ಮೈಸೂರು : ಪರಿಸರ ರಕ್ಷಣೆ ದೇಶದ ರಕ್ಷಣೆಯಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಸರವನ್ನು ಪ್ರೀತಿಸುವುದರ ಜೊತೆಗೆ ರಕ್ಷಣೆ ಮಾಡಬೇಕೆಂದು ನಾಗವಾಲ ಪಂಚಾಯ್ತಿಯ ಪಿ.ಡಿ.ಓ. ಡಾ. ಶೋಭಾರಣಿ ಕರೆ ನೀಡಿದರು.
ರಾಮಕೃಷ್ಣನಗರದಲ್ಲಿರುವ ವಿಶ್ವಮಾನವ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ೭೭ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹಿರಿಯರ ತ್ಯಾಗ, ಬಲಿದಾನ, ಹೋರಾಟದಿಂದ ನಮಗೆ ಸ್ವಾತಂತ್ರ್ಯ ಬಂದಿದೆ. ಆ ಸ್ವಾತಂತ್ರ್ಯ ವನ್ನು ನಾವು ಅನುಭವಿಸುತ್ತಿದ್ದೇವೆ. ಸಂಭ್ರಮಿಸುತ್ತಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಆದರೆ ಪರಿಸರವನ್ನು ಸಂರಕ್ಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಮೈಸೂರಿನಲ್ಲಿ ಇರುವುದೊಂದೆ ಭೂಮಿ ಅದನ್ನು ಉಳಿಸಿಕೊಳ್ಳೋಣ ಸ್ವಾಮಿ ಎಂಬ ಅಭಿಯಾನ ನಡೆಯುತ್ತಿದೆ. ಮನುಷ್ಯನಿಗೆ ಎಲ್ಲವೂ ಸಿಗುತ್ತಿದೆ. ಆದರೂ ಮರಗಿಡಗಳನ್ನು ಕಡಿಯುತ್ತಿದ್ದೇವೆ. ಇದು ನಿಲ್ಲಬೇಕು ವಿದ್ಯಾರ್ಥಿಗಳು ಭವಿಷ್ಯದ ಆಶಾಕಿರಣಗಳು ಎಲ್ಲಿ ಸಾಧ್ಯವೋ ಅಲ್ಲಿ ಗಿಡಗಳನ್ನು ನೆಡಿರಿ. ನೀರಿನ ಸಂರಕ್ಷಣೆ ಮಾಡಿ, ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ, ಬಟ್ಟೆ ಬ್ಯಾಗ್‌ಗಳನ್ನು ಬಳಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ನರ್ಸರಿ ಮಕ್ಕಳಿಂದ ಛದ್ಮವೇಷ ಪ್ರದರ್ಶನ ಮಾಡಲಾಯತು.

ಹಿರಿಯ ಕೆ.ಎ.ಎಸ್. ಅಧಿಕಾರಿ ಎಂ.ಕೆ. ಸವಿತಾರವರ ಸಹಕಾರದಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಬಿ.ಕೆ. ಚಂದ್ರಶೇಖರೇಗೌಡ, ಆಡಳಿತಾಧಿಕಾರಿ ಪ್ರೊ. ದಿವಾಕರ್, ವಿದ್ವಾನ್ ಶ್ರೀನಿವಾಸಮೂರ್ತಿ, ಮುಖ್ಯಶಿಕ್ಷಕಿ ವಿಜಯಲಕ್ಷಿö್ಮ, ವಾಣಿ, ಜ್ಞಾನವಿ, ಚಂದ್ರು ಹಾಜರಿದ್ದರು.