ಮತದಾರರು ಮಾರಾಟವಾಗಿಲ್ಲವೆಂಬುದನ್ನು ತೋರಿಸಿಕೊಟ್ಟಿದ್ದಾರೆ. ನನ್ನ ಸೋಲಿಗೆ ಹಲವಾರು ಘಟನೆ, ನೂರಾರು ಕಾರಣಗಳಿವೆ, ವಿರೋಧ ಪಕ್ಷದವರಲ್ಲಿ ಗೆದ್ದೇ ಗೆಲ್ಲುತ್ತೇನೆಂಬ ಹುಮ್ಮಸ್ಸಿತ್ತು. ನಮ್ಮ ಕಾರ್ಯಕರ್ತರಲ್ಲೆ ಗೆದ್ದಾಯಿತೆಂಬ ಅಹಂ ಇತ್ತು. ಹೀಗಾಗಿ ಅತ್ಯಲ್ಪಮತಗಳಿಂದ ಸೋಲಾಗಿದೆ.
ಸೇಲಾಗಿದ್ದು ಬೇಸರ: ಹೊಟ್ಟೆನೋವು ಅನುಭವಿಸಿದವರಿಗೆ ಗೊತ್ತು ಆ ನೋವು. ನನಗೆ ಬಂದಿರುವ ನೋವು ತೋಡಿಕೊಳ್ಳುವ ಸಭೆ ಇದು. ಮೊದಲನೆಯದ್ದು ಕಾರ್ಯಕರ್ತರೊಳಗಿನ ಕಚ್ಚಾಟ ಈ ಸ್ಥಿತಿಗೆ ಕಾರಣ. ಪಕ್ಷ ನೀಡಿದ ಅಧಿಕಾರ ಅನುಭವಿಸಿದ ತ್ರಿಮೂರ್ತಿಗಳ್ಲೊಬ್ಬರು ಸೇರಿದಂತೆ ಕೆಲ ಚುನಾಯಿತ ಪ್ರತಿನಿಧಿಗಳು, ಮಾಜಿ ಪ್ರತಿನಿಧಿಗಳು ಒಂದು ವಾರದಲ್ಲಿ ಸೇಲಾದರೆಂದು ಬೇಸರ ವ್ಯಕ್ತಪಡಿಸಿದರು.
ನೆರವಾಗಿದ್ದೇನಾನು ಮಾಡಿದ ತಪ್ಪುಗಳು: ನಾನು ಮಾಡಿದ ತಪ್ಪುಗಳೆಂದರೆ ಪ್ರವಾಹ-ಕೋವಿಡ್‌ವೇಳೆ ನೆರವಾಗಿದ್ದು, ಕೋವಿಡ್ ಸಾವಿನಲ್ಲಿ ಹೆಣಗಳನ್ನು ಹೊತ್ತಿದ್ದು, ಮನೆ ಮನೆಗೆ ಹೋಗಿ ಕ? ಸುಖಗಳನ್ನು ಕೇಳಿದ್ದು, ಕ?ದಲ್ಲಿದ್ದವರಿಗೆ ಸ್ಪಂದಿಸಿದ್ದೇ ನನ್ನ ತಪ್ಪು. ನಾನೆಂದೂ ಎಂದೂ ದ್ವೇ? ಸಾಧಿಸಿಲ್ಲ. ಮನಸ್ಸು ಕೆಡಿಸಿಕೊಂಡಿರಲಿಲ್ಲ. ಹೊಸ ನೀರು ಬರುತ್ತೆ, ಹಳೇ ನೀರು ಹೋಗುತ್ತೆ,ಮತ್ತೆ ಹೊಸನೀರು ಬಂದೇ ಬರುತ್ತೆ. ಕಾಲಚಕ್ರ ಉರುಳುತ್ತೆ ಅಲ್ಲಿಯವರೆಗೆ ಕಾಯಬೇಕೆಂದು ನೋವು ತೋಡಿಕೊಂಡರು.
