Friday, April 4, 2025
Google search engine

Homeಸ್ಥಳೀಯಧರ್ಮವೇ ಐಕ್ಯತೆಯ ಸಂಕೇತ ಎನ್ನುವುದೇ ಭ್ರಮೆ

ಧರ್ಮವೇ ಐಕ್ಯತೆಯ ಸಂಕೇತ ಎನ್ನುವುದೇ ಭ್ರಮೆ

ಮೈಸೂರು: ಧರ್ಮವೇ ಐಕ್ಯತೆಯ ಸಂಕೇತ ಎನ್ನುವುದು ನಮ್ಮಲಿರುವ ಭ್ರಮೆ ಎಂದು ಹಿರಿಯ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರ ಭೂಮಿಯಲ್ಲಿ ಆಯೋಜಿಸಿದ್ದ ಸಾಮರಸ್ಯಕ್ಕಾಗಿ ದ್ರಾವೀಡರು, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸೌರ್ಹಾದ ಸಹಪಂಕ್ತಿ ಭೋಜನ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ನಾಡಿನ ನೆಲ, ಜಲ, ಭಾಷೆ ಮಾತ್ರ ನಮ್ಮಲ್ಲಿ ಸಾಮರಸ್ಯ ಕಟ್ಟುತ್ತವೆ ಹೊರತು ಧರ್ಮದಿಂದ ಇದು ಕಷ್ಟಸಾಧ. ಧರ್ಮ ಮನಷ್ಯನಲ್ಲಿ ಸಹಬಾಳ್ವೆ ಮೂಡಿಸದೆ ಅಂಧಕಾರ ಬೆಳಸುತ್ತದೆ. ಆದ್ದರಿಂದ ದೇಶ ರಕ್ಷಣೆಗಾಗಿ ಮತಾಂಧತೆ ಮರೆತು ಸಂವಿಧಾನದ ಮೌಲ್ಯಗಳಿಗೆ ಅನುಗುಣವಾಗಿ ಬದುಕಬೇಕಿದೆ ಎಂದರು.
ಚಟ್ಟ ಮತ್ತು ತೊಟ್ಟಿಲು ಮನುಷ್ಯನ ಬದುಕಿನಲ್ಲಿ ಎರಡು ಮುಖ್ಯವಾದ ಸಂಗತಿಗಳು. ತೊಟ್ಟಿಲು ಸದಾ ತೂಗುವ ಕ್ರಿಯೆ ಜಂಗಮತೆ ಒಳಗೊಂಡರೆ, ಚಟ್ಟ ನಮ್ಮ ಜೀವನದ ಕೊನೆಯ ಘಟ್ಟವಾಗಿರುತ್ತದೆ. ದೇವಸ್ಥಾನದಷ್ಟೇ ಸ್ಮಶಾನವೂ ಗೌರಯುತ ಸ್ಥಳ. ಆದರೆ, ಸ್ಮಶಾನದ ಬಗ್ಗೆ ಜನರಲ್ಲಿ ಭಯ ಮತ್ತು ತಪ್ಪು ಕಲ್ಪನೆಗಳನ್ನು ಬಿತ್ತಲಾಗಿದೆ. ಇಂತಹ ಮೂಢ ನಂಬಿಕೆಗಳನ್ನು ಹೋಗಲಾಡಿಸಲು ಇಂತಹ ಸಮಾರಂಭಗಳು ಅಗತ್ಯ ಎಂದು ಹೇಳಿದರು.
ಹುಟ್ಟು ಮತ್ತು ಸಾವಿನ ಪಯಣದ ಬಗ್ಗೆ ಎಲ್ಲಾ ಧರ್ಮಗಳು ಬೇರೆ ಬೆರೆ ವ್ಯಾಖ್ಯಾನ ನೀಡಿವೆ. ದೇವರು ಒಬ್ಬ ನಾಮ ಹಲವು ಎಂಬ ಧರ್ಮ ಗ್ರಂಥಗಳ ಹೇಳಿಕೆ ಕೇಳುವುದಕ್ಕೆ ಮಾತ್ರ ಚೆನ್ನಾಗಿದೆ. ಆದರೆ, ಪಾಲನೆ ಮಾಡಲು