Friday, April 4, 2025
Google search engine

HomeUncategorizedಕಲಬುರ್ಗಿಯ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಕಲಬುರ್ಗಿಯ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಕಲಬುರ್ಗಿ : ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಆಳಂದ ಬಳಿಯ ಲಾಡ್ಲೆ ಮಶಾಕ್ ದರ್ಗಾದಲ್ಲಿನ ರಾಘವಚೈತನ್ಯ ಶಿವಲಿಂಗದ ಪೂಜೆ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಶಿವಲಿಂಗ ಪೂಜೆಗೆ ಅನುಮತಿ ನೀಡುವಂತೆ ಹಿಂದೂ ಸಂಘಟನೆಗಳು ಕಲ್ಬುರ್ಗಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು ಇದೀಗ ಹಿಂದೂ ಸಂಘಟನೆಗಳಿಗೆ ಜಯ ಸಿಕ್ಕಿದ್ದು, ಶಿವಲಿಂಗ ಪೂಜೆಗೆ ಕಲಬುರ್ಗಿ ಹೈಕೋರ್ಟ್ ಇದೀಗ ಅನುಮತಿ ನೀಡಿದೆ.ಕಲ್ಬುರ್ಗಿ ಜಿಲ್ಲೆಯ ಆಳಂದ ಪಟ್ಟಣದ ಬಳಿ ಇರುವ ಲಾಡ್ಲೆ ಮಶಾಕ್ ದರ್ಗಾದಲ್ಲಿನ ರಾಘವಚೈತನ್ಯ ಶಿವಲಿಂಗದ ಪೂಜೆಗೆ ಇದೀಗ ಕಲ್ಬುರ್ಗಿ ಹೈಕೋರ್ಟ್ ಪೀಠ ಇದೀಗ ಅನುಮತಿ ನೀಡಿದೆ.ರಾಘವ ಚೈತನ್ಯ ಶಿವಲಿಂಗದ ಪೂಜೆಗೆ ಅನುಮತಿ ಕೇಳಿ ಹಿಂದೂ ಸಂಘಟನೆಗಳಿಂದ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಹಿಂದೂ ಸಂಘಟನೆಗಳಿಗೆ ಇದೀಗ ಕೊನೆಗೂ ಹೈಕೋರ್ಟ್ ನಲ್ಲಿ ಗೆಲುವು ಸಿಕ್ಕಿದೆ.

ನಾಳೆ ಮಧ್ಯಾಹ್ನ 3 ಗಂಟೆ ಯಿಂದ ಸಂಜೆ 6 ಗಂಟೆವರೆಗೆ ಪೂಜೆ ಸಲ್ಲಿಸಲು ಹೈ ಕೋರ್ಟ್ ಅವಕಾಶ ನೀಡಿದೆ. ಈ ವೇಳೆ ಆಂದೋಲ ಸಿದ್ದಲಿಂಗ ಸ್ವಾಮೀಜಿಯನ್ನು ಹೊರತುಪಡಿಸಿ ಉಳಿದವರಿಗೆ ಪೂಜೆಗೆ ಅವಕಾಶ ನೀಡಲಾಗಿದೆ ಶಿವಲಿಂಗ ಪೂಜೆಗೆ ಹೈಕೋರ್ಟಿನಿಂದ ಇದೀಗ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಹಿಂದೂ ಸಂಘಟನೆಗಳಿಗೆ ಸಂತಸ ತಂದಿದೆ.

RELATED ARTICLES
- Advertisment -
Google search engine

Most Popular