Saturday, April 19, 2025
Google search engine

Homeರಾಜ್ಯಗೋ ಹತ್ಯೆ ನಿಷೇಧ ಕಾಯ್ದೆಗೆ: ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಮುಖಂಡ ಟಿ...

ಗೋ ಹತ್ಯೆ ನಿಷೇಧ ಕಾಯ್ದೆಗೆ: ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಮುಖಂಡ ಟಿ ಈರಯ್ಯ ಒತ್ತಾಯ

ಪಿರಿಯಾಪಟ್ಟಣ: ಗೋ ಹತ್ಯೆ ನಿಷೇಧ ಕಾಯ್ದೆ ಸಡಿಲಿಕೆ ತಿದ್ದುಪಡಿ ಆಗುವುದು ರೈತರಿಗೆ ಅನಿವಾರ್ಯವಾಗಿದ್ದು ಸರ್ಕಾರ ಕೂಡಲೇ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಸಡಿಲಿಕೆ ಮಾಡಬೇಕೆಂದು ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಮುಖಂಡ ಟಿ ಈರಯ್ಯ ಒತ್ತಾಯಿಸಿದರು.
ಪಟ್ಟಣದಲ್ಲಿರುವ ತಾಲೂಕು ಆಡಳಿತ ಭವನದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆಯು ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕೂಡಲೇ ಸಚಿವ ಸಂಪುಟದ ಸಭೆಯಲ್ಲಿ ಸಡಿಲುಗೊಳಿಸುವಂತೆ ಆಗ್ರಹಿಸಿದರು.
ಕಳೆದ 20 20 ನೇ ಸಾಲಿನಲ್ಲಿ ಬಿಜೆಪಿ ಸರ್ಕಾರದಲ್ಲಿ ಕೈಗೊಂಡ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಗೋ ಶಾಲೆಗಳ ಹೆಸರಿನಲ್ಲಿ ತಮ್ಮ ಪಕ್ಷದ ಪರ ಇರುವ ಸಂಘಟನೆಗಳ ಕಾರ್ಯಕರ್ತರ ವಿವಿಧ ರೀತಿಯಲ್ಲಿ ಬೆಳೆಸಿಕೊಳ್ಳಲು ಜಾತಿ ಧರ್ಮಗಳ ಸಮಸ್ಯೆಗಳನ್ನು ಹೆಚ್ಚಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿ ಅವರ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಮಾಡಿದ ಮಾರ್ಗೋಪಾಯ ಇದಾಗಿದೆ ಎಂದು ದೂರಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿದ್ದ ಪರಿಣಾಮ ಗೋವುಗಳು ಸಂರಕ್ಷಣೆ ಹೆಸರಿನಲ್ಲಿ ಆರಂಭಿಸಿ ಗೋಶಾಲೆಗಳಲ್ಲಿ ಹಾಲು ಮತ್ತು ಸಗಣಿ, ಹೋರಿ, ಕರು