Saturday, April 19, 2025
Google search engine

HomeUncategorizedಬಂಡೀಪುರ: ರೈತರಿಗೆ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆ

ಬಂಡೀಪುರ: ರೈತರಿಗೆ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆ

ಗುಂಡ್ಲುಪೇಟೆ: ಬಂಡೀಪುರ ಕಾಡಂಚಿನ ಗ್ರಾಮಗಳ ಜಮೀನುಗಳಲ್ಲಿ ಲಗ್ಗೆಯಿಟ್ಟು ಫಸಲು ನಾಶ ಮಾಡಿ ರೈತರಿಗೆ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು ಅರಣ್ಯಾಧಿಕಾರಿಗಳು ಕೊನೆಗೂ ಲೊಕ್ಕೆರೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವಿಭಾಗ ವ್ಯಾಪ್ತಿಯ ಕುಂದುಕೆರೆ ಹಾಗೂ ಜಿಎಸ್ ಬೆಟ್ಟ ವಲಯದ ವ್ಯಾಪ್ತಿಯಲ್ಲಿನ ಜನವಸತಿ ಪ್ರದೇಶ ಕೆಬ್ಬೆಪುರ, ಹುಂಡೀಪುರ, ಚೌಡಹಳ್ಳಿ, ಜಕ್ಕಹಳ್ಳಿ ಮಂಗಲ ಸೇರಿದಂತೆ ಕಾಡಂಚಿನ ಗ್ರಾಮಗಳಲ್ಲಿ ಪ್ರತಿದಿನ ರೈತರ ಜಮೀನುಗಳಿಗೆ ದಾಳಿ ಮಾಡಿ ಫಸಲು, ಆಸ್ತಿ-ಪಾಸ್ತಿ ನಷ್ಟ ಉಂಟು ಮಾಡುವುದಲ್ಲದೆ, ಸಾರ್ವಜನಿಕರ ಮೇಲೆ ದಾಳಿಗೆ ಮುಂದಾಗುತ್ತಿದ್ದ ಪುಂಡಾನೆಯನ್ನು ಹರ್ಷ, ಧನಂಜಯ, ಗಜೇಂದ್ರ, ಪಾರ್ಥಸಾರಥಿ ಮತ್ತು ಜಯಪ್ರಕಾಶ ಎಂಬ ಐದು ಸಾಕಾನೆಯ ಸಹಾಯದಿಂದ ಸೆರೆ ಹಿಡಿಯಲಾಗಿದೆ.

ಸತತ 5 ದಿನಗಳಿಂದ ಪುಂಡಾನೆಯ ಚಲನವಲನಗಳ ಮೇಲೆ ನಿಗಾ ಇರಿಸಿ ಡ್ರೋನ್ ಕ್ಯಾಮರಾ ಸಹಾಯದಿಂದ ಗುಡ್ಡೆಕರೆ ಅರಣ್ಯ ಪ್ರದೇಶದ ಸುತ್ತಮುತ್ತ ಕಾರ್ಯಚರಣೆ ನಡೆಸಿ ಆನೆ ಇರುವ ಗುರುತು ಪತ್ತೆ ಹಚ್ಚಲಾಯಿತು. ನಂತರ ಕಾವಾಡಿಗಳು ಹಾಗೂ ಸಾಕಾನೆ ಸಹಾಯದಿಂದ ಪಶು ವೈಧ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ಪುಂಡಾನೆಗೆ ಅರವಳಿಕೆ ಮದ್ದು ನೀಡುವ ಮೂಲಕ ನಿತ್ರಾಣಗೊಳ್ಳುವಂತೆ ಮಾಡಿ ಸೆರೆ ಹಿಡಿದ್ದಾರೆ.

ನಿಟ್ಟುಸಿರು ಬಿಟ್ಟ ಅಧಿಕಾರಿಗಳು ಹಾಗೂ ರೈತರು: ಪುಂಡಾನೆ ಉಪಟಳ ಹೆಚ್ಚಿದ್ದ ಕಾರಣ ಕಾಡಂಚಿಬ ಗ್ರಾಮಸ್ಥರು ಪ್ರಾಣಭಯದಿಂದ ಜಮೀನುಗಳಲ್ಲಿ ವಾಸ ಮಾಡಲು ಕೆಲಸ, ಕಾರ್ಯಗಳಿಗೆ ಹಿಂಜರಿಯುತ್ತಿದ್ದು, ಹಲವಾರು ರೈತರು ಬೇಸಾಯ ಮಾಡುವುದನ್ನ ಸ್ಥಗಿತಗೊಳಿಸಿದ್ದರು. ಇದರಿಂದ ಬೇಸತ್ತ ರೈತರು ಮೇ 5ರಂದು ಹುಂಡೀಪುರ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿ ಆರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದನ್ನರಿತ ಅರಣ್ಯ ಸಂರಕ್ಷಣಾಧಿಕಾರಿಗಳು ಕೂಡಲೇ ಕಾಡಾನೆ ಸೆರೆಗೆ ಕ್ರಮ ವಹಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಅದರಂತೆ ಸತತ 5 ದಿನಗಳ ಕಾಲ ಸತತವಾಗಿ ಕೂಂಬಿಂಗ್ ನಡೆಸಿ ಪುಂಡಾನೆ ಸೆರೆಹಿಡಿಯಲಾಗಿದೆ. ಇದರಿಂದ ಅರಣ್ಯಾಧಿಕಾರಿಗಳು ಹಾಗೂ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular