Friday, April 4, 2025
Google search engine

Homeಬ್ರೇಕಿಂಗ್ ನ್ಯೂಸ್ಇತಿಹಾಸ ತಿರುಚಿ ಬರೆಯಲಾಗುತ್ತಿದೆ: ಹಿರಿಯ ರಂಗ ನಿದೇರ್ಶಕ ಪ್ರೊ.ಎಸ್.ಆರ್.ರಮೇಶ್

ಇತಿಹಾಸ ತಿರುಚಿ ಬರೆಯಲಾಗುತ್ತಿದೆ: ಹಿರಿಯ ರಂಗ ನಿದೇರ್ಶಕ ಪ್ರೊ.ಎಸ್.ಆರ್.ರಮೇಶ್

ಮೈಸೂರು: ಇತಿಹಾಸ ತಿರುಚಿ ಬರೆಯುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಹಿರಿಯ ರಂಗ ನಿದೇರ್ಶಕ ಪ್ರೊ.ಎಸ್.ಆರ್.ರಮೇಶ್ ಕಳವಳ ವ್ಯಕ್ತಪಡಿಸಿದರು.
ಕಲಾಮಂದಿರದ ಕಿರು ರಂಗಮಂದಿರದಲ್ಲಿ ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿ ಸೇವಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿರುವ ೨೫ ದಿನಗಳ ರಂಗಭೂಮಿ ಮತ್ತು ಜಾನಪದ ಕಲಾ ಪ್ರಕಾರಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ನಾಟಕದ ಹೆಸರಿನಲ್ಲಿ ನಡೆಯದೇ ಇರುವ ಇತಿಹಾಸವನ್ನು ನಡೆದಿದೆ ಎಂದು ಸುಳ್ಳು ಪ್ರಚಾರದ ಮೂಲಕ ಜನರಲ್ಲಿ ಬಿತ್ತುವ ಕೆಲಸ ರಂಗಾಯಣದಲ್ಲೇ ಈಚೆಗೆ ನಡೆಯಿತು. ಆತನ ಹೆಸರಿನಲ್ಲಿ ಸಾಕಷ್ಟು ಲಾವಣಿ ರಚನೆಗೊಂಡಿವೆ. ಇವ್ಯಾವುದು ಯಾವುದೇ ಆಪೇಕ್ಷೆ ಇಲ್ಲದೇ ರಚಿಸುವಂತಹ ಲಾವಣಿಗಳು. ಕೆಲವರು ಅದನ್ನು ಪುಂಕಾನು ಪುಂಕವಾಗಿ ರಚಿಸಿ ಇತಿಹಾಸವನ್ನೇ ತಿರುಚುವ ಕೆಲಸ ಮಾಡುತಿದ್ದಾರೆ ಎಂದು ಬೇಸರ ಹೊರಹಾಕಿದರು.
ಇತ್ತೀಚಿನ ಕಾಲದಲ್ಲಿ ರಂಗಭೂಮಿಯಲ್ಲಿ ಸಹೃದಯಿಗಳನ್ನು ಸೇರಿಸಿಕೊಳ್ಳುವುದೇ ಅಪರೂಪವಾಗಿದೆ. ಭಿನ್ನ ಆಲೋಚನೆಗಳು ಇರುವ ಅನೇಕರನ್ನು ಸೇರಿಸಿಕೊಂಡು ಸಮಾನ ಮನಸ್ಕ ಚಿಂತನೆಗೆ ತರುವುದು ಉತ್ತಮ ಕೆಲಸ. ಇಂತಹ ಒಳ್ಳೆಯ ಕೆಲಸಗಳಿಗೆ ಬೆಂಬಲ ನೀಡಬೇಕಿರುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.
ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ಮಾತ್ರ ನಮಗೆ ಮಾತಿನ ಮಹತ್ವ ಎಂತಹದ್ದು ಎಂದು ನಮಗೆ ಗೊತ್ತಾಗುತ್ತದೆ. ನಮ್ಮ ಆಲೋಚನೆಗಳನ್ನು ಅಭಿವ್ಯಕ್ತಗೊಳಿಸಲು ಸಾಧವಾಗದೇ ಇರುವಾಗ ನಾವು ಬದುಕುತ್ತಿರುವ ಸಮಾಜದ ಬಗ್ಗೆ ಅರಿವಾಗುತ್ತದೆ. ನಮ್ಮ ಆಲೋಚನೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ಸ್ವಾತಂತ್ರ್ಯ ಸಮಾಜದಲ್ಲಿ ಇಲ್ಲದೇ ಇರುವಾಗ ಜಾನಪದ ಕಲೆಗಳು ಹೆಚ್ಚು ಮಹತ್ವ ಪದೆಕೊಳ್ಳುತ್ತವೆ ಎಂದು ಹೇಳಿದರು.
ಜಾನಪದ ಕಲೆಗಳು ಮನುಷ್ಯ ಕಂಡುಕೊಂಡಿರುವ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ. ಅದು ಸಮಾಜದಲ್ಲಿ ಒಂದು ಹೆಣ್ಣು ಮಗಳು ತಾನು ಅನುಭವಿಸುವ ವ್ಯಥೆ ಮತ್ತು ವೈರುದ್ಯಗಳಾಗಬಹುದು ಅಥವಾ ಒಬ್ಬ ಹುಡುಗ ಪ್ರೀತಿ ಪಡೆದುಕೊಳ್ಳಲು ಸಾಧವಾಗದೇ ಇರುವಂತಹ ಸನ್ನಿವೇಶವಾಗಿರಬಹುದು ಎಂದು ಹೇಳಿದರು.
ಮಹರಾಜ ಕಾಲೇಜಿನ ಜಾನಪದ ವಿಭಾಗದ ಮುಖ್ಯಸ್ಥೆ ಡಾ.ಎಚ್.ಆರ್.ಚೇತನ ಮಾತನಾಡಿ, ಮನುಷ್ಯ ಬೆಳವಣಿಗೆಯೊಂದಿಗೆ ಜಾನಪದ ಕಲೆಗಳು ತಮ್ಮದೇ ಆದ ರೂಪ ಪಡೆದುಕೊಂಡಿವೆ. ಇವು ಮನುಷ್ಯನ ದುಃಖ, ದುಮ್ಮಾನ, ಅಭಿವ್ಯಕ್ತಿ, ಆಲೋಚನೆ ಎಲ್ಲವನ್ನೂ ಹಿಡಿದಿಟ್ಟಿದೆ ಎಂದು ಹೇಳಿದರು.
ಜಾನಪದ ಕಲೆಗಳು ಧಾರ್ಮಿಕ ಹಿನ್ನಲೆಯಿಂದ ಬೆಳೆದು ಬಂದಿವೆ. ಒಂದು ಕಾಲದಲ್ಲಿ ಯಾವುದೇ ಶಿಕ್ಷಣವಿಲ್ಲದೇ ನಮ್ಮ ನಂಬಿಕೆ, ಸಂಪ್ರದಾಯ, ನಡವಳಿಕೆಗಳು, ಆಹಾರ ಪದ್ಧತಿಗಳು ಕೇವಲ ಮಾತು, ಅಭಿನಯ ಮೂಲಕವೇ ಮುಂದುವರಿದುಕೊಂಡು ಬಂದಿವೆ. ಈ ಎಲ್ಲಾ ಪರಂಪರೆಯನ್ನು ನಮ್ಮ ಜಾನಪದ ಕಲೆಗಳು ಮುಂದಿನ ತಲೆ ಮಾರುಗಳಿಗೆ ವರ್ಗಾಯಿಸುತ್ತಾ ಬಂದಿದ್ದು, ಅಕ್ಷರ ಜ್ಞಾನ ಬೆಳೆದಂತೆ ಇವುಗಳನ್ನು ದಾಖಲಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದ ಮೈಮ್ ರಮೇಶ್ ಹಾಗೂ ಶಿಬಿರಾರ್ಥಿಗಳು ಇದ್ದರು.

RELATED ARTICLES
- Advertisment -
Google search engine

Most Popular