ಹಸುಗಳು ಇವುಗಳಿಗೆ ಬೇಕಾಗುವ ಮೇವು ಜಾಗ ಶೆಡ್ಡ್ ನಿರ್ಮಾಣ ವೆಚ್ಚ ಸೇರಿದಂತೆ ಎಲ್ಲಾ ರೀತಿಯಲ್ಲಿ ಮೋಸದ ದಂದೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ರೈತರು ಸಾಕುತ್ತಿರುವ ಜಾನುವಾರುಗಳಿಗೆ ವಯಸ್ಸಾಗಿ ಮತ್ತು ಅನಾರೋಗ್ಯದಿಂದ ಸತ್ತರೆ ಅವುಗಳ ದೇಹದ ತೂಕ ಹೆಚ್ಚಿರುವುದರಿಂದ ರೈತರ ಕೊಟ್ಟಿಗೆ ಅಥವಾ ಸಾವನ್ನಪ್ಪಿದ ಸ್ಥಳದಿಂದ ಅದನ್ನು ಹೊತ್ತು ಸಾಗಿಸುವ ಸ್ಥಳದವರೆಗೂ ಸಾಗಿಸಲು ದೊಡ್ಡ ಪ್ರಮಾಣದ ವಾಹನದ ಅವಶ್ಯಕತೆ ಮತ್ತು ಹೂತು ಹಾಕಲು ಜಾಗ ಅಗತ್ಯವಾಗಿ ಬೇಕಾಗುತ್ತದೆ.
ಹಾಳದವರವಿಗೂ ಭೂಮಿಯಲ್ಲಿ ಗುಂಡಿ ತೆಗಿಬೇಕಾಗಿರುವುದರಿಂದ ಜೆಸಿಬಿ ಯಂತ್ರವನ್ನು ಬಳಸಿಕೊಳ್ಳಬೇಕು ರೈತ ಸಾಕಿದ ಮತ್ತು ಅಪಾರ ವೆಚ್ಚದಲ್ಲಿ ಖರೀದಿಸುವಂತಹ ಜಾನುವಾರು (ಹಸುಗಳು) ಸತ್ತರು ಸಹ ಮತ್ತೆ ಹಣದ ಖರ್ಚಿನ ಹೊರೆಯನ್ನು ಹೊರಬೇಕಾಗಿದೆ ಎಂದು ಆರೋಪಿಸಿದರು.
ಹಾಲಿ ನಡೆಯುತ್ತಿರುವ ಗೋಶಾಲೆಯ ಸಂಖ್ಯೆಗಳು ಮತ್ತು ಖರ್ಚಿನ ವೆಚ್ಚವನ್ನು ಬಹಿರಂಗಪಡಿಸಲಾಗುತ್ತಿದೆ ವಿನಹ ಧನಕರುಗಳ ಹೆಚ್ಚಳ ಮತ್ತು ಗೊಬ್ಬರ ಉತ್ಪಾದನೆ ಸತ್ತ ಧನಕರುಗಳನ್ನು ಏನು ಮಾಡುತ್ತಿದ್ದೀರಿ ಎಷ್ಟು ಸತ್ಯವೇ ಎಂದು ಹೇಳಲಾಗುತ್ತಿಲ್ಲ ಇದರ ಬಗ್ಗೆ ಸರ್ಕಾರವು ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು.
ವೇದಿಕೆಯ ಮತ್ತೊಬ್ಬ ಮುಖಂಡ ಸೀಗೂರು ವಿಜಯಕುಮಾರ್ ಮಾತನಾಡಿ ತೆರೆಯಲಾಗಿರುವ ಗೋ ಶಾಲೆಗಳಿಂದ ಹೊರದೇಶಗಳಿಗೆ ಗೋಮಾಂಸವನ್ನು ರಫ್ತು ಮಾಡಲಾಗುತ್ತಿರುವುದು ಕಂಡುಬಂದಿದ್ದು ಗೋ ಹತ್ಯೆ ಮಾಡಿದೆ ಹೇಗೆ ಸಾಗಿಸಲು ಸಾಧ್ಯ ಎಂದು ಪ್ರಶ್ನಿಸಿದ ಅವರು ಇದು ಜನಸಾಮಾನ್ಯರ ಮತ್ತು ರೈತರ ಮೇಲೆ ನಡೆಸಲಾಗುತ್ತಿರುವ ಚೆಲ್ಲಾಟ ಇದಾಗಿದೆ.
