Thursday, April 17, 2025
Google search engine

Homeಬ್ರೇಕಿಂಗ್ ನ್ಯೂಸ್ಇಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಇಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಮೈಸೂರು: ಜು.4 ರಿಂದ 7 ರವರೆಗೆ 66/11 ಕೆ.ವಿ ಎಫ್.ಟಿ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ ವತಿಯಿಂದ ಬ್ಯಾಂಕ್-1 ಬ್ರೇಕರ್‌ಗೆ ಸಂಪರ್ಕಗೊoಡಿರುವ ಫೀಡರ್‌ಗಳ ಬ್ರೇಕರ್ ಬದಲಾವಣೆ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು, ತಾಂತ್ರಿಕ ಕಾರಣಗಳಿಂದ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯವಾಗಲಿರುವ ಮುಖ್ಯ ಪ್ರದೇಶಗಳು: ಸುಭಾಷ್‌ನಗರ, ಕೆಸರೆ 1ನೇ, 2ನೇ ಹಾಗೂ 3ನೇ ಹಂತ, ನ.ರಾ ಮೊಹಲ್ಲಾ, ಗಾಂಧಿನಗರ, ಮೊಹಮ್ಮದ್ ಸೇಠ್ ಬ್ಲಾಕ್, ವೀರನಗೆರೆ, ಉದಯಗಿರಿ, ಬನ್ನಿಮಂಟಪ, ನೆಲ್ಸನ್ ಮಂಡೇಲಾ ರಸ್ತೆ, ಎಲ್.ಐ.ಸಿ, ಹೈವೆ ವೃತ್ತ, ತಿಲಕ್‌ನಗರ, ಉಮ್ಮರ್ ಖಾಯಂ ರಸ್ತೆ, ನ್ಯೂ ಸಯ್ಯಾಜಿ ರಾವ್ ರಸ್ತೆ, ರಾಜೇಂದ್ರನಗರ, ಮೇದರ್ ಬ್ಲಾಕ್, ಬಂಬೂ ಬಜಾರ್, ಲಯನ್ಸ್ ಕ್ಲಬ್, ಫರೂಕೀ ಡೆಂಟಲ್ ಕಾಲೇಜು, ಜೈಲ್ ವಸತಿ ಗೃಹ, ಐ.ಟಿ.ಐ ಕಾಲೇಜು, ಭಾವನಾ ಮಾರ್ಬಲ್ ರಸ್ತೆ, ‘ಎ’ ಬಡಾವಣೆ, ಬಿ.ಬಿ ಕೇರಿ, ಬಿ.ಟಿ ಮಿಲ್ ರಸ್ತೆ, ಈದ್ಗ ಮೈದಾನ, ಕಬೀರ್ ಮಠ, ಆನೆಗುಂದಿ ರಸ್ತೆ, ಹನುಮಂತನಗರ, ಕೆ.ಎಸ್.ಆರ್.ಟಿ.ಸಿ, ಎಸ್.ಎಸ್ ನಗರ, ಕಾವೇರಿ ನಗರ, ಸಿದ್ದಿಖಿ ನಗರ, ಬನ್ನಿಮಂಟಪ ‘ಸಿ’ ಬಡಾವಣೆ ಸುತ್ತ-ಮುತ್ತಲಿನ ಪ್ರದೇಶಗಳ ಗ್ರಾಹಕರಿಗೆ ಈ ಮೇಲಿನ ದಿನಗಳಲ್ಲಿ ಪರ್ಯಾಯ ವಿದ್ಯುತ್ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೂ ಯಾವುದೇ ತಾಂತ್ರಿಕ ಕಾರಣಗಳಿಂದ ವಿದ್ಯುತ್ ಅಡಚಣೆ ಉಂಟಾದಲ್ಲಿ ಸಾರ್ವಜನಿಕರು ಮತ್ತು ಕೈಗಾರಿಕೋದ್ಯಮಿಗಳು ಸಹಕರಿಸಬೇಕೆಂದು ನ.ರಾ.ಮೊಹಲ್ಲಾ ವಿಭಾಗದ ಚಾ.ವಿ.ಸ.ನಿ.ನಿ.ಯ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular