ಏಕೆ ಎರಗಿದೆ ನೀ
ಮೈ ಮೇಲೆ ಆಷಾಢ
ಮೃಗವೆ
ತನುಗಳೆರಡು ದೂರಾದರು
ಮನಗಳ ನೀ ದೂರ ಮಾಡಲಾದಿತೆ ನೀ
ಆಷಾಢಭೂತಿಯೆ…..?
ಮಾಸವೆ ಮಾಸಿಲ್ಲ ನವ
ಜೀವನದ ಬಾಳಲಿ
ಮಾಯೆಯಂತೆ
ಮಸೆದು ಇರಿದೆಯಲ್ಲ
ವಿರಹವೆಂಬ ಕತ್ತಿಯ….!!
ಹೊತ್ತಾದರು ಹತ್ತದ
ನಿದ್ದೆ
ಹೊತ್ತು ಹೊತ್ತಿಗೆ ಇಳಿಯದ
ಮುದ್ದೆ…
ದಿಂಬಿನ ಮೇಲೆ ಜಿನಿಕಿದೆ
ನಲ್ಲ ನಲ್ಲೆಯ ನೆನೆದು
ಕಣ್ಣಿರು ಒದ್ದೆ……
ಬಕಪಕ್ಷಿಯಂತೆ
ಕಾದು ಕುಳಿತ್ತಿವೆ ಅಕ್ಷಿಗಳು
ಶ್ರವಣದ ಹಾದಿಯ
ಶ್ರಾವಣಿಯ ಸಂಗವ
ಎಷ್ಟು ದಿನ ತರಬಲ್ಲೆ ನೀ
ನಮ್ಮಿಬ್ಬರ ಏಕಾಂತಕ್ಕೆ
ಭಂಗವ…?
-ದೆ. ಶಿವರತ್ನಾನಂದ್.