ಎಚ್.ಡಿ. ಕೋಟೆ : ತಾಲೋಕಿನ ಗದ್ದೆಹಳ್ಳ ಗ್ರಾಮದ ೨೨ ವರ್ಷದ ಅವಿನಾಶ್ ಎಂಬ ಯುವಕ ಆನೆ ದಾಳಿಗೆ ಬಲಿಯಾಗಿದ್ದಾನೆ.
ಸರಗೂರು ತಾಲೂಕು ಸಾಗರೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಗದ್ದೆಹಳ್ಳ ಗ್ರಾಮದ ಕಾಂತ ನಾಯಕನ ಪುತ್ರ ಅವಿನಾಶ್ ೨೨ ವರ್ಷದ ಯುವಕ. ಜಮೀನಿಗೆ ನೀರು ಹಾಯಿಸಲು ತೆರಳಿ, ಮೋಟಾರ್ ಸ್ವಿಚ್ ಆನ್ ಮಾಡಿ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಐದು ಆನೆಗಳ ಹಿಂಡು ಮುಖಮುಖಿ ಆಗಿದ ಸಂದರ್ಭದಲ್ಲಿ ಆನೆಗಳ ಗುಂಪು ಯುವಕನ ಮೇಲೆ ದಾಳಿ ನಡೆಸಿದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.
ಮುಗಿಲು ಮುಟ್ಟಿದ ಆಕ್ರಂದನ : ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
೧೧ ಗಂಟೆ ಆದರೂ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಬರದಿದ್ದ ಕಾರಣ ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.