ದಾವಣಗೆರೆ, ಜೂನ್ 07: ನನಗೂ, ನಮ್ಮ ಕುಟುಂಬದ ಸದಸ್ಯರಿಗೂ ಕಾಂಗ್ರೆಸ್ ಸರ್ಕಾರ ನೀಡುವ ಭರವಸೆಗಳನ್ನು ಬಳಸುವುದಿಲ್ಲ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಗ್ಯಾರಂಟಿ ಭರವಸೆಗಳನ್ನ ನೀಡಿತ್ತು. ಐದು ಭರವಸೆಗಳನ್ನು ನಿಬಂಧನೆಗಳಿಲ್ಲದೇ ಐದು ಗ್ಯಾರಂಟಿಗಳನ್ನು ಜಾರಿ ಮಾಡಬೇಕು, ಸರಕಾರ ಭರವಸೆಗಳ ಮೇಲೆ ಷರತ್ತುಗಳನ್ನು ಹಾಕಬಾರದೆಂದು ಮಾಜಿ ಶಾಸಕ ರೇಣುಕಾಚಾರ್ಯ ಒತ್ತಾಯಿಸಿದರು.
ಈಗಾಗಲೇ ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್ ಅವರು ಚುನಾವಣಾ ಪೂರ್ವದಲ್ಲಿ ಭರವಸೆ ನೀಡುವಾಗ ಯಾವುದೇ ಷರತ್ತುಗಳನ್ನು ವಿಧಿಸಿರಲಿಲ್ಲ. ಈಗ ಸರಕಾರ ಷರತ್ತುಗಳನ್ನು ವಿಧಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದು, ಭರವಸೆಗಳ ಮೇಲೆ ಯಾವುದೇ ಷರತ್ತುಗಳನ್ನು ಹಾಕ ಬಾರದೆಂದು ಸರಕಾರವನ್ನ ಆಗ್ರಹಿಸಿದ್ದಾರೆ.
ಈ ಹಿಂದೆ ಗೃಹಜ್ಯೋತಿ ಭರವಸೆಯಲ್ಲಿ ಎಲ್ಲರಿಗೂ 200 ಯುನಿಟ್ ವಿದ್ಯುತ್ ಫ್ರೀ ಎಂದು ಹೇಳಿ ಈಗ 12 ತಿಂಗಳ ಸರಾಸರಿ ಮಾಡಲಾವುದು ಎಂದು ಹೇಳುತ್ತಿದ್ದೀರಿ, ಅಷ್ಟೇ ಅಲ್ಲದೇ ಬಾಡಿಗೆ ಇರುವರು 200 ಯುನಿಟ್ ಉಚಿತ ಎಂದು ಹೇಳಿ ಈಗ ಷರತ್ತು ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಯಾವುದೇ ಷರತ್ತು ಹಾಕದೇ ಕೊಟ್ಟ ಮಾತನ್ನು ಉಳಿಸಿಕೊಳ್ಳ ಬೇಕು, ವಚನ ಭ್ರಷ್ಟರಾಗಬಾರದೆಂದರು. ಇನ್ನೂ ಅನ್ನ ಭಾಗ್ಯ ಯೋಜನೆಯಡಿ ಹತ್ತು ಕೆಜಿ ಅಕ್ಕಿ ಎಂದು ಭರವಸೆಯಲ್ಲಿ ನೀಡಿದ್ದಿರಾ. ಆದರೇ ಕೇಂದ್ರ ಸರಕಾರ ಐದು ಕೆಜಿ ಅಕ್ಕಿ ಕೊಡುತ್ತಿದ್ದು, ನೀವು ಐದು ಕೆಜಿ ಅಕ್ಕಿ ಕೊಟ್ಟಂತಾಗುತ್ತದೆ, ಅದನ್ನು ಬಿಟ್ಟು ನೀವು ಹತ್ತು ಕೆಜಿ ಕೊಡಬೇಕೆಂದು ಒತ್ತಾಯಿಸಿದರು.
ಗೃಹ ಲಕ್ಷಿ ಯೋಜನೆಯ ಭರವಸೆಯನ್ನ ನೀಡಿ ಕುಟುಂಬದ ಅತ್ತೆ,ಸೊಸೆ ಮಧ್ಯ ಗೊಂದಲ ತಂದಿದ್ದಾರೆ. ಬಡತನ ರೇಖೆಗಿಂತ ಕಡಿಮೆ ಇರುವ ಪ್ರತಿಯೊಬ್ಬ ಮಹಿಳೆಗೂ 2 ಸಾವಿರ ಕೊಡ ಬೇಕೆಂದು ಒತ್ತಾಯ ಮಾಡುತ್ತೇನೆಂದ ಅವರು ಚುನಾವಣೆಯ ಪೂರ್ವದಲ್ಲಿ ಮಹಿಳೆಯರಿಗೆ ಎಲ್ಲಾ ಬಸ್ ಫ್ರೀ ಎಂದು ಹೇಳಿ ಈಗ ಷರತ್ತು ಹಾಕಿ, 50 ರಷ್ಟು ಮೀಸಲಾತಿ ಎಂದು ಹೇಳುತ್ತಿದ್ದಾರೆ. ಹೆಚ್ಚಿಗೆ ಮಹಿಳೆಯರು ಬಂದರೆ ಏನು ಮಾಡುತ್ತೀರಿ ಅವರು ಎಲ್ಲಿಗೆ ಹೋಗ ಬೇಕೆಂದರಲ್ಲದೇ ಮೀಸಲಾತಿ ಷರತ್ತನ್ನು ತೆಗೆದು ಹೆಚ್ಚುವರಿ ಬಸ್ ಬಿಡಬೇಕೆಂದು ಹೇಳಿದರು.