Saturday, April 19, 2025
Google search engine

Homeಅಪರಾಧಟೊಮ್ಯಾಟೊ ಕಳ್ಳತನ: ಮಾಲೀಕರಿಗೆ ಸಿಕ್ಕಿ ಬೀಳುವ ಭಯದಲ್ಲಿ ಬೈಕ್ ಬಿಟ್ಟು ಕಳ್ಳರು ಪರಾರಿ

ಟೊಮ್ಯಾಟೊ ಕಳ್ಳತನ: ಮಾಲೀಕರಿಗೆ ಸಿಕ್ಕಿ ಬೀಳುವ ಭಯದಲ್ಲಿ ಬೈಕ್ ಬಿಟ್ಟು ಕಳ್ಳರು ಪರಾರಿ


ಹೊಸೂರು : ಟೊಮ್ಯಾಟೊ ಕಳ್ಳತನ ಮಾಡುತ್ತಿದ್ದ ವೇಳೆ ಜಮೀನಿನ ಮಾಲೀಕರಿಗೆ ಸಿಕ್ಕಿ ಬೀಳುವ ಭಯದಲ್ಲಿ ತಾವು ತಂದಿದ್ದ ಬೈಕ್ ಬಿಟ್ಟು ಕಳ್ಳರು ಪರಾರಿಯಾಗಿರುವ ಘಟನೆ ಸಾಲಿಗ್ರಾಮ ತಾಲೂಕು ಸಾಲೇಕೊಪ್ಪಲು ಗ್ರಾಮದಲ್ಲಿ ನಡೆದಿದೆ
ಗ್ರಾಮದ ಕೀರ್ತಿ ಎಂಬುವರ ಜಮೀನಿನಲ್ಲಿ ಈ ಘಟನೆ ನಡೆದಿದ್ದು ರಾತ್ರಿ ಜಮೀನಿನಲ್ಲಿ ಟೊಮ್ಯಾಟೊ ಕಳ್ಳತನ ಮಾಡುತ್ತಿರುವ ಬಗ್ಗೆ ದಾರಿಯಲ್ಲಿ ಹೋಗುತ್ತಿದ್ದವರು ನೋಡಿ ಕೀರ್ತಿ ಅವರ ಕುಟುಂಬಕ್ಕೆ ವಿಚಾರ ಮುಟ್ಟಿಸಿದ್ದಾರೆ
ತಕ್ಷಣವೇ ಕೀರ್ತಿ ಅವರ ಕುಟುಂಬದವರು ಜಮೀನಿನ ಬಳಿ ಹೋಗಿ ನೋಡಲಾಗಿ ೩ ಮಂದಿ ಇದ್ದ ಕಳ್ಳರ ಗುಂಪು ಕತ್ತಲಲ್ಲಿ ಪರಾರಿಯಾಗಿದ್ದು ಕಳ್ಳತನಕ್ಕೆ ತಂದಿದ್ದ ಬೈಕ್ ಬಿಟ್ಟು ಹೋಗಿದ್ದಾರೆ
ಬೈಕ್ ಅನ್ನು ಚುಂಚನಕಟ್ಟೆ ಉಪಠಾಣೆ ಪೊಲೀಸರಿಗೆ ತಂದು ಒಪ್ಪಿಸಿದ್ದಾರೆ ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.

RELATED ARTICLES
- Advertisment -
Google search engine

Most Popular