ದ್ವೇಷ ರಾಜಕಾರಣ ಮಾಡಲ್ಲ: ಅಂದು ಶಾಸಕ ಜಿ.ಟಿ.ದೇವೇಗೌಡರು ಬಿಜೆಪಿವರೊಂದಿಗೆ ಸೇರಿ ನನಗೆ ಸರಕಾರದಿಂದ ಬರಬೇಕಾದ ಯಾವುದೇ ಅನುದಾನಕ್ಕೆ ತಡೆಯೊಡ್ಡಿದ್ದರು. ಆದರಿಂದ ಅಭಿವೃದ್ದಿ ಮಾಡಲು ಸಾಧ್ಯವಾಗಲಿಲ್ಲ. ನಾನು ಆ ರೀತಿ ರಾಜಕಾರಣ ಮಾಡುವುದಿಲ್ಲ ಏಕೆಂದರೆ ಇದು ನನ್ನ ಮಣ್ಣು. ನನ್ನ ಜನರಿಗಾಗಿ ಆಗಬೇಕಾದ ಕೆಲಸ ಮಾಡುವೆ.ಯಾವುದೇ ಕಾರಣಕ್ಕೂ ಬಿಡಲ್ಲ. ಕಾಂಗ್ರೆಸ್ ಕೊಟ್ಟ ಭರವಸೆಯನ್ನು ಸಿದ್ದರಾಮಯ್ಯರ ಸರಕಾರ ನೆರವೇರಿಸುತ್ತದೆ. ಹಾಲಿ ಶಾಸಕರು ಚಾಮುಂಡೇಶ್ವರಿ ನನ್ನ ಮನೆ ಎಂದು ಭಾ?ಣ ಮಾಡಿದ್ದಾರೆ. ನನ್ನನ್ನು ಸೋಲಿಸಲು ಜೆಡಿಎಸ್‌ನವರು ೧೨೦ಕೋಟಿ ಖರ್ಚು ಮಾಡಿದ್ದಾರೆಂದು ಜನರೇ ಹೇಳುತ್ತಿದ್ದಾರೆ. ಇಷ್ಟು ಖರ್ಚುಮಾಡಿದ್ದರೂ ನನಗೆ ೯೨ಸಾವಿರ ಮತ ಹಾಕಿ ನಿಮ್ಮೊಂದಿಗೆ ನಾವಿದ್ದೇವೆಂದು ಸ್ವಾಭಿಮಾನಿ ಮತದಾರರು ತೋರಿಸಿಕೊಟ್ಟಿದ್ದಾರೆ.
ಮನಗಿದ್ದಾಗ ಕತ್ತುಕೊಯ್ದರು: ನನ್ನಿಂದ ಸುಮಾರು ೬೦೦ಕ್ಕೂ ಹೆಚ್ಚು ಮಂದಿ ಬಹಳಷ್ಟು ಸಹಾಯ ಪಡೆದುಕೊಂಡು ಹಣಕ್ಕಾಗಿ ಹೋದರಲ್ಲ ಅದುವೆ ಬೇಸರದ ಸಂಗತಿ. ರಾಜಕಾರಣದಲ್ಲಿರಬೇಕಾದರೆ ಎಲ್ಲವನ್ನೂ ಸಹಿಸಿಕೊಂಡು ಎದುರಿಸಿ ರಾಜಕಾರಣ ಮಾಡಬೇಕು. ಬೆನ್ನಿಗೆ ಚೂರಿ ಹಾಕಿದರೆ ಬದುಕುತ್ತೇವೆ. ಆದರೆ ನಮ್ಮಲ್ಲಿಯೇ ಕೆಲವರು ಮಲಗಿದ್ದಾಗ ಕತ್ತುಕೊಯ್ದರು. ಇದು ಬೇಸರದ ಸಂಗತಿ ಎಂದರು.
ಮಾತುಕೊಟ್ಟಿದ್ದನ್ನು ಈಡೇರಿಸಲಿ: ಆದರೆ ಈಗ ಗೆದ್ದವರು ಸಿಕ್ಕಸಿಕ್ಕವರಿಗೆ ಡೈರಿಯಲ್ಲಿ ಕೆಲಸ, ಬ್ಯಾಂಕ್ ಲೋನ್ ಕೊಡುತ್ತೇನೆಂದಿದ್ರಲ್ಲ ಅದನ್ನು ಕೊಡಿಸಲು ಹೇಳಿ. ಕೆಲವರಿಗೆ ತಾತ್ಕಾಲಿಕ ಕೆಲಸ ಕೊಡಿಸಿದ್ದಿರಾ ಅವರನ್ನು ಪರ್ಮನೆಂಟ್ ಮಾಡಿ ಕೊಟ್ಟ ಭರವಸೆಯನ್ನು ಈಡೇರಿಸಲಿ ಎಂದರು.
ಎದೆಗುಂದದೆ ತಿಳಿಸಿ: ತಾಲೂಕಿನ ಬಿಳಿಕೆರೆ ಭಾಗದ ಕೆರೆ ನೀರು ತುಂಬುವ ಉಂಡವಾಡಿ-೨ ಯೋಜನೆಗೆ ಮಂಜೂರಾಗಿತ್ತು. ಈಗ ಟೆಂಡರ್ ಕರೆದಿದ್ದಾರೆ. ಹುಣಸೂರು ನಗರಕ್ಕೆ ೨೫ಕೋಟಿ ನಗರೊತ್ಥಾನ ಯೋಜನೆ ಕಾಮಗಾರಿ, ಫುಡ್‌ಸ್ಟ್ರೀಟ್, ಮರದೂರು ಎರಡನೇ ಹಂತದ ಏತ ನೀರಾವರಿ, ಹರಳಹಳ್ಳಿ, ಹೆಮ್ಮಿಗೆ ರಸ್ತೆ ಅಭಿವೃದ್ದಿ ಈ ಎಲ್ಲಾ ಯೋಜನೆಗಳು ನನ್ನ ಅವಧಿಯಲ್ಲಿ ಮಂಜೂರಾಗಿದ್ದು, ಈ ಬಗ್ಗೆ ಕಾರ್ಯಕರ್ತರು ಎಲ್ಲೆಡೆ ತಿಳಿಸಿವ ಕೆಲಸ ಮಾಡಿರೆಂದರು.
