ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿನ ಸಂಶೋಧನಾ ವಿದ್ಯಾರ್ಥಿನಿಯಾದ ನವೀನಕುಮಾರಿ ಅವರು ಡಾ. ವೈ.ಎಚ್. ನಾಯಕವಾಡಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಮನ್ನಾಡು ಪ್ರದೇಶದಲ್ಲಿನ ಸಮಾಜ ಮತ್ತು ಆರ್ಥಿಕ ಬದಲಾವಣೆಗಳು (ಕ್ರಿಪೂ.೩ನೇ ಶತಮಾನದಿಂದ ಕ್ರಿ.ಶ.೧೦ನೆಯ ಶತಮಾನದವರೆಗಿನ ಐತಿಹಾಸಿಕ ಅಧ್ಯಯನ) ಎಂಬ ಮಹಾಪ್ರಬಂಧವನ್ನು ಇತಿಹಾಸ ವಿಷಯದಲ್ಲಿ ಪಿಹೆಚ್.ಡಿ ಪದವಿಗಾಗಿ, ೨೦೧೦ ಮೈಸೂರು ವಿಶ್ವವಿದ್ಯಾನಿಲಯದ ಪಿಹೆಚ್.ಡಿ ನಿಯಮಾವಳಿಯಡಿಯಲ್ಲಿ ಅಂಗೀಕರಿಸಲಾಗಿದೆ.
ಅಭ್ಯರ್ಥಿಯು ಮಹಾಪ್ರಬಂಧವನ್ನು ಕನ್ನಡ ಭಾಷೆಯಲ್ಲಿ ಸಿದ್ಧಪಡಿಸಿದ್ದು, ಸದರಿ ಪಿಹೆಚ್.ಡಿ ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಕ ವಿಭಾಗದ ಕುಲಸಚಿವರಾದ ಕೆ.ಎಂ.ಮಹದೇವನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.