ಚಾಮರಾಜನಗರ : ನಮ್ಮ ಕ್ಷೇತ್ರದಲ್ಲಿ ಶಿಕ್ಷಣ,ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ನಗರದಲ್ಲಿ ನಡೆದ ಸಂವಾದದಲ್ಲಿ ತಿಳಿಸಿದರು. ನಂತರ ಅವರು ಮಾತನಾಡಿ,ನಾನು ನಿರಂತರವಾಗಿ ನಾಲ್ಕನೇ ಬಾರಿ ಯಾವುದೇ ಪಕ್ಷಕ್ಕೆ ಹೋಗದೆ ಒಂದೇ ಪಕ್ಷದಲ್ಲಿದ್ದುಕೊಂಡು ಕಾಂಗ್ರೆಸ್ ಪಕ್ಷದಿಂದ ಗೆದ್ದಿರುತ್ತೇನೆ. ನಗರದಲ್ಲಿ ಮಹಿಳೆ ಕಾಲೇಜು,ಕುಡಿಯುವ ನೀರಿನ ವ್ಯವಸ್ಥೆ,ಒಳ ಚರಂಡಿ ವ್ಯವಸ್ಥೆಯ ನಿರ್ಮಾಣ,ಅಪೂರ್ಣ ಕಾಮಗಾರಿಗಳ ಪೂರ್ಣಗೊಳಿಸುವಿಕೆ,ಚಾಮರಾಜೇಶ್ವರ ದೇವಸ್ಥಾನ ರಿಪೇರಿ ಸೇರಿದಂತೆ ಕ್ಷೇತ್ರದ ಎಲ್ಲಾ ಕೆಲಸಗಳನ್ನು ತ್ವರಿತ ಗತಿಯಲ್ಲಿ ಮಾಡುತ್ತೇನೆ.ಕೊರೋನ ಸಮಯದಲ್ಲಿ ಆಕ್ಸಿಜನ್ ದುರಂತದಲ್ಲಿ ಸತ್ತ ೩೬ ಮಂದಿಗಗಳ ಕುಟುಂಬಕ್ಕೆ ಈಗಿನ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಹೇಳಿದಂತೆ ನಮ್ಮ ಸರ್ಕಾರದ ವತಿಯಿಂದ ಉದ್ಯೋಗ ಕೊಡಿಸುವ ಕೆಲಸವನ್ನು ಮಾಡುತ್ತೇನೆ.ನಗರದ ಸಿಮ್ಸ್ ಕಾಲೇಜಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಆವ್ಯಾಚ ಶಬ್ದಗಳಿಂದ ಮಾತನಾಡಿದ್ದ ಸಂಜೀವ್ ಅವರನ್ನು ನಮ್ಮ ಸರ್ಕಾರವು ತನಿಖೆಗಾಗಿ ನೇಮಕ ಮಾಡಿರುವ ಸಮಿತಿಯ ವರದಿ ಬಂದ ನಂತರ ಅವರಿಗೆ ಶಿಕ್ಷೆಯಾಗಲಿದೆ ಎಂದರು.ಪಕ್ಷದ ಹೈಕಮಾಂಡ್ ನನಗೆ ಒಂದು ವರ್ಷದ ನಂತರ ಸಚಿವ ಸ್ಥಾನ ಕೊಡುವುದಾಗಿ ಹೇಳಿದೆ ಆದ್ದರಿಂದ ಪ್ರಸ್ತುತ ನನಗೆ ಕೊಟ್ಟಿರುವ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ನಿರ್ವಹಿಸುತ್ತೇನೆ ಏಕೆಂದರೆ ಹೈಕಮಾಂಡ್ ತೀರ್ಮಾನವನ್ನು ಯಾರು ಮೀರುವಂತಿಲ್ಲ ಆದ್ದರಿಂದ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ಸ್ವೀಕರಿಸಲು ಸಿದ್ದನಿದ್ದೇನೆ ಎಂದರು.