ಗುಂಡ್ಲುಪೇಟೆ: ಅಕ್ರಮವಾಗಿ ಹಸುವೊಂದನ್ನು ಕೇರಳಕ್ಕೆ ಪಿಕ್ ಅಪ್ ವಾಹನದಲ್ಲಿ ಸಾಗಣೆ ಮಾಡುತ್ತಿದ್ದ ವೇಳೆ ಗುಂಡ್ಲುಪೇಟೆ ಠಾಣೆ ಪೆÇಲೀಸರು ದಾಳಿ ನಡೆಸಿ ಜಾನುವಾರು ಸಮೇತ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ತಾಲೂಕಿನ ಮದ್ದೂರು ಚೆಕ್ ಪೆÇೀಸ್ಟ್ ಬಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಕೇರಳ ಮೂಲದ ಹರಿಕುಮಾರ್ ಮತ್ತು ಬಾಲು ಬಂಧಿತರು. ಇವರು ಅಕ್ರಮವಾಗಿ ಹಸುವನ್ನು ಪಿಕ್ ಅಪ್ ಮೂಲಕ ಕೇರಳ ರಾಜ್ಯಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೆÇಲೀಸ್ ಇನ್ಸ್ ಪೆಕ್ಟರ್ ಮುದ್ದುರಾಜ್ ನೇತೃತ್ವದಲ್ಲಿ ದಾಳಿ ನಡೆಸಿ ವಾಹನ ಮತ್ತು ಜಾನುವಾರು ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಜಾನುವಾರನ್ನು ಕನಕಗಿರಿಯ ಪಿಂಜರಾ ಪೆÇೀಲ್‍ಗೆ ಕಳುಹಿಸಲಾಗಿದೆ.
ಇನ್ನೂ ಈ ಕುರಿತು ಗುಂಡ್ಲುಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಪೆÇಲೀಸ್ ಪೇದೆಗಳಾದ ಶಶಿಧರ್ ಮೂರ್ತಿ, ಕುಮಾರ್, ಕೃಷ್ಣ ಭಾಗವಹಿಸಿದ್ದರು.
ಚೆಕ್ ಪೋಸ್ಟ್ ನಲ್ಲಿ ಕಟ್ಟುನಿಟ್ಟಿನ ತಪಾಸಣೆ ಇಲ್ಲ: ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಗಡಿ ಮೂಲೆಹೊಳೆ ಹಾಗು ಕೆಕ್ಕನಹಳ್ಳ ಚೆಕ್ ಪೋಸ್ಟ್‍ಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗು ಪೊಲೀಸರು ವಾಹನಗಳನ್ನು ಸರಿಯಾದ ರೀತಿಯಲ್ಲಿ ತಪಾಸಣೆ ಮಾಡದ ಹಿನ್ನೆಲೆ ಜಾನುವಾರು ಸೇರಿದಂತೆ ಕೆಂಪುಮಣ್ಣು, ಕಲ್ಲುಗಳ ಸಹ ವ್ಯಾಪಕವಾಗಿ ಹೋಗುತ್ತಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಜಾನುವಾರು ಸೇರಿದಂತೆ ಬಿಳಿ ಮತ್ತು ಕರಿಕಲ್ಲು ಕೆಲ ಅಧಿಕಾರಿಗಳ ಸೋಗಿನಲ್ಲಿಯೇ ಕೇರಳ ಮತ್ತು ತಮಿಳುನಾಡಿಗೆ ರಾತ್ರಿ ವೇಳೆ ಹೋಗುತ್ತಿದೆ. ಇದರಿಂದ ರಾಜ್ಯದ ಸಂಪತ್ತು ಪಕ್ಕದ ರಾಜ್ಯದ ಪಾಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಈ ಕೂಡಲೇ ಗಮನ ಹರಿಸಿ ಚೆಕ್ ಪೋಸ್ಟ್‍ಗಳನ್ನು ಕಟ್ಟುನಿಟ್ಟಿನ ತಪಾಸಣೆ ನಡೆಸಿ ಕಾನೂನು ಬಾಹೀರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.