ಸಾಲಿಗ್ರಾಮ: ತಾಲೂಕಿನ ಕರ್ಪೂರವಳ್ಳಿ ಶ್ರೀ ಜಂಗಮ ಮಠಕ್ಕೆ ಬಾಳೆಹೊನ್ನೂರಿನ ಶ್ರೀ ವೀರ ಸಿಂಹಾಸನ ಮಹಾ ಪೀಠದ ಶ್ರೀಮದ್ ರಂಭಾಪುರಿ ವೀರಸಿಂಹಾಸನಾದೀಶ್ವರ ಶ್ರೀ ಡಾ.ವೀರ ಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಶ್ರೀ ಜಂಗಮ ಮಠದಲ್ಲಿ ವಿವಿಧ ಪೂಜಾ ಕಾರ್ಯಗಳನ್ನು ಕರ್ಪೂರವಳ್ಳಿ ಶ್ರೀ ಜಂಗಮಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಮಾಡಲಾಯಿತು.
ಶ್ರೀ ರಂಭಾಪುರಿ ಸ್ವಾಮೀಜಿ ಹಾಗೂ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳನ್ನು ಶಾಸಕ ಡಿ.ರವಿಶಂಕರ್ ಅಭಿನಂದಿಸಿದರು.
ಶ್ರೀ ಜಂಗಮ ಮಠದಲ್ಲಿ ಶ್ರೀ ರಂಭಾಪುರಿ ಸ್ವಾಮೀಜಿಗಳು ಶಾಸಕ ಡಿ.ರವಿಶಂಕರ್, ಪತ್ನಿ ಸುನಿತಾ ರವಿಶಂಕರ್, ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡ ಸ್ವಾಮಿಗೌಡ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ
ಸಿ.ಪಿ.ರಮೇಶ್, ಜಿ.ಪಂ. ಮಾಜಿ ಸದಸ್ಯೆ ಪುಷ್ಪಲತಾ ರಮೇಶ್ ಅವರುಗಳನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕೆಂಪರಾಜು, ತಾ.ಪಂ. ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆಡಗ ನಟರಾಜ್, ಸಾಲಿಗ್ರಾಮ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ
ಗಾಯನಹಳ್ಳಿ ಕುಮಾರಸ್ವಾಮಿ, ಮುಖಂಡರುಗಳಾದ
ಎಲ್.ಪಿ.ರವಿಕುಮಾರ್, ಜಿ.ಎಸ್.ನಟರಾಜ್, ರಮೇಶ್, ಚಂದ್ರಶೇಖರ್, ಶಿವಕುಮಾರ್, ಗಣೇಶಶಾಸ್ತ್ರಿ, ಶಾಮಿಯಾನ ಮಂಜು, ಪ್ರಸನ್ನ, ಡಿಶ್ ರವಿ, ರಾಣಿ ಕುಮಾರ್, ದಿಲೀಪ್, ಚಂದು, ಲೋಕೇಶ್, ಸಂತೋಷ್, ಜಬೀರ್ ಖಾನ್, ಮುತ್ತರ್ ಪಾಷಾ, ಪ್ರೇಮಣ್ಣ, ಪ್ರಭಾಕರ್, ಗುಣಪಾಲ ಜೈನ್, ಕಂಠಿ ಕುಮಾರ್, ಮೈಕಲ್, ಮಿರ್ಲೆ ಹರೀಶ್, ವಸಂತ, ಶ್ರೀನಿವಾಸ್, ಮೂರ್ತಿ ಸೇರಿದಂತೆ ಹಲವರು ಇದ್ದರು.