Friday, April 4, 2025
Google search engine

HomeUncategorizedಅನ್ಯಾಯದ ವಿರುದ್ಧ ಸೆಟೆದು ನಿಲ್ಲುತ್ತಿದ್ದಜಿ.ಎಚ್.ನಾಯಕ್

ಅನ್ಯಾಯದ ವಿರುದ್ಧ ಸೆಟೆದು ನಿಲ್ಲುತ್ತಿದ್ದಜಿ.ಎಚ್.ನಾಯಕ್

ಮೈಸೂರು: ಅನ್ಯಾಯ, ಜನಪರವಲ್ಲದರ ವಿರುದ್ಧಜಿ.ಎಚ್.ನಾಯಕರು ಸೆಟೆದು ನಿಲ್ಲುತ್ತಿದ್ದರುಎಂದು ಹಿರಿಯ ಪತ್ರಕರ್ತ, ಹೋರಾಟಗಾರಜಿ.ಟಿ.ಬಸವರಾಜು ತಿಳಿಸಿದರು.
ಜನತಂತ್ರಜಾಗೃತಿ ವೇದಿಕೆ, ನೃಪತುಂಗಕನ್ನಡ ವಿಕಾಸ ಶೈಕ್ಷಣಿಕ, ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ, ಮೈಸೂರು ಪ್ರಗತಿಪರ ಸಂಘಟನೆಗಳ ಸಂಯಯಕ್ತಾಶ್ರಯದಲ್ಲಿರಾಮಕೃಷ್ಣನಗರದರಮಾಗೋವಿಂದರಂಗಮಂದಿರದಲ್ಲಿ ಆಯೋಜಿಸಿದ್ದ ಸಾಹಿತಿ,ವಿಮರ್ಶಕ ಜಿ.ಎಚ್.ನಾಯಕರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದಅವರು, ಜಿ.ಎಚ್.ನಾಯಕರು ನಿಷ್ಠರಾಗಿದ್ದು, ದಿಟ್ಟತನವನ್ನು ಹೊಂದಿದ್ದಅವರು ವಿಮರ್ಶೆಯಲ್ಲಿ ಹಲವರ ವಿರೋಧಕಟ್ಟಿಕೊಂಡರು. ಪಂಪ, ಕುಮಾರವ್ಯಾಸ, ರನ್ನ ಸೇರಿದಂತೆ ಹಳೆಗನ್ನಡದ ಕವಿಗಳ ಸಾಹಿತ್ಯವನ್ನು ಬಹಳಷ್ಟು ಓದಿದ್ದರು. ರನ್ನನ ನೀರೊಳಗಿದುಂ ಬೆಮತಂಉರಗಪತಾಕಂ ವಿಮರ್ಶೆಯನ್ನು ಪದೇ ಪದೇ ನೆನಪು ಮಾಡಿಕೊಳ್ಳುತ್ತಿದ್ದರು ಎಂದು ತಿಳಿಸಿದರು.
ಆರಂಭದ ದಿನಗಳಲ್ಲಿ ಪ್ರೊ.ಜಿ.ಎಚ್.ನಾಯಕ್‌ಅವರು ಮೈಸೂರಿಗೆ ಬರಿಗಾಲಲ್ಲಿ ಬಂದು, ಸುಬ್ಬಣ್ಣಅವರ ಸಾರ್ವಜನಿಕ ವಿದ್ಯಾರ್ಥಿ ನಿಲಯಲದಲ್ಲಿ ನೆಲಸಿ ಸಾಹಿತ್ಯಿಕವಾಗಿ ವಿಮರ್ಶಕವಾಗಿ ಬೆಳೆದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರುಎಂದು ಸ್ಮರಿಸಿದರು.
ಜಿ.ಎಚ್.ನಾಯಕ್‌ರು ಬಾಗುವುದನ್ನುಕಲಿತು ಎಂಬ ಅಡಿಗರ ಮಾತಿನಂತೆ. ಹಿರಿಯರು, ಗುಣವಂತರ ಮಂದೆ ನಾಯಕ್‌ಅವರು ನಿಂತರೆಅವರ ಮುಂದೆತಲೆಬಾಗಿ ನಿಲ್ಲುತ್ತಿದ್ದರು. ಪಾರಂಪರಿಕವಾಗಿ, ಚಾರಿತ್ರಿಕವಾಗಿ, ಸಾಂಸ್ಕೃತಿಕ ಹಿನ್ನೋಟದದೃಷ್ಟಿಯಲ್ಲಿಅವರು ಭಾಗುತ್ತಿದ್ದರುಎಂದರು.
