ಚಾಮರಾಜನಗರ: 2023-24ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಜಿಲ್ಲೆಯ ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಟೊಮೆಟೊ, ಆಲೂಗಡ್ಡೆ ಮತ್ತು ಅರಿಶಿಣ ಬೆಳೆಗೆ ಬೆಳೆವಿಮೆ ಕೈಗೊಳ್ಳಲು ಅವಕಾಶವಿದೆ.
ನೀರಾವರಿ ಆಶ್ರಿತ ಈರುಳ್ಳಿ ಬೆಳೆಗೆ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ 80500 ರೂ.ಗಳಾಗಿದ್ದು ವಿಮಾ ಕಂತಾಗಿ ಶೇ. 5ರಷ್ಟು ಅಂದರೆ ಪ್ರತಿ ಎಕರೆಗೆ 1630 ರೂ. ಗಳನ್ನು ಜೂನ್ 30 ರೊಳಗೆ ಪಾವತಿಸಬೇಕಿದೆ.
ಟೊಮೆಟೊ ಬೆಳೆಗೆ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ 141500 ರೂ.ಗಳಾಗಿದ್ದು ವಿಮಾ ಕಂತಾಗಿ ಶೇ. 5ರಷ್ಟು ಅಂದರೆ ಪ್ರತಿ ಎಕರೆಗೆ 2864 ರೂ.ಗಳನ್ನು ಜುಲೈ 15 ರೊಳಗೆ ಪಾವತಿಸಬೇಕಿದೆ.
ನೀರಾವರಿ ಆಶ್ರಿತ ಆಲೂಗಡ್ಡೆ ಬೆಳೆಗೆ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ 148500 ರೂ.ಗಳಾಗಿದ್ದು ವಿಮಾ ಕಂತಾಗಿ ಶೇ. 5ರಷ್ಟು ಅಂದರೆ ಪ್ರತಿ ಎಕರೆಗೆ 3006 ರೂ.ಗಳನ್ನು ಜುಲೈ 15 ರೊಳಗೆ ಪಾವತಿಸಬೇಕಿದೆ.
ಅರಿಶಿಣ ಬೆಳೆಗೆ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ 142250 ರೂ.ಗಳಾಗಿದ್ದು ವಿಮಾ ಕಂತಾಗಿ ಶೇ. 5ರಷ್ಟು ಅಂದರೆ ಪ್ರತಿ ಎಕರೆಗೆ 2880 ರೂ.ಗಳನ್ನು ಜುಲೈ 31ರೊಳಗೆ ಪಾವತಿಸಬೇಕಿದೆ.
ಚಾಮರಾಜನಗರ ತಾಲೂಕಿನ ಕಸಬಾ ಹಾಗೂ ಚಂದಕವಾಡಿ ಹೋಬಳಿಗೆ ನೀರಾವರಿ ಆಶ್ರಿತ ಈರುಳ್ಳಿ ಹಾಗೂ ಅರಿಶಿಣ, ಟೊಮ್ಯಾಟೊ, ಸಂತೇಮರಹಳ್ಳಿ ಹೋಬಳಿಗೆ ಅರಿಶಿಣ, ಟೊಮ್ಯಾಟೊ, ಹರದನಹಳ್ಳಿ ಹೋಬಳಿಗೆ ನೀರಾವರಿ ಆಶ್ರಿತ ಈರುಳ್ಳಿ, ಆಲೂಗಡ್ಡೆ ಮತ್ತು ಅರಿಶಿಣ, ಟೊಮ್ಯಾಟೊ ಹಾಗೂ ಹರವೆ ಹೋಬಳಿಗೆ ಅರಿಶಿಣ, ಟೊಮ್ಯಾಟೊ ಬೆಳೆಗಳು ವಿಮಾ ವ್ಯಾಪ್ತಿಗೆ ಒಳಪಡಲಿವೆ.
ಗುಂಡ್ಲುಪೇಟೆ ತಾಲೂಕಿನ ಕಸಬಾ, ತೆರಕಣಾಂಬಿ, ಬೇಗೂರು, ಹಂಗಳ ಹೋಬಳಿಗೆ ನೀರಾವರಿ ಆಶ್ರಿತ ಈರುಳ್ಳಿ, ಹಾಗೂ ಅರಿಶಿಣ, ಟೊಮ್ಯಾಟೊ ಬೆಳೆಗಳು ವಿಮಾ ವ್ಯಾಪ್ತಿಗೆ ಒಳಪಡಲಿವೆ.
ಕೊಳ್ಳೇಗಾಲ ತಾಲೂಕಿನ ಕಸಬಾ, ಪಾಳ್ಯ ಹೋಬಳಿಗೆ ನೀರಾವರಿ ಆಶ್ರಿತ ಈರುಳ್ಳಿ ಮತ್ತು ಅರಿಶಿಣ, ಟೊಮ್ಯಾಟೊ ಬೆಳೆಗಳು ವಿಮಾ ವ್ಯಾಪ್ತಿಗೆ ಒಳಪಡಲಿವೆ.
ಹನೂರು ತಾಲೂಕಿನ ರಾಮಾಪುರ ಹೋಬಳಿಗೆ ನೀರಾವರಿ ಆಶ್ರಿತ ಈರುಳ್ಳಿ ಹಾಗೂ ಅರಿಶಿಣ, ಲೊಕ್ಕನಹಳ್ಳಿ ಹೋಬಳಿಗೆ ನೀರಾವರಿ ಆಶ್ರಿತ ಈರುಳ್ಳಿ, ಆಲೂಗಡ್ಡೆ ಮತ್ತು ಅರಿಶಿಣ, ಟೊಮ್ಯಾಟೊ, ಹನೂರು ಹೋಬಳಿಗೆ ನೀರಾವರಿ ಆಶ್ರಿತ ಈರುಳ್ಳಿ ಹಾಗೂ ಅರಿಶಿಣ, ಟೊಮ್ಯಾಟೊ ಬೆಳೆಗಳು ವಿಮಾ ವ್ಯಾಪ್ತಿಗೆ ಸೇರಲಿವೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೆಶಕರಾದ ಶಿವಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.