Friday, April 18, 2025
Google search engine

Homeಬ್ರೇಕಿಂಗ್ ನ್ಯೂಸ್ಗ್ರಾಮಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ೨ನೇ ಅವಧಿ ಸ್ಥಾನ ಮೀಸಲಾತಿ

ಗ್ರಾಮಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ೨ನೇ ಅವಧಿ ಸ್ಥಾನ ಮೀಸಲಾತಿ

ಮಂಡ್ಯ: ಮಂಡ್ಯ ಜಿಲ್ಲೆಯ ೭ ತಾಲ್ಲೂಕುಗಳ ೨೩೩ ಗ್ರಾಮ ಪಂಚಾಯಿತಿಗಳಿಗೆ ೨೦೨೦ ಡಿಸೆಂಬರ್ ಮಾಹೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಜನವರಿ ೨೦೨೧ರ ಮಾಹೆಯಲ್ಲಿ ಮೊದಲನೆ ಅವಧಿಗೆ ನಿಗಧಿಪಡಿಸಲಾಗಿತ್ತು.

ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಅವಧಿಯನ್ನು ೩೦ ತಿಂಗಳಿಗೆ ಮಿತಿಗೊಳಿಸಿದ್ದು, ಮುಂದಿನ ೩೦ ತಿಂಗಳ ೨ನೇ ಅವಧಿಗೆ ಮೀಸಲಾತಿಯನ್ನು ನಿಗಧಿಪಡಿಸಲು ಆಯಾ ತಾಲ್ಲೂಕುನಲ್ಲಿ ಸಭೆ ನಡೆಯಲಿದೆ.
ಮಂಡ್ಯ ತಾಲ್ಲೂಕಿಗೆ ಸಂಬಂದಿಸಿದಂತೆ ಜೂನ್ ೧೨ರ ಬೆಳಿಗ್ಗೆ ೧೧.೦೦ ಗಂಟೆಗೆ ಅಂಬೇಡ್ಕರ್ ಭವನ, ಮದ್ದೂರು ತಾಲ್ಲೂಕಿಗೆ ಸಂಬಂದಿಸಿದಂತೆ ಜೂನ್ ೧೪ರ ಬೆಳಿಗ್ಗೆ ೧೧.೦೦ ಗಂಟೆಗೆ ಸಂಜಯ ಚಿತ್ರಮಂದಿರ, ಮಳವಳ್ಳಿ ತಾಲ್ಲೂಕಿಗೆ ಸಂಬಂದಿಸಿದಂತೆ ಜೂನ್ ೧೪ರ ಮಧ್ಯಾಹ್ನ ೩.೩೦ ಗಂಟೆಗೆ ಮಹಾಲಕ್ಷ್ಮಿ ಚಿತ್ರಮಂದಿರ, ಶ್ರೀರಂಗಪಟ್ಟಣ ತಾಲ್ಲೂಕಿಗೆ ಸಂಬಂದಿಸಿದಂತೆ ಜೂನ್ ೧೫ರ ಬೆಳಿಗ್ಗೆ ೧೧.೦೦ ಗಂಟೆಗೆ ಶ್ರೀದೇವಿ ಚಿತ್ರಮಂದಿರ, ಪಾಂಡವಪುರ ತಾಲ್ಲೂಕಿಗೆ ಸಂಬಂದಿಸಿದಂತೆ ಜೂನ್ ೧೫ರ ಮಧ್ಯಾಹ್ನ ೩.೩೦ ಗಂಟೆಗೆ ಲಾಲ್ ಬಹುದ್ದೂರ್ ಶಾಸ್ತ್ರಿ ಚಿತ್ರಮಂದಿರ, ನಾಗಮಂಗಲ ತಾಲ್ಲೂಕಿಗೆ ಸಂಬಂದಿಸಿದಂತೆ ಜೂನ್ ೧೭ರ ಬೆಳಿಗ್ಗೆ ೧೧.೦೦ ಗಂಟೆಗೆ ವೆಂಕಟೇಶ್ವರ ಚಿತ್ರಮಂದಿರ, ಕೆ.ಆರ್.ಪೇಟೆ ತಾಲ್ಲೂಕಿಗೆ ಸಂಬಂದಿಸಿದಂತೆ ಜೂನ್ ೧೭ರ ಮಧ್ಯಾಹ್ನ ೩.೩೦ ಗಂಟೆಗೆ ಬಸವೇಶ್ವರ ಚಿತ್ರಮಂದಿರದಲ್ಲಿ ಮೀಸಲಾತಿ ನಿಗದಿ ಕುರಿತು ಸಭೆ ನಡೆಯಲಿದೆ.
ಮಂಡ್ಯ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ೨ನೇ ಅವಧಿಯ ಮೀಸಲಾತಿಯನ್ನು ರಾಜ್ಯ ಚುನಾವಣಾ ಆಯೋಗವು ವರ್ಗವಾರು, ತಾಲ್ಲೂಕುವಾರು ಈ ಕೆಳಕಂಡಂತೆ ನಿಗಧಿಪಡಿಸಿದೆ.

