Saturday, April 19, 2025
Google search engine

HomeUncategorizedಅನ್ನ ಭಾಗ್ಯ ಯೋಜನೆಗೆ ಅಕ್ಕಿ ನೀಡುವ ವಿಚಾರದಲ್ಲಿ ಬಿಜೆಪಿಯಿಂದ ದ್ವೇಷದ ರಾಜಕಾರಣ: ಕಾಂಗ್ರೆಸ್ ಪಕ್ಷದ ಕೃತಜ್ಞತಾ...

ಅನ್ನ ಭಾಗ್ಯ ಯೋಜನೆಗೆ ಅಕ್ಕಿ ನೀಡುವ ವಿಚಾರದಲ್ಲಿ ಬಿಜೆಪಿಯಿಂದ ದ್ವೇಷದ ರಾಜಕಾರಣ: ಕಾಂಗ್ರೆಸ್ ಪಕ್ಷದ ಕೃತಜ್ಞತಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ


ಕೆ.ಆರ್.ನಗರ:
ಕೇಂದ್ರ ಸರ್ಕಾರ ರಾಜ್ಯದ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ನೀಡಲು ನಿರಾಕರಿಸಿರುವುದು ಬಿಜೆಪಿಯ ದ್ವೇಷದ ರಾಜಕಾರಣವಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು ಕೇಂದ್ರದಲ್ಲಿ ಸಾಕಷ್ಟು ಅಕ್ಕಿ ದಾಸ್ತಾನಿದ್ದರೂ ಸಹ ಕಾಂಗ್ರೆಸ್ ನೀಡಿರುವ ಭರವಸೆ ಈಡೇರಿಸಬಾರದೆಂಬ ಕಾರಣಕ್ಕಾಗಿ ಅಕ್ಕಿ ನೀಡುತ್ತಿಲ್ಲ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದ್ದು ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಆದರೂ ಜುಲೈ ತಿಂಗಳಿನಿಂದ ಪಡಿತರದಾರರಿಗೆ ತಲಾ ೧೦ ಕೆ.ಜಿ. ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.
ಡಿ.ರವಿಶಂಕರ್ ಅವರು ಕ್ಷೇತ್ರದ ಸಮಸ್ಯೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ಎರಡು ಬಾರಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಜನರ ಸಮಸ್ಯೆಗಳನ್ನು ಅರಿತವರಾಗಿದ್ದು, ಶಾಸಕರಾಗಿ ಉತ್ತಮವಾದ ಕೆಲಸ ಮಾಡಲಿದ್ದಾರೆ. ಇದಕ್ಕೆ ಉಸ್ತುವಾರಿ ಸಚಿವನಾಗಿ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆಂದರು.
ಸಚಿವ ಕೆ.ವೆಂಕಟೇಶ್ ಮಾತನಾಡಿ ಕಾಂಗ್ರೆಸ್ ಪಕ್ಷ ಬಡ ಜನರಿಗಾಗಿ ಉಪಯುಕ್ತವಾದ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿತ್ತು. ಇದನ್ನು ಅನುಷ್ಠಾನ ಮಾಡಬಾರದೆಂಬ ದುರದ್ಧೇಶದಿಂದ ಕೇಂದ್ರದ ಬಿಜೆಪಿ ಸರ್ಕಾರ ಅನಗತ್ಯ ತೊಂದರೆ ನೀಡುತ್ತಿದೆ. ಆದರೂ ನಮ್ಮ ಸರ್ಕಾರ ನುಡಿದಂತೆ ನಡೆಯಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಜಾತ್ಯಾತೀತ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿರುವುದರ ಜತೆಗೆ ಅಧಿಕಾರಕ್ಕೆ ಬಂದಾಗ ಬಡಜನತೆಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದ ಸಚಿವರು ಶಾಸಕ ಡಿ.ರವಿಶಂಕರ್ ಉತ್ತಮ ಕಾಲದಲ್ಲಿ ಶಾಸಕರಾಗಿದ್ದು, ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಸಮಗ್ರ ಅಭಿವೃದ್ಧಿ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.
ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಲ್ಲಿರುವ ಸುಮಾರು ೨.೧೭ ಲಕ್ಷ ಮತದಾರರ ಪೈಕಿ ಕಾಂಗ್ರೆಸ್ ಪಕ್ಷಕ್ಕೆ ೧,೦೪,೫೦೨ ಮತಗಳನ್ನು ನೀಡಿ ಡಿ.ರವಿಶಂಕರ್ ಶಾಸಕರಾಗಲು ಕಾರಣಕಾರ್ತರಾಗಿದ್ದಾರೆ. ಇದಕ್ಕಾಗಿ ನಮ್ಮ ಕುಟುಂಬ ಕ್ಷೇತ್ರದ ಜನತೆಗೆ ಸದಾ ಋಣಿಯಾಗಿರುತ್ತೇವೆ ಎಂದರು.
ಈ ಹಿಂದೆ ಜಾತಿ ಜಾತಿಗಳ ನಡುವೆ ಕಂದಕ ತಂದು ರಾಜಕೀಯ ಲಾಭ ಪಡೆದು ಶಾಸಕರಾಗಿದ್ದವರು ಮಾಡಿದ ತಾರತಮ್ಯವನ್ನು ನಮ್ಮ ಕುಟುಂಬ ಮಾಡುವುದಿಲ್ಲ. ಸರ್ವ ಜನಾಂಗದವರ ಕಷ್ಟಸುಖಗಳಲ್ಲಿ ಭಾಗಿಯಾಗಿ ಸರ್ವರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಜಾತ್ಯಾತೀತ ಕ್ಷೇತ್ರವನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದ ದೊಡ್ಡಸ್ವಾಮೇಗೌಡ ಮುಂದಿನ ಚುನಾವಣೆಗಳಲ್ಲಿ ಅಭಿವೃದ್ಧಿಯ ಪರವಾಗಿರುವುದರ ಜತೆಗೆ ಜನರ ಜತೆಗೆ ಇರುವವರನ್ನು ಜಾತ್ಯಾತೀತವಾಗಿ ಆಯ್ಕೆ ಮಾಡುವಂತಹ ವ್ಯವಸ್ಥೆಯನ್ನು ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.
ಶಾಸಕರಾದ ಡಿ.ರವಿಶಂಕರ್, ಡಾ.ತಿಮ್ಮಯ್ಯ, ಗಣೇಶ್‌ಪ್ರಸಾದ್, ಅನಿಲ್‌ಚಿಕ್ಕಮಾದು, ಕೆ.ಹರೀಶ್‌ಗೌಡ, ಮಾಜಿ ಶಾಸಕ ಡಾ.ಯತೀಂದ್ರಸಿದ್ದರಾಮಯ್ಯ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾಅಮರನಾಥ್, ಮಾಜಿ ಸಂಸದ ಕಾಗಲವಾಡಿಶಿವಣ್ಣ, ಎಂಡಿಸಿಸಿ ಬ್ಯಾಂಕಿನ ನಿರ್ದೇಶಕ ಅಮಿತ್.ವಿ.ದೇವರಹಟ್ಟಿ, ಕ್ಷೇತ್ರದ ಉಸ್ತುವಾರಿ ಡಾ.ರವೀಂದ್ರ ಮಾತನಾಡಿದರು.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್, ಪುರಸಭಾ ಮಾಜಿ ಅಧ್ಯಕ್ಷರುಗಳಾದ ಕೆ.ಜಿ.ಸುಬ್ರಮಣ್ಯ, ಕೋಳಿಪ್ರಕಾಶ್, ಸದಸ್ಯರಾದ ನಟರಾಜು, ಶಿವುನಾಯಕ್, ಮುಖಂಡರುಗಳಾದ ಹೆಚ್.ಟಿ.ಮಂಜುನಾಥ್, ಹಾಡ್ಯಮಹದೇವಸ್ವಾಮಿ, ಎಸ್.ಪಿ.ತಮ್ಮಯ್ಯ, ಹೊಸೂರುಕಲ್ಲಹಳ್ಳಿಶ್ರೀನಿವಾಸ್, ಹೆಚ್.ಪಿ.ಗೋಪಾಲ್, ಜೆ.ಶಿವಣ್ಣ, ಹೆಚ್.ಡಿ.ಗಣೇಶ್, ಮಾರ್ಚಹಳ್ಳಿಶಿವರಾಮು, ಜಿ.ಎಸ್.ವೆಂಕಟೇಶ್. ಜಾವೀದ್‌ಪಾಷ, ಲಕ್ಷ್ಮಣ್, ಪುಷ್ಪಲತರಮೇಶ್, ರಾಣಿ, ಲತಾರವಿ, ಸರಿತಾಜವರಪ್ಪ, ಕಲಾವತಿ, ಶಾಂತಿರಾಜ್, ಕೆ.ಪಿ.ಜಗದೀಶ್, ನೀಲಕಂಠೇಗೌಡ, ತಿಮ್ಮಶೆಟ್ಟಿ, ಎಲ್.ಪಿ.ರವಿಕುಮಾರ್, ಗೀತಾಮಹೇಶ್, ನಾಗರತ್ನಮ್ಮ, ಮಿರ್ಲೆ ಸುಬ್ಬಲಕ್ಷ್ಮಿ, ರಾಜಯ್ಯ, ಎಸ್.ಪಿ.ತಮ್ಮಯ್ಯ, ಗುಣಪಾಲ್‌ಜೈನ್, ವೈ.ಎಸ್.ಕುಮಾರ್, ಹೆಚ್.ಪಿ.ಪ್ರಶಾಂತ್, ಕಂಠಿಕುಮಾರ್, ಗೀತಾಮಹೇಶ್, ಸಿ.ಡಿ.ರಾಜಾಚಾರ್, ವಿನಯ್, ಮೂಡಲಕೊಪ್ಪಲು ಕೃಷ್ಣೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ನಗರಾಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್ ಜಾಬೀರ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಕೆಂಚಿಮಂಜುನಾಥ್, ದೆಗ್ಗನಹಳ್ಳಿಆನಂದ ಗಂಧನಹಳ್ಳಿ ಹೇಮಂತ್, ಪೋಟೋ ಮಹದೇವ, ಕೆಂಪನಕೊಪ್ಪಲು ಜಗದೀಶ್, ಕಂಚಿನಕೆರೆ ಯೋಗೇಶ್ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular