Friday, April 4, 2025
Google search engine

Homeಸ್ಥಳೀಯಗ್ರಾಹಕರಿಗೆ ಗೂಗಲ್ ಪಿಕ್ಸೆಲ್ ಫೋನ್ ಸೇವೆಗೆ ಎಫ್೧ ಇನ್ಫೋ ಸಲೂಶನ್ಸ್ & ಸರ್ವೀಸಸ್ - ಗೂಗಲ್...

ಗ್ರಾಹಕರಿಗೆ ಗೂಗಲ್ ಪಿಕ್ಸೆಲ್ ಫೋನ್ ಸೇವೆಗೆ ಎಫ್೧ ಇನ್ಫೋ ಸಲೂಶನ್ಸ್ & ಸರ್ವೀಸಸ್ – ಗೂಗಲ್ ಸಹಭಾಗಿತ್ವ ಗೂಗಲ್ ಪಿಕ್ಸೆಲ್ ಮೊಬೈಲ್ ಫೋನ್ ಗ್ರಾಹಕರಿಗೆ ಮಾರಾಟದ ನಂತರದ ಸೇವೆಗಳ ಪೂರೈಕೆಗೆ ಈ ಒಪ್ಪಂದ

ಮೈಸೂರು: ಫ್ಲಿಪ್ ಕಾರ್ಟ್ ನ ಅಂಗಸಂಸ್ಥೆ ಮತ್ತು ಸೇವಾ ವಿಭಾಗವಾಗಿರುವ ಎಫ್೧ ಇನ್ಫೋ ಸಲೂಶನ್ಸ್ & ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನೋಯ್ಡಾದಲ್ಲಿರುವ ಕೇಂದ್ರೀಕೃತ ರಿಪೇರಿ ಕೇಂದ್ರದ ಮೂಲಕ ಹಾಗೂ ದೇಶಾದ್ಯಂತ ೨೭ ನಗರಗಳಲ್ಲಿ ವಾಕ್-ಇನ್ ಸೇವಾ ಕೇಂದ್ರಗಳ ಮೂಲಕ ಗೂಗಲ್ ಪಿಕ್ಸೆಲ್ ಫೋನ್ ಗಳಿಗೆ ಎಂಡ್-ಟು-ಎಂಡ್ ಗ್ರಾಹಕ ಬೆಂಬಲವನ್ನು ಒದಗಿಸುವ ನಿಟ್ಟಿನಲ್ಲಿ ಗೂಗಲ್ ನೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ (Sಣoಡಿe ಟoಛಿಚಿಣoಡಿ).
ವಾಕ್-ಇನ್ ಸರ್ವೀಸ್ ಸೆಂಟರ್ ಗಳಲ್ಲಿ ಗ್ರಾಹಕರು ತಮ್ಮ ಪಿಕ್ಸೆಲ್ ಡಿವೈಸ್ ಗಳಲ್ಲಿ ಸರಳವಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ಅವುಗಳ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಒಂದು ವೇಳೆ ಪಿಕ್ಸೆಲ್ ಡಿವೈಸ್ ಗಳನ್ನು ಭೌತಿಕ ರಿಪೇರಿ ಮಾಡುವ ಅಗತ್ಯವಿದ್ದರೆ, ಅವುಗಳನ್ನು ನೋಯ್ಡಾದಲ್ಲಿರುವ ಕೇಂದ್ರೀಕೃತ ಕೇಂದ್ರಕ್ಕೆ ಕಳುಹಿಸಿ ರಿಪೇರಿ ಮಾಡಿಸಿಕೊಡಲಾಗುತ್ತದೆ. ಈ ವಾಕ್-ಇನ್ ಕೇಂದ್ರಗಳು ಡಿವೈಸ್ ಗಳನ್ನು ಗ್ರಾಹಕರಿಂದ ಪಡೆದ ಅವುಗಳನ್ನು ಪ್ಯಾಕ್ ಮಾಡಿ ರಿಪೇರಿಗಾಗಿ ನೋಯ್ಡಾದ ಕೇಂದ್ರಕ್ಕೆ ಕಳುಹಿಸಿಕೊಡುವ ಕೆಲಸ ಮಾಡುತ್ತವೆ. ಈ ಕೇಂದ್ರಗಳು ಡಿವೈಸ್ ನ ರಿಪೇರಿ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೆ ಮಾಹಿತಿ ನೀಡುತ್ತಿರುತ್ತವೆ ಮತ್ತು ರಿಪೇರಿ ನಂತರ ಕೇಂದ್ರದಲ್ಲಿಯೇ ಗ್ರಾಹಕರಿಗೆ ಹಿಂತಿರುಗಿಸಲಿವೆ.
ಕಳೆದ ಹಲವು ವರ್ಷಗಳಿಂದ ಎಫ್೧ ಸರ್ವೀಸಸ್ ತನ್ನ ಗ್ರಾಹಕರಿಗೆ ಮಾರಾಟದ ನಂತರದ ಸೇವೆಗಳನ್ನು ಉನ್ನತೀಕರಿಸಲು ಅರ್ಹ ತಂತ್ರಜ್ಞರ ತಂಡಗಳನ್ನು ರಚಿಸಲೆಂದು ಸೂಕ್ತ ತರಬೇತಿ ನೀಡಲು ಸಾಕಷ್ಟು ಹೂಡಿಕೆ ಮಾಡಿದೆ. ಎಫ್೧ ಸರ್ವೀಸಸ್ ನಲ್ಲಿರುವ ತಂತ್ರಜ್ಞರು ಗೂಗಲ್ ಪಿಕ್ಸೆಲ್ ಫೋನ್ ಗಳನ್ನು ಸರ್ವೀಸ್ ಮಾಡಲೆಂದೇ ಗೂಗಲ್ ಪರಿಣತರಿಂದ ತರಬೇತಿ ಪಡೆದಿದ್ದಾರೆ.
ಈ ಸಹಭಾಗಿತ್ವದ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ಗ್ರೂಪ್ ನ ಜೀವ್ಸ್ ಕನ್ಸೂಮರ್ ಅಂಡ್ ಎಫ್೧ ಇನ್ಫೋ ಸಲೂಶನ್ಸ್ & ಸರ್ವೀಸ್ ನ ಸಿಇಒ ಡಾ.ನಿಪುಣ್ ಶರ್ಮಾ ಅವರು, “ಗ್ರಾಹಕರು ಮಾರಾಟದ ನಂತರದಲ್ಲಿ ಕಳಪೆ ಗುಣಮಟ್ಟ ಸೇವೆಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದ ಸವಾಲುಗಳನ್ನು ಗಮನಿಸಿದ ಎಫ್೧ ಸಮಗ್ರ ಮತ್ತು ಗ್ರಾಹಕ ಕೇಂದ್ರಿತ ಮಾರಾಟ ನಂತರದ ಸೇವಾ ಜಾಲವನ್ನು ಆರಂಭಿಸುವುದರ ಕಡೆಗೆ ಗಮನಹರಿಸಿತು. ಈ ದಿಸೆಯಲ್ಲಿ ಗೂಗಲ್ ಪಿಕ್ಸೆಲ್ ಅನ್ನು ಗ್ರಾಹಕ ಸೇವಾ ಪೂರೈಕೆದಾರ ಸಂಸ್ಥೆಯನ್ನಾಗಿ ಆಯ್ಕೆ ಮಾಡಿಕೊಂಡಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ. ಈ ಪೂರೈಕೆದಾರ ಸಂಸ್ಥೆಯು ತನ್ನ ಗ್ರಾಹಕರ ಗೂಗಲ್ ಪಿಕ್ಸೆಲ್ ಫೋನ್ ಗಳಿಗೆ ಮಾರಾಟದ ನಂತರದಲ್ಲಿ ಎಂಡ್-ಟು-ಎಂಡ್ ಸೇವೆಗಳನ್ನು ಒದಗಿಸುತ್ತದೆ. ದೇಶಾದ್ಯಂತ ಇರುವ ೨೮ ವಾಕ್-ಇನ್ ಸೇವಾ ಕೇಂದ್ರಗಳು ಮತ್ತು ಒಂದು ಕೇಂದ್ರೀಕೃತ ರಿಪೇರಿ ಕೇಂದ್ರದೊಂದಿಗೆ ಗೂಗಲ್ ಪಿಕ್ಸೆಲ್ ಫೋನ್ ಬಳಕೆದಾರರು ತಡೆರಹಿತವಾಗಿ ಮಾರಾಟದ ನಂತರದ ಸೇವೆಗಳನ್ನು ನುರಿತ ವೃತ್ತಿಪರರಿಂದ ಪಡೆದುಕೊಳ್ಳಬಹುದಾಗಿದೆ. ಈ ಸಹಯೋಗವು ಗ್ರಾಹಕರ ಅನುಭವವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಅಸಾಧಾರಣವಾದ ಮಾರಾಟದ ನಂತರದ ಸೇವೆಗಳನ್ನು ನೀಡುವಲ್ಲಿ ಎಫ್೧ ನ ಪರಿಣತಿಯನ್ನು ಬಲಪಡಿಸುತ್ತದೆ?? ಎಂದು ತಿಳಿಸಿದರು.
ಎಫ್೧ ಅತ್ಯುತ್ತಮವಾದ ಸೇವೆಗಳು ಮತ್ತು ಪಾಲುದಾರ ಜಾಲವನ್ನು ಹೊಂದಿದೆ. ಇದು ರಿಪೇರಿ, ನಿರ್ವಹಣೆ, ಸ್ಥಾಪನೆ, ಡೆಮೊ ಮತ್ತು ಮೌಲ್ಯವರ್ಧಿತ ಸೇವೆಗಳಂತಹ ವ್ಯಾಪಕವಾದ ಶ್ರೇಣಿಯ ಮಾರಾಟದ ನಂತರದ ಪರಿಹಾರಗಳನ್ನು ಒದಗಿಸುತ್ತದೆ. ಅಲ್ಲದೇ, ರಕ್ಷಣೆ, ವಾರಂಟಿ, ಇನ್ ಬೌಂಡ್, ಔಟ್ ಬೌಂಡ್ ಹಾಗೂ ೪೦ ಕ್ಕೂ ಹೆಚ್ಚು ನಾನ್-ವಾಯ್ಸ್ ಗ್ರಾಹಕ ಸೇವೆಗಳ ಮೂಲಕ ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಪೂರೈಸುತ್ತದೆ.

RELATED ARTICLES
- Advertisment -
Google search engine

Most Popular