ನಾಗಮಂಗಲ: ಪ್ರೀತಿಯ ನಿರಾಕರಣೆಯ ಹಿನ್ನೆಲೆಯಲ್ಲಿ ಮನೆಯ ಮುಂದೆ ಮದ್ದು ಸಿಡಿಸುವ ಸ್ಪೋಟಕವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗಮಂಗಲ ಸಮೀಪ ಬಸವೇಶ್ವರನಗರದಲ್ಲಿ ನಡೆದಿದೆ.
ನಾಗಮಂಗಲ ತಾಲೂಕಿನ ಕೆ.ಆರ್. ಪೇಟೆ ರಸ್ತೆ ಬಸವೇಶ್ವರ ನಗರದಲ್ಲಿ ರಾಮಚಂದ್ರ ಎಂಬ ಯುವಕ ಬಂಡೆ ಸಿಡಿಸಲು ಬಳಸುತ್ತಿದ್ದ ಜಿಲೆಟಿನ್ ಕಡ್ಡಿಗಳನನ್ನು ತನ್ನ ಮೈಗೆ ಕಟ್ಟಿಕೊಂಡು ಪ್ರೇಯಸಿಯ ಮನೆ ಮುಂದೆ ಸ್ಪೋಟಿಸಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ಆತ್ಮಹತ್ಯೆಗೆ ಬಳಸಿಕೊಂಡಿದ್ದ ಈ ಸ್ಫೋಟಕ ವಸ್ತುವಿನಿಂದ ಯುವಕನ ದೇಹ ಚೂರು ಚೂರಾಗಿದ್ದು ಕಳೆದ ವರ್ಷ ಯುವಕ ಅಪ್ರಾಪ್ತ ಪ್ರೇಮಿಯ ಜೊತೆ ಓಡಿ ಹೋಗಿದ್ದ ಎನ್ನಲಾಗಿದೆ. ಬಳಿಕ ಪೊಲೀಸರು ಯುವಕನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು ಎನ್ನಲಾಗಿದೆ. ಜಾಮೀನಿನ ಮೇಲೆ ಹೊರ ಬಂದಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.