ಮೈಸೂರು: ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಈ ನಡುವೆಕೊಲೆಗಡುಕರನ್ನು ಅತ್ಯಾಚಾರಿಗಳನ್ನು ಶಿಕ್ಷಿಸುವ ಪ್ರಕ್ರಿಯೆ ಏಕೆ ನಿಧಾನವಾಗುತ್ತಿದೆ ತಿಳಿಯದಾಗಿದೆ. ಅಲ್ಲದೆ, ನಿಧಾನಗತಿಯ ಶಿಕ್ಷೆಯ ಪ್ರಕ್ರಿಯೆಗಳು ಹಾಗೂ ದೇಶದಲ್ಲಿ ನಡೆಯುತ್ತಿರುವ ಹೆಣ್ಣುಮಕ್ಕಳ ಆತಂಕವಾಗುತ್ತದೆಎಂದು ಕಳವಳ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದಾಗಿಯುವಉದ್ಯಮಿಡಾ.ಶ್ವೇತಾ ಮಡಪ್ಪಾಡಿ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವಅತ್ಯಾಚಾರ ಮತ್ತುಕೊಲೆಯ ಪ್ರಮಾಣವನ್ನು ಗಮನಿಸಿದಲ್ಲಿ ಕೊಲ್ಲುವ ಪ್ರಕ್ರಿಯೆ ಬಹಳ ಸುಲಭ ಮತ್ತು ಸುರಕ್ಷಿತ ಎಂಬ ಸಾಮಾಜಿಕಧೈರ್ಯ ಸೃಷ್ಟಿಯಾಗುತ್ತಿದೆಯೇ ಎಂಬ ಪ್ರಶ್ನೆ ಏಳುತ್ತಿದೆ. ಜೊತೆಗೆ, ಸಾರ್ವಜನಿಕವಾಗಿಕೊಲೆಯಾದ ಎಷ್ಟು ಹೆಣ್ಣುಮಕ್ಕಳಿಗೆ ಇಲ್ಲಿಯವರೆಗೆ ನ್ಯಾಯದೊರಕಿದೆ. ಮನುಷ್ಯನನ್ನು ಮನುಷ್ಯಕೊಲ್ಲುವ ಈ ಹೊಸ ಸಂಸ್ಕೃತಿಎಲ್ಲಿಗೆ ಹೋಗಿ ತಲುಪುತ್ತದೆ ಎಂಬ ಆತಂಕದೊಡನೆಕೊಲೆಗಾರರು ಮತ್ತು ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆ ನಿಧಾನವಾದಷ್ಟೂಕೊಲೆಗಾರರಿಗೆಧೈರ್ಯಕೊಟ್ಟಂತೆಆಗುತ್ತಿದೆಎಂದು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಹೇಳಿದರು.
ಬಳಿಕ, ದೇಶವನ್ನುಕಾನೂನಾತ್ಮಕವಾಗಿಇನ್ನಷ್ಟುಧಡಪಡಿಸಬೇಕಾದಅವಶ್ಯಕತೆಯಿದೆ. ಹೆಣ್ಣುಮಕ್ಕಳು ಹಾದಿಬೇದಿಯಲ್ಲಿ ಬರ್ಬರವಾಗಿಕೊಲೆಯಾಗುತ್ತಿದ್ದಾರೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಾಗುತ್ತಿರುವಆತಂಕಕಾರಿ ಆಕ್ರಮಣಗಳನ್ನು ಕುರಿತು ಈಗಾಗಲೇ ಸರಕಾರಯಾವ
ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬುದು ಅಸಷ್ಟ. ಇದು ನಾವು ಮನುಷ್ಯರುತಲೆತಗ್ಗಿಸುವಂಥ ಹಲವು ಘಟನೆಗಳು ಮತ್ತೆ ಮತ್ತೆರಾಜಾರೋಷವಾಗಿ ಮರುಕಳಿಸುತ್ತಿದೆಯೇ ಹೊರತು, ಒಂದುತಪ್ಪಿಗೂತಕ್ಕ ಶಿಕ್ತಿಯಾಗಿದ್ದು ಜನಸಾಮಾನ್ಯರ ಗಮನಕ್ಕೆ ಬಂದಿರುವುದಿಲ್ಲ. ಹೈದರಾಬಾದ್ (ದಿಶಾ) ಗ್ಯಾಂಗ್‌ರೇಪ್, ನಿರ್ಭಯಾ(ಜ್ಯೋತಿಸಿಂಗ್) ಹತ್ಯೆಎರಡನ್ನು ಹೊರತುಪಡಿಸಿ ಉಳಿದವುಗಳ ಕತೆ ಸಾಕ್ಷಿಯ ಭೀಕರ ಕೊಲೆ ದೇಶದಎದೆ ನಡುಗಿಸುವಂಥದ್ದಾಗಿದೆ. ಶ್ರದ್ಧಾ ಹತ್ಯೆ ಬಳಿಕ ನಮಗೆ ನಾವೇ ಮಾಡಿಕೊಂಡಅವಮಾನಕೆದಕಿದರೆಇಂತ ನೂರು ಘಟನೆಗಳು ಸಿಗುತ್ತವೆ. ರಾಜ್ಯದಲ್ಲಿಕೂಡ ಹಲವಾರು ಪ್ರಕರಣಗಳು ಇನ್ನೂಇತ್ಯರ್ಥಗೊಂಡಿಲ್ಲಎಂದು ಬೇಸರ ವ್ಯಕ್ತಪಡಿಸಿರುವುದಾಗಿ ಹೇಳಿದರು.
ಅಪರಾಧಿಗಳಿಗೆ ಶಿಕ್ಷೆ ವಿಳಂಬಕ್ಕೆ ಬೇಸರ
RELATED ARTICLES