Friday, March 20, 2026
Google search engine

Homeರಾಜಕೀಯಕಲ್ಯಾಣ ಕರ್ನಾಟಕ ಹಿಂದುಳಿದಿದೆ: ಬಿಜೆಪಿ ಆರೋಪ

ಕಲ್ಯಾಣ ಕರ್ನಾಟಕ ಹಿಂದುಳಿದಿದೆ: ಬಿಜೆಪಿ ಆರೋಪ

ಕಲಬುರಗಿ : ಸಚಿವ ಪ್ರಿಯಾಂಕ್ ಖರ್ಗೆ ಮನಸ್ಸು ಮಾಡಿದರೆ ಕಲಬುರಗಿ ಏರ್‌ಪೋರ್ಟ್ ಆರಂಭವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು.

ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಬಜೆಟ್‌ಗೆ ಆಡಳಿತ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿದೆ. ರಾಜ್ಯದ ಜನರ ಭರವಸೆ ನುಚ್ಚು ನೂರು ಮಾಡಿದೆ. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ. ಸಿದ್ದರಾಮಯ್ಯ ಬಜೆಟ್ ದೂರದೃಷ್ಟಿ ಇಲ್ಲದ ಬಜೆಟ್ ಎಂದು ಟೀಕಿಸಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಮೋದಿ ಬಗ್ಗೆ ಟೀಕೆ ಮಾಡುತ್ತಾರೆ. ಆದರೆ, ಅವರ ಹಿಡಿತದಲ್ಲಿರುವ ಭಾಗ ಹಿಂದುಳಿದಿದೆ. ಸಚಿವ ಪ್ರಿಯಾಂಕ್ ಖರ್ಗೆ ಅಂತರರಾಷ್ಟ್ರೀಯ ಹಾಗೂ ದೇಶದ ಬಗ್ಗೆ ಮಾತನಾಡುವುದನ್ನು ಬಿಡಲಿ. ಈ ಭಾಗದ ಜನ ಅಭಿವೃದ್ಧಿ ಬಗ್ಗೆ ಚಿಂತಿಸಬೇಕಾಗಿದೆ ಎಂದು ಟಾಂಗ್ ಕೊಟ್ಟರು.

ಕಲಬುರಗಿ ಏರ್ಪೋರ್ಟ್ ಬಂದ್ ವಿಚಾರವಾಗಿ ಮಾತನಾಡಿ, ಪಕ್ಕದ ಬೀದರ್ ಕ್ಷೇತ್ರದಲ್ಲಿ ಉಸ್ತುವಾರಿ ಸಚಿವರು ಮನಸ್ಸು ಮಾಡಿ 13 ಕೋಟಿ ಖರ್ಚು ಮಾಡಿ ಆರಂಭಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಮನಸ್ಸು ಮಾಡಿದ್ರೆ ಕಲಬುರಗಿ ಏರ್ಪೋರ್ಟ್ ಆರಂಭವಾಗುತ್ತದೆ. ಆದರೆ ಪ್ರಿಯಾಂಕ್ ಖರ್ಗೆ ಅವರಿಗೆ ಮನಸ್ಸು ಇಲ್ಲ ಎಂದು ಟೀಕಿಸಿದರು. 

RELATED ARTICLES
- Advertisment -
Google search engine

Most Popular