ಸಾಧವಿಲ್ಲ. ಇದೊಂದು ಘೋಷಣಾರ್ಥಕವಾಗದ ಅರ್ಥ ಹೀನ ಮಾತು. ಇಂದಿಗೂ ಅನೇಕ ದೇವಸ್ಥಾನಗಳಲ್ಲಿ ಎಲ್ಲ ವರ್ಗದ ಜನರಿಗೂ ಮುಕ್ತ ಪ್ರವೇಶವಿಲ್ಲ. ಇಂತಹ ಸನ್ನಿವೇಶಗಳು ಬದಲಾಣೆ ಆಗಬೇಕಿದೆ. ಮಸೀದಿಯಲ್ಲಿ ಎ ಧರ್ಮದವರಿಗೂ ಮುಕ್ತ ಪ್ರವೇಶ ಇದೆ. ದೇವರು ಒಬ್ಬ ನಾಮ ಹಲವು ಎಂಬುದಕ್ಕೆ ಇದು ಸೂಕ್ತ ಉದಾಹರಣೆ ಎಂದು ಹೇಳಿದರು.
ಇತಿಹಾಸದಲ್ಲಿ ಸಾಮರಸ್ಯ ಸಾರುವ ಹಲವಾರು ಅನೇಕ ದೊರೆಗಳು ಆಳ್ವಿಕೆ ಮಾಡಿದ್ದಾರೆ. ಅಕ್ಬರ್, ಅಶೋಕ, ಇತ್ತೀಚಿನ ನಾಲ್ವಡಿ ಕೃಷ್ಟರಾಜ ಒಡೆಯರ್ ಅಂತಹ ರಾಜರು ತಮ್ಮ ಆಳ್ವಿಕೆಯ ಅವಧಿಯಲ್ಲಿ ಎಲ್ಲಾ ಧರ್ಮಗಳಿಗೂ ಗೌರವ ನೀಡಿದ್ದಾರೆ. ಅಕ್ಬರ್ ಕುರಾನ್ ಮತ್ತು ಭಗವದ್ಗೀತೆಯನ್ನು ಒಂದೆ ಕುರ್ಚಿಯಲ್ಲಿ ಇಟ್ಟು ಆಳ್ವಿಕೆ ಮಾಡಿದ್ದಾನೆ. ರಾಮಾಯಣ, ಮಹಾಭಾರತ ಮಹಾಕಾವ್ಯಗಳನ್ನು ಪರ್ಷಿಯನ್ನು ಭಾಷೆಗೆ ಅನುವಾದ ಮಾಡಿಸಿದ. ಸೂಫಿ ಸಂತರು ಸಮಾಜದ ಐಕ್ಯತೆ ಬಗ್ಗೆ ಪ್ರತಿಪಾದಿಸಿದರು. ಸಂತ ಪಂಥದಲ್ಲಿ ಎಲ್ಲಾ ಧರ್ಮದ ಜನರನ್ನು ಸಮಾನವಾಗಿ ಗೌರವಿಸಿತು. ಆದರೆ, ಇದನೆಲ್ಲಾ ಮರೆತು ಇಂದು ಸಂಘರ್ಷದೆಡೆಗೆ ಸಮಾಜ ನಡೆಯುತ್ತಿರುವುದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಕೆ.ಎಸ್‌ಭಗವಾನ್, ಕಾಂಗ್ರೆಸ್ ಮುಖಂಡ ಕೆ.ಮರಿಗೌಡ, ಜಮಾತೆ ಹಿಸ್ಲಾಂನ ಮಹಮ್ಮದ್ ಅಸ್ಲಾಂ, ಪ್ರೊ.ಕಾಳೇಚನ್ನೇಗೌಡ, ಪ್ರೊ.ಮೆಲ್ಲಳ್ಳಿ ರೇವಣ್ಣ, ಜಿಲ್ಲಾ ಸವಿತಾ ಸಮಾಜದ ಅಧಕ್ಷ ಎನ್.ಆರ್.ನಾಗೇಶ್, ಕ್ರಿಶ್ಚಿಯನ್ ಮುಖಂಡ ಆರ್.ಫ್ರಾಂಸಿಸ್, ಜೋಸೆಫ್ ಜಾಜಿ, ಯೋಗೇಶ್ ಉಪ್ಪಾರ, ರಫಿಕ್, ಗ್ರಾಮಾಂತರ ಕಾಂಗ್ರೆಸ್ ಅಧಕ್ಷ ಡಾ.ಬಿ.ಜೆ.ವಿಜಯ ಕುಮಾರ್ ಹಾಗೂ ಇತರರು ಇದ್ದರು.

RELATED ARTICLES
- Advertisment -
Google search engine

Most Popular