ಚಾಮರಾಜನಗರ: ತಾಲೂಕಿನ ಗಡಿಯಂಚಿನಲ್ಲಿರುವ ಬಿಸಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುವುದಾಗಿ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬಿಸಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರು ಹಾಗೂ ಗ್ರಾ.ಪಂ. ಸಹಕಾರ ಸಂಘಗಳ ಪ್ರತಿನಿಧಿಗಳು ನೂತನ ಶಾಸಕರನ್ನು ಭೇಟಿಯಾಗಿ ಅಭಿನಂದಿಸಿದ ಸಂದರ್ಭದಲ್ಲಿ ಗ್ರಾಮಸ್ಥರ ಮನವಿಯನ್ನು ಆಲಿಸಿ ಅವರು ಮಾತನಾಡಿ ಬಿಸಲವಾಡಿ ಗ್ರಾಮ ಪಂಚಾಯಿತಿ ತಮಿಳುನಾಡು ಗಡಿ ಭಾಗದಲ್ಲಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಇದರ ವ್ಯಾಪ್ತಿಗೆ ಬಿಸಲವಾಡಿ, ಬಂದಿಗೌಡನಹಳ್ಳಿ, ಕೋಡಿಉಗನೆ, ಬೇವಿನತಾಳಪುರ, ಬಿ.ಜೆ.ಕಾಲೋನಿಗಳು ಸೇರ್ಪಡಯಾಗಿದ್ದು, ಎಲ್ಲಾ ಗ್ರಾಮಗಳ ಸಂಪರ್ಕ ರಸ್ತೆ ಅಭಿವೃದ್ದಿ, ಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ, ಚರಂಡಿ ಸೌಲಭ್ಯ ಸೇರಿದಂತೆ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಸಕಾಲದಲ್ಲಿ ರೈತರಿಗೆ ಸಾಲಸೌಲಭ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರದಿಂದ ವಿಶೇಷ ಯೋಜನೆಯನ್ನು ರೂಪಿಸಿ. ಹೆಚ್ಚಿನ ಅನುದಾನವನ್ನು ಕೊಡಿಸುವ ಜವಾಬ್ಧಾರಿ ನನ್ನ ಮೇಲಿದೆ. ಈ ಗ್ರಾಮಗಳ ಅಭಿವೃದ್ದಿಗೆ ಹೆಚ್ಚಿನ ಅದ್ಯತೆ ನೀಡುವುದಾಗಿ ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ಗ್ರಾಮ ಪಂಚಾಯಿತಿಯ ಪರವಾಗಿ ನೂತನ ಶಾಸಕರನ್ನು ಅಭಿನಂದಿಸಿ ಮಾತನಾಡಿ ಬಿಸಲವಾಡಿ ಗ್ರಾಮ ಪಂಚಾಯಿತಿ ತಮ್ಮ ಗೆಲುವಿಗೆ ಸಂಪೂರ್ಣ ಬೆಂಬಲವನ್ನು ನೀಡುವ ಜತೆಗೆ ಹೆಚ್ಚಿನ ಮತಗಳನ್ನು ನೀಡಿ, ಬಹುಮತ ಬರುವಂತೆ ಮಾಡಿದ್ದಾರೆ. ಈಗಾಗಲೇ ಗ್ರಾಮದ ಮುಖಂಡರು ಕೋರಿಕೆಯಂತೆ ಬಿಸಲವಾಡಿ, ಬಂದಿಗೌಡನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಸಂಪರ್ಕ ರಸ್ತೆಗಳಿಗೆ ವಿಶೇಷ ಅನುದಾನ ಕೊಡಿಸಬೇಕು. ಸಾರಿಗೆ ಸೌಲಭ್ಯ ಸೇರಿದಂತೆ ಈ ಭಾಗದ ಜನರು ಇತ್ತ ಗಡಿಪ್ರದೇಶದಲ್ಲಿ ವಾಸಿಸುವ ಮೂಲಕ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ತಾವು ಅದ್ಯತೆ ಮೇರೆಗೆ ಅನುದಾನವನ್ನು ನೀಡಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಸಲವಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಮಹದೇವಪ್ಪ, ಡೇರಿ ಅಧ್ಯಕ್ಷ ಶಿವಬಸಪ್ಪ, ಪಿಎಸಿಸಿ ಭ್ಯಾಂಕ್ ಅಧ್ಯಕ್ಷ ಸಿದ್ದನಾಯಕ, ಎಪಿಎಂಸಿ ಮಾಜಿ ಉಪಾದ್ಯಕ್ಷ ಕೋಡಿಉಗನೆ ಪುರುಷೋತ್ತಮ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಗಿರೀಶ್, ಎನ್. ಪ್ರಭುಸ್ವಾಮಿ, ಮಹದೇವಣ್ಣ, ಸದಸ್ಯರಾದ ನಾರಾಯಣನಾಯಕ, ಮುಖಂಡರಾದ ಗುರುಸ್ವಾಮಿ, ನಾಗರಾಜು, ಚನ್ನಬಸಪ್ಪ, ಗುರುಶಾಂತಪ್ಪ, ರಾಜು, ಶಿವಕುಮಾರ್, ಪರಶಿವಪ್ಪ, ಶ್ರೀಕಾಂತ್, ರಘು, ನಾಗರಾಜು ಸೇರಿದಂತೆ ಇತರರು ಹಾಜರಿದ್ದರು.
ಗಡಿಯಲ್ಲಿರುವ ಬಿಸಲವಾಡಿ ಗ್ರಾಮ ಪಂಚಾಯಿತಿ ಅಭಿವೃದ್ದಿಗೆ ಹೆಚ್ಚಿನ ಒತ್ತು : ಶಾಸಕ ಪುಟ್ಟರಂಗಶೆಟ್ಟಿ
RELATED ARTICLES