ಚಾಮರಾಜನಗರ: ಕೊಳ್ಳೇಗಾಲ ನಗರಸಭೆ ವತಿಯಿಂದ ಅನು??ಠನಗೊಳಿಸುತ್ತಿರುವ ವಿವಿಧ ನಗರ ವಸತಿ ಯೋಜನೆಗಳಡಿ ಇದುವರೆಗೂ ಮನೆ ನಿರ್ಮಿಸಿಕೊಳ್ಳದೇ ಇರುವ ಫಲಾನುಭವಿಗಳು ಮನೆ ನಿರ್ಮಿಸಲು ಇಚ್ಚಿಸಿದ್ದಲ್ಲಿ ಸಹಾಯಧನ ನೀಡಲಾಗುತ್ತದೆ.
ಡಾ. ಬಿ. ಆರ್. ಅಂಬೇಡ್ಕರ್ ನಿವಾಸ್ ಯೋಜನೆ (ನಗರ) ಹಾಗೂ ವಾಜಪೇಯಿ ನಗರ ವಸತಿ ಯೋಜನೆಯಡಿ ೨೦೧೫-೧೬ನೇ ಸಾಲಿನಿಂದ ೨೦೧೭-೧೮ನೇ ಸಾಲಿನವರೆಗೆ ಆಯ್ಕೆಯಾಗಿರುವ ಫಲಾನುಭವಿಗಳಲ್ಲಿ ಇದುವರೆವಿಗೂ ಹಲವಾರು ಫಲಾನುಭವಿಗಳು ಮನೆಯನ್ನು ನಿರ್ಮಿಸಿಕೊಂಡಿರುವುದಿಲ್ಲ. ಈಗಾಗಲೇ ಫಲಾನುಭವಿಗಳ ಮನೆಗೆ ಭೇಟಿ ನೀಡಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಿ ಹಂತವಾರು ಜಿಪಿಎಸ್ ಮಾಡಿಸುವಂತೆ ತಿಳಿಸಲಾಗಿತ್ತು. ಆದಾಗ್ಯೂ ಬಹುತೇಕ ಫಲಾನುಭವಿಗಳು ಮನೆ ನಿರ್ಮಾಣ ಮಾಡಿರುವುದಿಲ್ಲ. ಫಲಾನುಭವಿಗಳು ಮನೆ ನಿರ್ಮಿಸಲು ಇಚ್ಚಿಸಿದ್ದಲ್ಲಿ ಜೂನ್ ೬ರೊಳಗೆ ನಗರಸಭೆಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಮಾತ್ರ ಸಹಾಯಧನ ನೀಡಲಾಗುವುದು. ಇಲ್ಲದಿದ್ದಲ್ಲಿ ಫಲಾನುಭವಿ ಆಯ್ಕೆಯನ್ನು ರದ್ದು ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಗರಸಭೆಯ ಯೋಜನಾ ಶಾಖೆಗೆ ಭೇಟಿ ನೀಡುವಂತೆ ಕೊಳ್ಳೇಗಾಲ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.