ಕೆ.ಆರ್.ನಗರ: ದೇವಾಲಯಗಳು ಜನರಿಗೆ ಶಾಂತಿ ಹಾಗೂ ನೆಮ್ಮದಿ ನೀಡುವ ತಾಣಗಳಾಗಿವೆ ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.
ತಾಲ್ಲೂಕಿನ ಕುಂಬಾರಕೊಪ್ಪಲು ಹಾಗೂ ದೊಡ್ಡೇಕೊಪ್ಪಲು ಗ್ರಾಮದಲ್ಲಿ ನಡೆದ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಕಳಸ ಪ್ರತಿಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುಮಾರು ೨೦೦ ವಗಳ ಇತಿಹಾಸ ಹೊಂದಿರುವ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನವನ್ನು ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಒಟ್ಟುಗೂಡಿ ಜೀರ್ಣೊದ್ಧಾರ ಮಾಡಿರುವುದು ಸಂತಸದ ಸಂಗತಿ. ಗ್ರಾಮಸ್ಥರೆಲ್ಲರೂ ಒಂದೆಡೆ ಸೇರಿ ದೇವಾಲಯಗಳಲ್ಲಿ ಹಬ್ಬ-ಹರಿದಿನಗಳನ್ನು ಆಚರಿಸುವುದರಿಂದ ಶಾಂತಿ ಹಾಗೂ ನೆಮ್ಮದಿ ದೊರೆಯಲಿದ್ದು ಮಲ್ಲೇಶ್ವರ ಸ್ವಾಮಿ ಗ್ರಾಮಸ್ಥರೆಲ್ಲರಿಗೂ ಒಳಿತು ಮಾಡಲಿ ಎಂದರು.
ತಾಲ್ಲೂಕಿನಲ್ಲಿ ಅಧಿಕಾರ ಇಲ್ಲದಿದ್ದರೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಚುನಾವಣೆಯಲ್ಲಿ ಜನರು ಡಿ.ರವಿಶಂಕರ್ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡುವುದರ ಮೂಲಕ ಅಧಿಕಾರ ನೀಡಿದ್ದು, ಸಾಲಿಗ್ರಾಮ ಹಾಗೂ ಕೆ.ಆರ್.ನಗರ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ದೇವಾಲಯದಲ್ಲಿ ಗಂಗಾಪೂಜೆ, ಅ?ಲಕ್ಷ್ಮಿ ಪೂಜೆ ಹಾಗೂ ವಾಸ್ತು ಹೋಮ ನಡೆಸಲಾಯಿತು ನಂತರ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಭಾಗ್ಯ ಕರಿಗೌಡ, ಕುಮಾರ್, ಪಿಡಿಓ ರಮೇಶ್, ಕಾರ್ಯದರ್ಶಿ ಸೋಮಶೇಖರ್, ಯಜಮಾನರುಗಳಾದ ಶಿವಣ್ಣನಾಯಕರು, ಮಹದೇವನಾಯಕರು, ರಾಜೇಗೌಡರು, ಚಿಕ್ಕಮಾದೇಗೌಡ್ರು, ಡೈರಿ ಮಹದೇವ, ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಸಣ್ಣನಿಂಗಶೆಟ್ಟರು, ಕಮಿಟಿ ಕಾರ್ಯದರ್ಶಿ ಬಸವರಾಜು, ರಾಜನಾಯಕ, ಖಜಾಂಚಿ ಶೃಂಗಾರ್ ಸೇರಿದಂತೆ ಇನ್ನು ಹಲವರು ಭಾಗವಹಿಸಿದ್ದರು.