ಮಂಡ್ಯ: ನಿರಾಶ್ರಿತರಿಗೆ ಸಹಾಯ ಮಾಡುವ ಉದ್ದೇಶದಿಂದ ನಿರಾಶ್ರಿತರ ತಾಣ ನಿರ್ಮಾಣ ಮಾಡಲಾಗಿದೆ ಇಲ್ಲಿ ಹೆಚ್ಚು ಜನರಿಗೆ ಆಶ್ರಯ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಹೆಚ್.ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪಿ.ಎಂ ಸ್ವನಿಧಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನ್ ಧನ್ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ, ಜನನಿ ಸುರಕ್ಷಾ ಯೋಜನೆ, ಮಾತೃ ವಂದನಾ ಯೋಜನೆ, ಒಂದು ದೇಶ- ಒಂದು ಕಾರ್ಡು, ಶ್ರಮ ಯೋಗಿ ಮನಧನ್ ಯೋಜನೆ, ಕಟ್ಟಡ ಮತ್ತು ಇತರೆ ಕಾರ್ಮಿಕರ ನೊಂದಣಿ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದರು.
ನಗರಸಭೆಗೆ ಸಂಬಂಧಿಸಿದಂತೆ ಅನೇಕ ಬೀದಿ-ಬದಿ ವ್ಯಾಪಾರಿಗಳಿದ್ದಾರೆ ಸಮೀಕ್ಷೆ ನಡೆಸಿ ಅವರಿಗೆ ದೊರಕಬೇಕಾದ ಎಲ್ಲ ಸವಲತ್ತುಗಳನ್ನು ಆದಷ್ಟು ಬೇಗ ಒದಗಿಸಿಕೊಡಲು ಸೂಚನೆ ಕೊಟ್ಟರು.
ಬೀದಿ ಬೀದಿ ವ್ಯಾಪಾರಿಗಳಿಗೆ ನೆರವಾಗಲು ಅನೇಕ ಬ್ಯಾಂಕ್ ಗಳ ಸಹಾಯದಿಂದ ಸಾಲ ಸೌಲಭ್ಯಗಳನ್ನು ಕಲ್ಪಿಸಲು ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದರು.
ರಾತ್ರಿ ವೇಳೆ ಬೀದಿ-ಬದಿಯಲ್ಲಿ ಮಲಗುವ ವಸತಿ ರಹಿತರಿಗೆ ಡೇ- ನಲ್ಮ್ ಯೋಜನೆ ಆಡಿ ಆಶ್ರಯ ತಾಣ ನಿರ್ಮಿಸಲಾಗಿದೆ. ಈ ಆಶ್ರಯ ತಾಣದಲ್ಲಿ ೩೦ ಜನರು ಆಶ್ರಯ ಪಡೆಯುವ ಸೌಲಭ್ಯವಿದೆ ಇಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳು ಇರುತ್ತದೆ.ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ವಸತಿ ತಾಣದ ವ್ಯವಸ್ಥೆ ಇರುತ್ತದೆ ನಿರಾಶ್ರಿತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಗರ ಸಭಾ ಆಯುಕ್ತರಾದ ಖ. ಮಂಜುನಾಥ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ. ಸಿದ್ದಲಿಂಗೇಶ್, ಕೇಂದ್ರ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ತು?ರಮಣಿ, ಲೀಡ್ ಬ್ಯಾಂಕ್ ಮ್ಯಾನೇಜರ್ ದೀಪಕ್, ಎನ್.ಜಿ.ಓ ಕ್ರೆಡಿಟ್ ಐ ಸಂಸ್ಥೆಯ ಮುಖ್ಯಸ್ಥರಾಗಿದ್ದ ಡಾ. ವರ್ಷ, ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಬ್ಯಾಂಕ್ ನ ವ್ಯವಸ್ಥಾಪಕರುಗಳು ಹಾಗೂ ಇನ್ನಿತರರಿದ್ದರು.
ನಿರಾಶ್ರಿತರಿಗೆ ಆಶ್ರಯ ನೀಡಿ: ಡಾ. ಹೆಚ್.ಎನ್ ಗೋಪಾಲಕೃಷ್ಣ
RELATED ARTICLES