Friday, April 4, 2025
Google search engine

Homeಅಡುಗೆಪೆಪ್ಪರ್ ಚಿಕನ್

ಪೆಪ್ಪರ್ ಚಿಕನ್

ರುಚಿಕರವಾದ ಪೆಪ್ಪರ್ ಚಿಕನ್ ಮಾಡುವ ವಿಧಾನ…

ಬೇಕಾಗುವ ಪದಾರ್ಥಗಳು

  • ಬೋನ್ ಲೆಸ್ ಚಿಕನ್ – ಅರ್ಧ ಕೆಜಿ
  • ಕಾಳು ಮೆಣಸಿನ ಪುಡಿ –ಒಂದು ಚಮಚ
  • ಶುಂಠಿ -ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ
  • ಕಾರ್ನ್‌ಫ್ಲೋರ್ –ಒಂದು ಚಮಚ
  • ಮೈದಾ ಹಿಟ್ಟು –ಎರಡು ಚಮಚ
  • ಈರುಳ್ಳಿ-2
  • ಹಸಿ ಮೆಣಸಿನಕಾಯಿ-4
  • ಬೆಳ್ಳುಳ್ಳಿ, ಶುಂಠಿ- ಸಣ್ಣಗೆ ಹೆಚ್ಚಿದ್ದು
  • ಮೊಟ್ಟೆ- 1
  • ಸೋಯಾ ಸಾಸ್ –ಸ್ವಲ್ಪ
  • ವೆನಿಗರ್ –ಸ್ವಲ್ಪ
  • ಟೊಮೊಟೊ ಸಾಸ್- ಸ್ವಲ್ಪ
  • ಖಾರದಪುಡಿ –ಅರ್ಧ ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ

  • ಒಂದು ಪಾತ್ರೆಗೆ ಚೆನ್ನಾಗಿ ತೊಳೆದ ಅರ್ಧ ಕೆ.ಜಿ ಚಿಕನ್, ಕಾಳು ಮೆಣಸಿನ ಪುಡಿ, ಶುಂಠಿ -ಬೆಳ್ಳುಳ್ಳಿ ಪೇಸ್ಟ್, ಒಂದು ಚಮಚ ಕಾರ್ನ್‌ಫ್ಲವರ್, ಮೈದಾ ಹಿಟ್ಟು -ಎರಡು ಚಮಚ, ಒಂದು ಮೊಟ್ಟೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, 15 ನಿಮಿಷಗಳ ಕಾಲ ನೆನೆಯಲು ಬಿಡಿ.
  • ಬಳಿಕ ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ನೆನೆಸಿಟ್ಟಿದ್ದ ಚಿಕನ್ ಅನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು.
  • ನಂತರ ಒಂದು ಅಗಲವಾದ ಪಾತ್ರೆಯನ್ನು ಒಲೆಯ ಮೇಲಿಟ್ಟು, ಸ್ವಲ್ಪ ಎಣ್ಣೆ ಹಾಕಿ, ಕಾದ ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಹಾಕಿ. ಈರುಳ್ಳಿ ಬೆಂದು ಕೆಂಪಾದ ಮೇಲೆ ಸೋಯಾ ಸಾಸ್, ವೆನಿಗರ್, ಟೊಮೊಟೊ ಸಾಸ್, ಖಾರದಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ.
  • ಬಳಿಕ ಫ್ರೈ ಮಾಡಿಕೊಂಡಿರುವ ಚಿಕನ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, 10ರಿಂದ 15 ನಿಮಿಷ ಬೇಯಲು ಬಿಡಿ. ಕೊನೆಯಲ್ಲಿ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ, ರುಚಿಕರವಾದ ಪೆಪ್ಪರ್ ಚಿಕನ್ ಸವಿಯಲು ಸಿದ್ಧ.
RELATED ARTICLES
- Advertisment -
Google search engine

Most Popular