ಜೂ.೧೧ರಂದು ಈವಿವಿ ೩೦ನೇ ಸೇವಾ ಕೇಂದ್ರದ ಉದ್ಘಾಟನೆ
ಮೈಸೂರು,ಜೂ.೦೮:- ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ೩೦ನೇ ನೂತನ ಸೇವಾ ಕೇಂದ್ರದ ಸಮಾರಂಭವನ್ನು ಜೂ.೧೧ರಂದು ಬೆಳಿಗ್ಗೆ ೧೦.೩೦ಕ್ಕೆ ಜಯಲಕ್ಷ್ಮೀಪುರಂ ಶ್ರೀ ರಾಘವೇಂದ್ರಸ್ವಾಮಿ ರಸ್ತೆ, ನಂ.೧೬೪, ೩ನೇ ಮುಖ್ಯ ರಸ್ತೆಯಲ್ಲಿ ಆಯೋಜಿಸಲಾಗಿದೆ.
ಮೈಸೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಆಗಮಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಕೈಗಾರಿಕೋದ್ಯಮಿ ಡಾ.ಎಂ.ಜಗನ್ನಾಥ ಶೆಣೈ, ಮಹಾಜನ ಎಜುಕೇಶನ್ ಸೊಸೈಟಿ ಗೌರವ ಕಾರ್ಯದರ್ಶಿ ವಿಜಯಲಕ್ಷ್ಮಿ ಭಾಗವತ್‌ರವರು ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಯಾಗಿ ಜೆಎಸ್‌ಎಸ್ ಆಸ್ಪತ್ರೆಯ ಕ್ಲಿನಿಕಲ್ ಕಾರ್ಡಿಯಾಲಾಜಿಸ್ಟ್ ಡಾ.ಶಿಲ್ಪ ಅವರೇಬೀಳ್ ಪಾಲ್ಗೊಳ್ಳಲಿದ್ದು, ಸಮಾರಂಭದ ಸಾನ್ನಿಧ್ಯವನ್ನು ಈವಿವಿ ಮೈಸೂರು ಉಪ ವಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿಕೆ ಲಕ್ಷ್ಮೀಜಿಯವರು ವಹಿಸಲಿದ್ದಾರೆ ಎಂದು ಸೇವಾ ಕೇಂದ್ರದ ಸಂಚಾಲಕಿ ಬಿಕೆ ಜಯಂತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.