ಮೈಸೂರು: ನಗರದ ಸ್ಯಾನ್ಕಿ ಪಾರ್ಕರ್ಸ್ ಸ್ಕೂಲ್ ಆಫ್ ಮ್ಯೂಸಿಕ್ ಸಂಸ್ಥೆಯ ೯ನೇ ವಾರ್ಷಿಕೋತ್ಸವ ಅಂಗವಾಗಿ ಜೂ.೩ರಂದು ಸಂಜೆ ನಾಲ್ಕಕ್ಕೆ ಗಾನಮೃತ ಸೀಜನ್-೪ನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಪಾರ್ಕರ್ ಹೇಳಿದರು.
ಜಿಲ್ಲಾ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಗಾನ ಭಾರತಿ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ವಿವಿಧ ವೃತ್ತಿಯಲ್ಲಿರುವ ಹಲವಾರು ಹಾಡುಗಾರರು ಗಾಯನ ಪ್ರಸ್ತುತಪಡಿಸಲಿದ್ದಾರೆ. ಕನ್ನಡ ಭಾಷೆ ಸೇರಿ ಐದು ಭಾಷೆಗಳ ಸುಮಾರು ೫೦ ಹಾಡುಗಳ ಮೂಲಕ ರಂಜಿಸಲಾಗುತ್ತದೆ. ಪ್ರವೇಶ ಉಚಿತವಿರಲಿದೆ ಎಂದರು.
ಅಂದಿನ ಸಮಾರಂಭದಲ್ಲಿ ಡಾ.ವೈಡಿ. ರಾಜಣ್ಣ, ಸಮಾಜಸೇವಕ ಸತೀಶ್ ಗೌಡ, ಜೆಡಿಎಸ್ ಮುಖಂಡ ಸಂತೋಷ್ ಗೌಡ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ಡಾ. ಭೀಮಪ್ಪ ತಿಮ್ಮಪ್ಪ, ಎಂ. ಸುರೇಶ್, ಮನುಯಾದವ್ ಇದ್ದರು.
ಗಾನಮೃತ ಸೀಜನ್-೪
RELATED ARTICLES