ಕಾರ್ಯಕರ್ತರ ಒಕ್ಕೂರಲ ಒತ್ತಾಯ:
ತಾಲೂಕಿಗೆ ಯಾವುದೇ ಕೆಲಸಗಳು ಆಗಬೇಕಾದರೂ ನಮ್ಮ ಸಿದ್ದರಾಮಯ್ಯ ಕೊಡುತ್ತಾರೆ. ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಮುಖವಾಡ ನಾನು. ಈ ತಾಲೂಕಿನ ಕಾಂಗ್ರೆಸ್ ನಾಯಕತ್ವ ನನಗಿಂತಲೂ ಉತ್ತಮರು ಇದ್ದಲ್ಲಿ ಮುಂದೆ ಬನ್ನಿ. ನಾನು ತಾಲೂಕಿನ ನಾಯಕತ್ವವನ್ನು ಬಿಟ್ಟು ಕೊಡಲು ಸಿದ್ದನಿದ್ದೇನೆ. ನಿಮ್ಮೊಂದಿಗೆ ನಾನು ನೊಗ ಎಳೆಯುತ್ತೇನೆ, ಯಾರಾದರೂ ಮುಂದೆ ಬಂದಲ್ಲಿ ಚಕ್ರ-ಬಂಡಿ ತಳ್ಳಲು ಸಿದ್ದನಿದ್ದೇನೆಂಬ ಮಾತಿಗೆ ಮಂಜಣ್ಣನೇ ಇರಬೇಕೆಂಬ ಒಕ್ಕೂರಲ ಒತ್ತಾಯ ಕೇಳಿಬಂತು.
ಮತ್ತೆ ಚುನಾವಣೆ ಬರಲಿದೆ: ನಾನು ತಾಲೂಕಿನಲ್ಲಿ ಇಲ್ಲದ ಸಮಯದಲ್ಲಿ ನಮ್ಮ ಮುಖಂಡರು ಸಂಕ?ಕ್ಕೆ ಸಿಲುಕಿರುವವರ ಪರವಾಗಿ ನಿಲ್ಲಬೇಕು. ಗ್ರಾ.ಪಂ.ಅಧ್ಯಕ್ಷರ ಚುನಾವಣೆ ಬರಲಿದೆ. ಉಳಿದ ೨.೫ವ?ದ ಅಧಿಕಾರಕ್ಕೆ ಕಚ್ಚಾಡಬೇಡಿ. ಪ್ರತಿ?ಯಾಗಿಸಿಕೊಳ್ಳಬೇಡಿ. ಚರ್ಚಿಸಿ ಬಗೆಹರಿಸಿಕೊಳ್ಳಿ. ಮುಂದೆ ಜಿ.ಪಂ.ತಾ.ಪಂ. ವ?ದಲ್ಲಿ ಮತ್ತೆ ಲೋಕಸಭಾ ಚುನಾವಣೆಬರಲಿದ್ದು, ಸಂಘಟನೆ ಬಗ್ಗೆ ಚಿಂತಿಸಿರಿ. ಸಂಕ?ದಲ್ಲಿರುವವರ ಬೆನ್ನಿಗೆ ಮಂಜುನಾಥನಿದ್ದಾನೆಂಬುದನ್ನು ಮರೆಯಬೇಡಿರೆಂದರು.
ಸಭೆಯಲ್ಲಿ ವಕೀಲಪುಟ್ಟರಾಜು ಹರಿಹರಆನಂದಸ್ವಾಮಿ, ಹಂದನಹಳ್ಳಿಸೋಮಶೇಖರ್, ಕುನ್ನೆಗೌಡ, ಎಸ್.ಜಯರಾಮ್, ವಳ್ಳಿಯಮ್ಮ, ಹಲವಾರು ಮುಖಂಡರು ಮಾತನಾಡಿದರು.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ನಾರಾಯಣ್, ಬಸವರಾಜಪ್ಪ, ರಮೇಶ್, ಜಯರಾಮ್, ರಾಜುಶಿವರಾಜೇಗೌಡ, ಕೋಡಿಕೃ?, ಬಿಳಿಕೆರೆಬಸವರಾಜ್, ಕುಮಾರ್, ಕಲ್ಕುಣಿಕೆರಾಘು, ವೀಣಾ, ಶೋಭಾ, ಮಂಜುಳಮ್ಮ, ನಗರಸಭಾ ಸದಸ್ಯರುಗಳು, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಸ್ನೇಹಜೀವಿ ಬಳಗದ ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು, ಕಾರ್ಯಕರ್ತರು ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿದ್ದರು.