ಗೋಗುಗಳ ಹೆಸರಿನಲ್ಲಿ ಆದಾಯದ ದಂಧೆಯಲ್ಲಿ ಬಿಜೆಪಿ ಪರ ಸಂಘಟನೆಗಳು ತೊಡಗಿರುವುದನ್ನು ಕೂಡಲೇ ನಿಲ್ಲಿಸಬೇಕು ವ್ಯವಸಾಯಕ್ಕೆ ಯೋಗ್ಯವಿಲ್ಲದಿದ್ದರೂ ಗೋ ಹತ್ಯೆ ನಿಷೇಧ ಕಾಯ್ದೆಯಿಂದ ಸಂರಕ್ಷಣೆ ಮಾಡಲು ಕೇವಲ ಮೇವಿನ ಖರ್ಚು ಮಾತ್ರವಲ್ಲದೆ ಮಾನವನ ಶ್ರಮವೂ ಹೆಚ್ಚಾಗುತ್ತಿದೆ.
ಆದ್ದರಿಂದ ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಪಶು ಸಂಗೋಪನೆ ಸಚಿವರಾಗಿರುವ ಕೆ ವೆಂಕಟೇಶ್ ರವರು ಎಮ್ಮೆ, ಕೋಣವನ್ನು ಮಾಂಸಕ್ಕಾಗಿ ಬಳಸಿಕೊಳ್ಳುವಂತೆ ವಯಸ್ಸಾದ ಗೋವುಗಳನ್ನು ಮಾಂಸಕ್ಕೆ ಏಕೆ ಬಳಸಿಕೊಳ್ಳಬಾರದು ಎಂದು ಹೇಳುವ ಮೂಲಕ ಗೋ ಹತ್ಯೆ ನಿಷೇಧ ಕಾಯ್ದೆ ಸಡಿಲಿಕೆ ಬಗ್ಗೆ ಪ್ರಸ್ತಾಪಿಸಿರುವುದು ಪ್ರಸಕ್ತವಾಗಿ ಸರಿಯಾಗಿರುವುದರಿಂದ ಮತ್ತು ಸ್ವಾಗತ ಅರ್ಹವಾಗಿದ್ದು 1964ರ ಕಾಯ್ದೆಯ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮುಂದಿನ ಸಚಿವ ಸಂಪುಟದಲ್ಲಿ ಗೋಹತ್ಯ ನಿಷೇಧ ಕಾಯ್ದೆಯನ್ನು ಸಡಿಲ ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಹಗುರ ಮಾಡಬೇಕೆಂದು ಮತ್ತು ಬಿಜೆಪಿ ಅಂಗ ಸಂಸ್ಥೆಗಳಿಂದ ನೈತಿಕ ಪೊಲೀಸ್ ಗಿರಿಯನ್ನು ತಕ್ಷಣವೇ ನಿಲ್ಲಿಸಿ ರೈತರಿಗಾಗಿರುವ ತೊಂದರೆ ನಿವಾರಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಕಚೇರಿಯ ಶಿರಸ್ದಾರ್ ಟ್ರೀಜಾ ರವರ ಮೂಲಕ ಮುಖ್ಯಮಂತ್ರಿ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆಯ ಮುಖಂಡ ಎಚ್‍ಡಿ ರಮೇಶ್ ಮತ್ತು ಪಿಪಿ ಪುಟ್ಟ ನಾಯಕ. ಹಬಟೂರು ಸೋಮಶೇಖರ್, ನಾರಾಯಣ, ಚಿಕ್ಕಮಹಾದೇವ್, ಎಸ್ ಅಶೋಕ, ಎನ್ ಟಿ ರವಿಕುಮಾರ್, ಶಫಿ ಹಾಸ್ಬಾಳು, ಸಫಿ ಅಹಮದ್, ಶೇಖರ್ ತಾತನಹಳ್ಳಿ, ನಹಿಂ ಅಹ್ಮದ್, ನರಸಿಂಹಮೂರ್ತಿ, ಮಂಜು ನಾಯಕ, ನಾಗರಾಜ್, ಶ್ರೀನಿವಾಸ್ ಗೌಡ, ಹುಚ್ಚೇಗೌಡ ಮತ್ತಿತರರಿದ್ದರು.

RELATED ARTICLES
- Advertisment -
Google search engine

Most Popular