ಮೈಸೂರು: ಮಂಚೆಗೌಡನ ಕೊಪ್ಪಲು ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಂಚೆಗೌಡನ ಕೊಪ್ಪಲು ಗ್ರಾಮಸ್ಥರು ಮತ್ತು ಸಮಸ್ತ ನಾಗರೀಕರ ವತಿಯಿಂದ ನೂತನ ಶಾಸಕರಾದ ಕೆ.ಹರಿ ಗೌಡರಿಗೆ ನಾಗರಿಕ ಸನ್ಮಾನವನ್ನು ಮಂಚೇಗೌಡನ ಕೊಪ್ಪಲು ಶ್ರೀರಾಮಮಂದಿರದ ಮುಂಭಾಗ ಅದ್ದೂರಿಯಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಶಾಸಕರಾದ ಕೆ.ಹರೀಶ್ ಗೌಡರವರು ಮಾತನಾಡುತ್ತಾ ನಾನು ಗೆದ್ದ ಮಾರನೇ ದಿನ ಬಂದು ನಿಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದೇನೆ ಇಲ್ಲಿನ ಸಂಘದವರ ಒತ್ತಾಯಕ್ಕೆ ಸನ್ಮಾನ ಸ್ವೀಕರಿಸಿದ್ದೇನೆ ನಾನು ನಿಮ್ಮ ಮನೆಯ ಮಗ ಎಂದು ಭಾವುಕರಾದರು ಸುಮಾರು ನೂರು ಜನ ಮುಡಿ ಕೊಟ್ಟಿದ್ದಾರೆ ಅವರಿಗೆ ನಾನು ಋಣಿ ಈ ಭಾಗದಲ್ಲಿ ಕಚೇರಿಯೊಂದನ್ನು ತೆರೆದು ಗ್ರಾಮದ ಸಮಸ್ಯೆ ಏನೇ ಇದ್ದರೂ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ ಗ್ಯಾರಂಟಿ ಕಾರ್ಡ್ ಮಾಡುವುದಕ್ಕೆ ಅಗತ್ಯ ದಾಖಲೆ ಒದಗಿಸಿ ಮಾಡಿಕೊಳ್ಳಬೇಕು ಎಂದರು.
ನಿಮ್ಮ ಸಂಘದ ಗ್ರಾಮದ ಸಮಸ್ಯೆ ಬಗ್ಗೆ ಸರ್ವೇ ಮಾಡಿ ಶಿಕ್ಷಣ ಆರೋಗ್ಯಕ್ಕೆ ಹೆಚ್ಚು ಹೊತ್ತು ಕೊಡಿ ಈ ಸಂದರ್ಭದಲ್ಲಿ ಗ್ರಾಮದ ಸಮಸ್ಯೆಗಳ ಬಗ್ಗೆ ಪದಾಧಿಕಾರಿಗಳು ಶಾಸಕರಿಗೆ ಲಿಖಿತವಾಗಿ ಪತ್ರವನ್ನು ನೀಡಿದರು.
ಮಂಚೇಗೌಡನ ಕೊಪ್ಪಲು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ರಾಮಚಂದ್ರ, ಕಾರ್ಯದರ್ಶಿ ರವಿ ಮಂಚೇಗೌಡನ ಕೊಪ್ಪಲು, ಉಪಾಧ್ಯಕ್ಷ ಮಂಜುನಾಥ್, ಗ್ರಾಮದ ಯಜಮಾನರುಗಳಾದ ಮರಿಸ್ವಾಮಿ ಗೌಡರು ಪಟೇಲ್ ಗೋವಿಂದರಾಜು ಪಾಲಿಕೆ ಸದಸ್ಯರುಗಳಾದ ಪ್ರೇಮ ಶಂಕರೇಗೌಡ. ಗೋಪಿ ಹಾಜರಿದ್ದರು.