Friday, April 4, 2025
Google search engine

Homeಬ್ರೇಕಿಂಗ್ ನ್ಯೂಸ್ನಾಲ್ವಡಿ ಜಯಂತಿಗೆ ಜನಪ್ರತಿನಿಧಿಗಳಿಂದ ಅಗೌರವ: ಪ್ರೊ.ನಂಜರಾಜ ಅರಸ್ ಬೇಸರ

ನಾಲ್ವಡಿ ಜಯಂತಿಗೆ ಜನಪ್ರತಿನಿಧಿಗಳಿಂದ ಅಗೌರವ: ಪ್ರೊ.ನಂಜರಾಜ ಅರಸ್ ಬೇಸರ

ಮೈಸೂರು: ಜಿಲ್ಲಾಡಳಿತದಿಂದ ಆಯೋಜಿಸಿರುವ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಗೆ ಜನಪ್ರತಿನಿಧಿಗಳು ಆಗಮಿಸದೆ ಅಗೌರವ ತೋರಿದ್ದಾರೆ ಎಂದು ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸ್ ಬೇಸರ ವ್ಯಕ್ತಪಡಿಸಿದರು.
ನಾಡಿಗೆ ಸ್ಮರಣೀಯ ಕೊಡುಗೆ ನೀಡಿರುವ ನಾಲ್ವಡಿ ಅವರನ್ನು ಸ್ಮರಿಸಲು ಕಾರ್ಯಕ್ರಮ ಆಯೋಜಿಸಿದ್ದರೂ, ಸಚಿವರು, ಜಿಲ್ಲೆಯ ಶಾಸಕರು ಬಂದಿಲ್ಲ. ಅರಸು ಜನಾಂಗ ಸಣ್ಣ ಸಮುದಾಯವಾಗಿದ್ದು, ಓಟ್ ಬ್ಯಾಂಕ್ ಅಲ್ಲ ಎನ್ನುವ ತಾತ್ಸಾರ ಇರುವಂತಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿ ಟೀಕಿಸಿದರು.
ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಕೆ.ಆರ್.ವೃತ್ತದಲ್ಲಿ ಪುಷ್ಪಾರ್ಚನೆ ಮಾಡಿ, ತಮಗೆ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಲು ತಿ.ನರಸೀಪುರಕ್ಕೆ ತೆರಳಿದರು. ಜಿಲ್ಲೆಯ ಶಾಸಕರು, ಸಂಸದರು, ಎಂಎಲ್‌ಸಿಗಳ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇದ್ದರೂ, ಆಗಮಿಸಲಿಲ್ಲ. ಟಿ.ಎಸ್.ಶ್ರೀವತ್ಸ ಅವರು ಹೀಗೆ ಬಂದು, ಹಾಗೆ ತೆರಳಿದರು. ಇಂತಹ ಕಾಟಾಚಾರದ ಕಾರ್ಯಕ್ರಮವನ್ನು ಯಾಕೆ ಮಾಡಬೇಕು ಎಂದರು.
ದೊಡ್ಡ ಪ್ರಮಾಣದಲ್ಲಿ ಮತ ಬ್ಯಾಂಕ್ ಇರುವ ಜನಾಂಗದ ನಾಯಕರ ಜಯಂತಿ ಆಚರಿಸಿದ್ದರೆ, ಜನಪ್ರತಿನಿಧಿಗಳು ಎಂದು ಕರೆಸಿಕೊಳ್ಳುವವರು ಹೀಗೆ ಮಾಡುತ್ತಿದ್ದರೇ? ಅರಸು ಜನಾಂಗ ಸಣ್ಣದು ಎನ್ನುವ ಭಾವನೆ ಅವರಲ್ಲಿದೆ. ಆದರೆ ನಾಡುಕಟ್ಟಿದ ಪ್ರಭುಗೆ ಗೌರವ ಸೂಚಿಸುವುದು ಬೇಡವೇ ಎಂದು ಪ್ರಶ್ನಿಸಿದರು.

RELATED ARTICLES
- Advertisment -
Google search engine

Most Popular