
ಮೈಸೂರು: ನಗರದ ಹಾರ್ಡಿಂಗ್ ವೃತ್ತದಿಂದ ರಾಜಮಾರ್ಗದಲ್ಲಿ ಕೃಷ್ಣರಾಜ ವೃತ್ತಕ್ಕೆ ಹಾದು ಹೋಗಬೇಕಾದರೆ ಚಾಮರಾಜೇಂದ್ರ ಒಡೆಯರ್ ವೃತ್ತ ದಾಟಿ ಆಲ್ಬರ್ಟ್ ವಿಕ್ಟರ್ ರಸ್ತೆ ಮಾರ್ಗದಲ್ಲಿ ಕೆ.ಎಸ್.ಆರ್.ಟಿ ಸಿ ಅವರು ಬಸ್ ಸಂಚಾರಕ್ಕಾಗಿ ಪ್ರತ್ಯೇಕ ವ್ಯವಸ್ಥೆಗೆ ಸಂಚಾರಿ ಇಲಾಖೆ ಇಂದ ( ಅನುಮತಿ ತೆಗೆದುಕೊಂಡಿದ್ದಾರೊ ತಿಳಿಯದು ) ರಸ್ತೆಯ ಅರ್ಧದಷ್ಟಕ್ಕೆ ತಡೆ ಹಾಕಿಕೊಂಡು ಮುಂದೆ ಹೋದರೆ ಆ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಟ್ ಹಾಕಿಸಿದ್ದಾರೆ ಆದರೆ ಅನ್ಯ ರಾಜ್ಯದಿಂದ ಬರುವ ನಾಲ್ಕು ಚಕ್ರದ ವಾಹನಗಳು ರಸ್ತೆಗೆ ಅಡ್ಡಲಾಗಿರುವುದನ್ನು ನೋಡಿ ಗೊಂದಲಕ್ಕಿಡಾಗಿ ಹಿಂದೆಯೂ ಹೋಗಲಾಗದೆ ಮುಂದೆಯೂ ಹೋಗಲಾಗದೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಒಳಗೆ ಹೋಗ ಬೇಕಾಗಿದ್ದು ಆದರೆ ಒಳಗಡೆ ಇಂದ ಸಯ್ಯಾಜಿ ರಾವ್ ರಸ್ತೆ ( ನಗರ ಪಾಲಿಕೆಯ ರಸ್ತೆ )ಯತ್ತ ಸಂಚರಿಸಬೇಕು ಆಗ ಅಲ್ಲಿ ಕೆ ಎಸ್ ಆರ್ ಟಿ ಸಿ ಅವರು ಅನಧಿಕೃತವಾಗಿ 200₹ ದಂಡ ವಿಧಿಸುವುದು ಖಂಡು ಬಂದಿದ್ದು ಇದು ಸಂಚಾರಿ ಹಾಗು ಕೆ ಎಸ್ ಆರ್ ಟಿ ಸಿ ಯ ಅವೈಜ್ಞಾನಿಕ ಕಾನೂನಾಗಿ ಸಾರ್ವಜನಿಕರು ಅನ್ಯಾಯವಾಗಿ ದಂಡ ಪಾವತಿಸುವ ಹಾಗಾಗಿರುವುದು ಯಾವ ನ್ಯಾಯ.