ಹುಣಸೂರು. ಜೂನ್ ೦೪. ಒಡಿಶಾ ರೈಲು ದುರಂತದಿಂದಾಗಿ ತೊಂದರೆಗೆ ಸಿಲುಕಿದ್ದ ವಾಲಿಬಾಲ್ ಆಟಗಾರರು ತಾಯ್ತಾಡಿಗೆ ವಾಪಸ್ ಬಂದಿದ್ದು ತಮ್ಮನ್ನು ಕರೆ ತರಲು ಸರ್ಕಾರಕ್ಕೆ ಮಾಹಿತಿ ನೀಡಿ ನಮ್ಮ ಸಂಕ?ಕ್ಕೆ ಸ್ಪಂದಿಸಿದ ಹುಣಸೂರಿನ ಕ್ರೀಡಾ ಪ್ರೇಮಿ, ಮಾಜಿ ಶಾಸಕ ಎಚ್ ಪಿ ಮಂಜುನಾಥ್ ರವರಿಗೆ ವಾಲಿಬಾಲ್ ಕ್ರೀಡಾಪಟ್ಟುಗಳು
ಮೈಸೂರಿನ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು.
ಒಡಿಶಾ ರೈಲು ದುರಂತದಿಂದ ರೈಲುಗಳ ಸಂಚಾರಗಳಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳಕ್ಕೆ ನ್ಯಾ?ನಲ್ ವಾಲಿಬಾಲ್ ಚಾಂಪಿಯನ್ ಶಿಪ್ಗೆ ತೆರಳಿದ್ದ ಕರ್ನಾಟಕದ ೧೬ ವ?ದೊಳಗಿನ ಬಾಲಕರ ಹಾಗೂ ಬಾಲಕಿಯರ ತಂಡದ ಆಟಗಾರರು ಹಾಗೂ ಕೋಚ್‌ಗಳು ಹೌರಾದಿಂದ ಬೆಂಗಳೂರಿಗೆ ವಾಪಸ್ ಬರಲಾಗದೆ ಪರದಾಡಿದ್ದರು. ಈ ಬಗ್ಗೆ ಹುಣಸೂರಿನ ಮಾಜಿ ಶಾಸಕ ಹಾಗೂಕ್ರೀಡಾಪ್ರೇಮಿ ಎಚ್ ಪಿ ಮಂಜುನಾಥ್ ಕ್ರೀಡಾಪಟ್ಟುಗಳ ಸಂಕ?ದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಹಿತಿ ನೀಡಿದ್ದು, ಕೂಡಲೇ ಕ್ರೀಡಾಪಟುಗಳ ಸಂಕ?ಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಸರ್ಕಾರ ಕ್ರೀಡಾಪಟುಗಳು ಹಾಗೂ ಕೋಚ್‌ಗಳನ್ನು ವಿಮಾನದ ಮೂಲಕ ರಾಜ್ಯಕ್ಕೆ ಕರೆತಂದಿದೆ.
ಈ ವೇಳೆ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ಮಾತನಾಡಿ ನಮ್ಮ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಕ್ರೀಡಾಪಟುಗಳು ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಸಂಕ?ದಲ್ಲಿರುವುದನ್ನು ಗಮನಕ್ಕೆ ಬಂದ ಕೂಡಲೇ ನಾನು ದೂರವಾಣಿ ಮೂಲಕ ಕ್ರೀಡಾಪಟುಗಳಿಗೆ ಆತ್ಮಸ್ಥೈರ್ಯ ತುಂಬಿ ಬಸ್ ಮೂಲಕ ಪ್ರಯಾಣ ಬೆಳೆಸಿ ಎಂದು ಅದಕ್ಕೆ ತಗಲುಗವ ಖರ್ಚುವೆಚ್ಚವನ್ನು ನಾನು ಭರಿಸುತ್ತೇನೆ ಎಂದು ತಿಳಿಸಿ ಕೂಡಲೇ ಮುಖ್ಯಮಂತ್ರಿಗಳಿಗೆ ಮಾಹಿತಿ ತಿಳಿಸಿದೆ. ಮುಖ್ಯಮಂತ್ರಿಗಳು ಕೂಡಲೇ ಕಾರ್ಮಿಕ ಇಲಾಖೆ ಸಚಿವ ಸಂತೋ? ಲಾಡ್ ರವರನ್ನು ಕಳುಹಿಸಿ ವಿಮಾನದ ಮೂಲಕ ಕ್ರೀಡಾಪಟುಗಳನ್ನು ತಾಯ್ನಾಡಿಗೆ ಕರೆತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆಂದರು.