ಕ್ರ.ಸಂ. ತಾಲ್ಲೂಕು ಒಟ್ಟು ಗ್ರಾ.ಪಂ. ಅ.ಜಾ. ಪ.ಪಂ. ಹಿಂ.ವ-ಅ ಹಿಂ.ವ-ಬ ಸಾಮಾನ್ಯ
೧ ಮಂಡ್ಯ ೪೬(೨೩) ೬(೩) ೦(೦) ೧೨(೬) ೩(೨) ೨೫(೧೨)
೨ ಮದ್ದೂರು ೪೨(೨೧) ೬(೩) ೦(೦) ೧೧(೬) ೩(೧) ೨೨(೧೧)
೩ ಮಳವಳ್ಳಿ ೩೯(೨೦) ೮(೪) ೦(೦) ೯(೫) ೨(೧) ೨೦(೧೦)
೪ ಶ್ರೀರಂಗಪಟ್ಟಣ ೨೧(೧೧) ೪(೨) ೧(೧) ೪(೨) ೧(೧) ೧೧(೫)
೫ ನಾಗಮಂಗಲ ೨೭(೧೪) ೩(೨) ೦(೦) ೭(೪) ೨(೧) ೧೫(೭)
೬ ಪಾಂಡವಪುರ ೨೪(೧೨) ೩(೨) ೦(೦) ೬(೩) ೨(೧) ೧೩(೬)
೭ ಕೃಷ್ಣರಾಜಪೇಟೆ ೩೪(೧೭) ೫(೩) ೧(೧) ೯(೫) ೨(೧) ೧೭(೭)

ವಿ.ಸೂ:(ಆವರಣದಲ್ಲಿರುವ ಸ್ಥಾನಗಳು ಮಹಿಳಾ ಸದಸ್ಯರಿಗೆ ಮೀಸಲಾಗಿರುವ ಸ್ಥಾನಗಳ ಸಂಖ್ಯೆಯಾಗಿರುತ್ತದೆ.)
ರಾಜ್ಯ ಚುನಾವಣಾ ಆಯೋಗವು ಅಭಿವೃಧಿಪಡಿಸಿರುವ ಉPPಗಿP ಂಠಿಠಿಟiಛಿಚಿಣioಟಿ ತಂತ್ರಾಂಶದಲ್ಲಿ ಅಳವಡಿಸಿ ಜಿಲ್ಲಾ ಪಂಚಾಯತ್ ರಾಷ್ಟ್ರೀಯ ಮಾಹಿತಿ ಕೇಂದ್ರದ ಮೂಲಕ ೧೯೯೩ರಿಂದ ೨೦೨೦ರ ಮೊದಲನೆಯ ಅವಧಿಯವರೆಗೆ ನಿಗಧಿಪಡಿಸಿರುವ ಮೀಸಲಾತಿಯನ್ನು ತಂತ್ರಾಂಶದಲ್ಲಿ ಅಳವಡಿಸಿ ಆಯಾ ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಸಮಕ್ಷಮ ನಿಗಧಿಪಡಿಸಲಾಗುವುದು. ನಿಗಧಿಪಡಿಸಿದ ಸ್ಥಾನಗಳಿಗಿಂತ ಹೆಚ್ಚಿನ ಗ್ರಾಮ ಪಂಚಾಯಿತಿಗಳು ಅರ್ಹವಿದ್ದಲ್ಲಿ ಲಾಟರಿ ಮುಖಾಂತರ ಮೀಸಲಾತಿಯನ್ನು ನಿಗಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹೆಚ್.ಎನ್. ಗೋಪಾಲಕೃಷ್ಣ ರವರು ಪಕ್ರಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular