ಮಡಿಕೇರಿ: ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ಶುಶ್ರೂಷಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಚಿತ್ರಾವತಿ ಬಿ.ಐ ಅವರಿಗೆ ಪ್ರತಿಷ್ಟಿತ ಪ್ಲೊರೆನ್ಸ್ ನೈಂಟಿಂಗಲ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಪ್ರೆಸ್‍ಕ್ಲಬ್ ಆಫ್ ಇಂಡಿಯಾ ಇವರು ನೀಡುವ ಈ ಪ್ರಶಸ್ತಿಯು ಅತ್ಯುತ್ತಮವಾಗಿ ಸೇವೆ ಸಲ್ಲಿಸುವ ಶುಶ್ರೂಷಕ ಅಧಿಕಾರಿಗಳಿಗೆ ನೀಡಲ್ಪಡುತ್ತದೆ.
ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಚಿತ್ರಾವತಿ ಬಿ.ಐ ಅವರಿಗೆ ಪ್ರಶಸಿಯನ್ನು ಆಂಧ್ರ ಪ್ರದೇಶದ ರಾಜ್ಯಪಾಲ ಅಬ್ದುಲ್ ನಜೀರ್ ಪ್ರಧಾನ ಮಾಡಿದರು.
ನಿಮ್ಹಾನ್ಸ್ ನಿರ್ದೇಶಕಿಯಾಗಿರುವ ಡಾ.ಪ್ರತಿಮಾ ಮೂರ್ತಿ, ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಚಂದ್ರಶೇಖರ್‍ಶೆಟ್ಟಿ, ಮೇಜರ್ ಜನರಲ್(ನಿವೃತ್ತ) ವಿಪಿಎಸ್ ಬಪುನಿ, ನ್ಯೂಸ್ ಪೇಪರ್ ಆಸೋಸಿಯೇಶನ್‍ನ ರಾಜ್ಯಾಧ್ಯಕ್ಷ ಗಣೇಶ್ ಕಾಸರಗೋಡು, ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ನೋಂದಣಿ ಅಧಿಕಾರಿ ಡಾ.ಪ್ರಶಾಂತ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. 25 ವರ್ಷಗಳಿಂದ ಶುಶ್ರೂಷಕ ಅಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸುತ್ತ್ತಿರುವ ಚಿತ್ರಾವತಿ ಬಿ.ಐ ಅವರು ಪ್ರಸ್ತುತ ಎಸ್‍ಬಿಎ (ತಾಯಿ ಹಾಗೂ ಮಗುವಿನ ಆರೋಗ್ಯ ಸಂರಕ್ಷಣೆ ಯೋಜನೆ) ಕೊಡಗು ಜಿಲ್ಲಾ ತರಬೇತುದಾರರಾಗಿ ಸುಮಾರು 14 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುತ್ತಾರೆ.