ಈ ವೇಳೆ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ರವರ ಮೈಸೂರಿನ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕೋಚ್ ಮಮತಾ ಶೆಟ್ಟಿ, “ದೇವರ ದಯೆಯಿಂದ ನಾವು ಬಚಾವಾಗಿದ್ದೇವೆ. ಚಾಂಪಿಯನ್ ಶಿಪ್ ಮುಗಿಸಿ ಬಾಲಕ ಹಾಗೂ ಬಾಲಕಿಯರ ಎರಡು ತಂಡಗಳು ಬೆಂಗಳೂರಿಗೆ ಆಗಮಿಸುತ್ತಿದ್ದವು. ಬಾಲಕರ ತಂಡಕ್ಕೆ ಯಶವಂತಪುರ ಹೌರಾ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಕೆಟ್ ಬುಕ್ ಆಗಿತ್ತು. ಆದರೆ ಬಾಲಕಿಯರ ತಂಡಕ್ಕೆ ರಿಸರ್ವೇ?ನ್ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಅಪಘಾತಕ್ಕೀಡಾದ ಕೋರಮಂಡಲ್ ಎಕ್ಸ್ ಪ್ರೆಸ್‌ನಲ್ಲಿ ಚೆನೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬರುವ ತೀರ್ಮಾನ ಮಾಡಿದ್ದೇವು. ಆದರೆ ಕೊನೆಯ ಕ್ಷಣದಲ್ಲಿ ಬೇರೆ ಬೇರೆ ಟ್ರೈನ್ ಬೇಡ, ಎರಡು ತಂಡಗಳು ಒಂದೇ ಟ್ರೈನ್‌ನಲ್ಲಿ ಹೋಗೋಣ ಅಂತ ನಿರ್ಧಾರ ಮಾಡಿದೆವು. ಇದರಿಂದ ನಾವು ಕೋರ್ ಮಂಡಲ್ ಟ್ರೈನ್‌ನಲ್ಲಿ ಪ್ರಯಾಣ ಮಾಡಲಿಲ್ಲ. ಹೀಗಾಗಿ ಅದೃ?ವಶಾತ್ ನಾವು ಬದುಕಿ ಬಂದೆವು’ ಎಂದು ಘಟನೆಯ ಬಗ್ಗೆ ಮಾಹಿತಿ ನೀಡಿ ನಿರಾಳರಾದರು.
ಉಪಹಾರ ವ್ಯವಸ್ಥೆ: ಮಾಜಿ ಶಾಸಕ ಎಚ್ ಪಿ ಮಂಜುನಾಥ್ ತಮ್ಮ ಮನೆಯಲ್ಲಿ ಭೇಟಿ ಮಾಡಿದ ಎಲ್ಲಾ ಕ್ರೀಡಾಪಟುಗಳಿಗೆ ಉಪಹಾರ ವ್ಯವಸ್ಥೆ ಮಾಡಿದ್ದರು.
ಮುಖ್ಯಮಂತ್ರಿಗಳಿಗೆ ಧನ್ಯವಾದ: ರಾಜ್ಯಕ್ಕೆ ಆಗಮಿಸಲು ಪರಿತಪಿಸುತ್ತಿದ್ದ ಕರ್ನಾಟಕದ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ತಂಡಕ್ಕೆ ಕಾರ್ಮಿಕ ಸಚಿವ ಸಂತೋ? ಲಾಡ್ ನೆರವಾಗಿ ತಂಡವು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಆಗಲು ಸಹಕರಿಸಿದ್ದರು. ತಮ್ಮ ನೆರವಿಗೆ ಧಾವಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾರ್ಮಿಕ ಸಚಿವ ಲಾಡ್ ಹಾಗೂ ಸರ್ಕಾರಕ್ಕೆ ಮಾಹಿತಿ ಸಹಕರಿಸಿದ ಹುಣಸೂರಿನ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ಹಾಗೂ ಅಧಿಕಾರಿಗಳಿಗೆ ಕ್ರೀಡಾಪಟುಗಳು ಧನ್ಯವಾದ ಅರ್ಪಿಸಿದ್ದಾರೆ.