ಪಂಪನ ಮುಖ್ಯವಾದ ಪದ್ಯಗಳನ್ನು ತಮ್ಮದೇಆದ ಶೈಲಿಯಲ್ಲಿ ಅರ್ಥೈಸಿಕೊಂಡಿದ್ದರು. ಜಿ.ಎಚ್.ನಾಯಕರುಅವರ ಗುರುಗಳಾದ ಬಿ.ಎಂ.ಶ್ರೀ, ಡಿಎಲ್‌ಎನ್‌ಅವರನ್ನುಎದುರು ಹಾಕಿಕೊಂಡರು. ಸಾಹಿತ್ಯಕ್ಷೇತ್ರದ ಅಭ್ಯಸಿಗಳಿಗೆಲ್ಲ ಗೊತ್ತಿರುವಂತೆಯೇ ಸಾಹಿತ್ಯದಲ್ಲಿ ಮುಖ್ಯವಾದ ಕೃತಿಗಳಾದ ಕನ್ನಡಕಾವ್ಯವನ್ನು ಪರಿಷತ್ತಿಗೆ .ಎನ್‌ಪಿಟಿಗಾಗಿಕಥಾ ಸಂಕಲನ, ಈ ಶತಮಾನದ ಸಾಹಿತ್ಯ ಎಂಬ ೨ ಸಂಪುಟಗಳನ್ನು ಮಾಡಿದ್ದರುಎಂದರು.
ಜಿ.ಎಚ್.ನಾಯಕ್‌ಅವರು ರಚಿಸಿದ ಕನ್ನಡಕಾವ್ಯ, ಕಥಾ ಸಂಕಲನಗಳು ಇಂದಿಗೂ ಸಹ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್,ಕೆಎಎಸ್ ನಲ್ಲಿ ಪ್ರಶ್ನೆಗಳು ಹೊರ ಹೊಮ್ಮುತ್ತಿರುವುದುಇವರ ಸಾಹಿತ್ಯಾಶಕ್ತಿಗೆ ಹಿಡಿದಕೈಗನ್ನಡಿಎಂದು ನೆನೆದರು.
ನವ್ಯದಉತ್ತುಂಗದಕಾಲದಲ್ಲಿ ಇವ ಮೊದಲ ಕೃತಿ ಸಮಕಾಲೀನ ೧೯೭೩ ರಲ್ಲಿಅಡಿಗಲ್ಲರ ಮುನ್ನುಡಿಯೊಂದಿಗೆ ಪ್ರಕಟಗೊಂಡಿತು. ಇದೇಅಡಿಗಲ್ಲರು ನಾಯಕ್‌ರಿಗೆ ಬರೆದ ಮೊದಲ ಹಾಗೂ ಕೊನೆಯ ಮುನ್ನುಡಿಯಾಯಿತು.ನವ್ಯ ಸಾಹಿತ್ಯದಲ್ಲಿ ಆ ತಲೆಮಾರಿನವರೆಲ್ಲರೂ ಭಾಗವಹಿಸಿ ಅನುಭವ ಪಡೆದುಕೊಂಡರುಎಂದು ತಿಳಿಸಿದರು.
ಜಿ.ಎಚ್.ನಾಯಕ್‌ರು ಸಾಂಸ್ಕೃತಿಕಜಗತ್ತಿನ ಹೋರಾಟಗಳು ಬಗ್ಗೆ, ಮಹಿಳಾ ಚಳುವಳಿಗಳ ಬಗ್ಗೆ, ಸಂವಿಧಾನದ ಬಗ್ಗೆ ಸ್ಪಷ್ಟ ನಡೆ ನುಡಿ ಹೊಂದಿದ್ದು, ಜೀವನದುದ್ದಕ್ಕೂ ಶ್ರಮಿಸಿದರು. ಮಹಿಳೆಯರು ಸೇರಿ ಸಮತಾವೇದಿಕೆ ಎಂಬ ಸಂಸ್ಥೆಯೊಂದನ್ನುಕಟ್ಟಿಕೊಂಡು ಅವರ ಮನೆಯಲ್ಲಿ ಪ್ರತಿ ಬುಧವಾರ ಸಭೆ ಸೇರುತ್ತಿದ್ದರು ಈ ವೇದಿಕೆಗೆ ಅವರು ಮಾರ್ಗದರ್ಶನ ನೀಡಿ, ಹೋರಾಟದ ರೂಪುರೇಷೆಗಳನ್ನು ಹೇಳಿಕೊಡುತ್ತಿದ್ದರು ಎಂದು ಸ್ಮರಿಸಿದರು.
ರಂಗಾಯಣದಕಲಾವಿದರಾದಕೃಷ್ಣಪ್ರಸಾದ್,ಜನಾರ್ಧನ್[ಜನ್ನಿ], ನಿರಂತರ ಪ್ರಸಾದ್, ,ಡಾ.ವಿ.ಲಕ್ಷ್ಮೀನಾರಾಯಣ್, ಗೋಪಾಲಕೃಷ್ಣ, ನಿಂಗ ರಾಜ್‌ಚಿತ್ತಣ್ಣ ನವರ್, ಪ್ರೋ.ಹ.ತಿ.ಕೃಷ್ಣೇಗೌಡ, ಪ್ರೊ.ಲೋಲಾಕ್ಷಿ, ಎಚ್.ಆರ್.ತಿಮ್ಮೇಗೌಡ, ಪ್ರೋ.ಶಬೀರ್ ಮುಸ್ತಫಾ, ಉಮಾದೇವಿ, ಉಗ್ರನರಸಿಂಹೇಗೌಡ, ಆಶೀಯಾ ಸೇರಿದಂತೆಇತರರುಇದ್ದರು.

RELATED ARTICLES
- Advertisment -
Google search engine

Most Popular