Friday, April 4, 2025
Google search engine

Homeಬ್ರೇಕಿಂಗ್ ನ್ಯೂಸ್ದಾಂಪತ್ಯಕ್ಕೆ ಕಾಲಿಟ್ಟ ಅಂಬಿ ಪುತ್ರ ಅಭಿಷೇಕ್:‌ ರಜಿನಿಕಾಂತ್‌ ಸೇರಿ ಹಲವು ಗಣ್ಯರು ಭಾಗಿ

ದಾಂಪತ್ಯಕ್ಕೆ ಕಾಲಿಟ್ಟ ಅಂಬಿ ಪುತ್ರ ಅಭಿಷೇಕ್:‌ ರಜಿನಿಕಾಂತ್‌ ಸೇರಿ ಹಲವು ಗಣ್ಯರು ಭಾಗಿ

ಬೆಂಗಳೂರು: ಜೂ.ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ – ಅವಿವಾ ಬಿಡಪ್ಪ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರ ಸಮ್ಮುಖದಲ್ಲಿ, ಹಿರಿಯ – ಕಿರಿಯ ಸ್ನೇಹಿತರ ಮುಂದೆ ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಬೆಂಗಳೂರಿನ ಮಾಣಿಕ್ಯ ವಜ್ರ ಮಂಟಪದಲ್ಲಿ ಗೌಡರ ಸಂಪ್ರದಾಯದಂತೆ ಬೆಳಗ್ಗೆ 9.30 ರಿಂದ 10.30ರ ಒಳಗೆ ವಿವಾಹ ಶಾಸ್ತ್ರ ನೆರವೇರಿತ್ತು.

ಮದುವೆ ಸಮಾರಂಭಕ್ಕೆ ಸೂಪರ್‌ ಸ್ಟಾರ್‌ ರಜಿನಿಕಾಂತ್‌, ನಟ ಯಶ್‌, ನಟಿ ಸುಹಾಸಿನಿ, ಟಾಲಿವುಡ್‌ ನಟರಾದ ಮೋಹನ್‌ ಬಾಬು, ಮಂಚು ಮನೋಜ್‌, ನಟ ನರೇಶ್‌, ಪವಿತ್ರ, ಕ್ರಿಕೆಟಿಗ ಅನಿಲ್‌ ಕುಂಬ್ಳೆ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ.

ಕಳೆದ ವರ್ಷ ಡಿ.11 ರಂದು  ಖ್ಯಾತ ಫ್ಯಾಷನ್‌ ಡಿಸೈನರ್‌ ಆಗಿರುವ ಪ್ರಸಾದ್‌ ಬಿಡಪ್ಪ ಅವರ ಪುತ್ರಿ ಅವಿವಾ ಬಿಡಪ್ಪ ಅವರೊಂದಿಗೆ ಜೂ. ರೆಬೆಲ್‌ ಸ್ಟಾರ್‌ ಉಂಗುರವನ್ನು ತೊಡಗಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಜೂ.7 ರಂದು ಅದ್ದೂರಿಯಾಗಿ ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

RELATED ARTICLES
- Advertisment -
Google search engine

Most Popular