ಕೆ.ಆರ್.ನಗರ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಈದ್-ಅಲ್-ಅಧ಼್ (ಬಕ್ರೀದ್) ಹಬ್ಬವನ್ನು ವಿಶ್ವಧ್ಯಾಂತ ಸಡಗರ ದಿಂದ ಆಚರಿಸಲಾಗುತ್ತದೆ ಎಂದು ಜಾಮೀಯ ಮಸ್ಜಿದ್ ಗುರುಗಳಾದ ಮುಫ್ತಿ ಜೈನೂಲ್ಲಾಬಿದ್ದೀನ್ ವರ್ಣಿಸಿದರು.
ಪಟ್ಟಣದ ಜಾಮೀಯ ಮಸ್ಜಿದ್ ಬಳಿಯಿಂದ ಜಮವಣೆಗೊಂಡು ಮೆರವಣಿಗೆದೊಂದಗೆ ಈದ್ಗಾ ಮೈದಾನಾಕ್ಕೆ ತೆರಳಿ ಸಮೂಹಿಕ ಪ್ರಾರ್ಥನೆ ಗೈದು ಪ್ರವಚನ ಮಾಡಿದ ಅವರು ಇಸ್ಲಾಮಿಕ್ ಅಥವಾ ಚಂದ್ರನ ಕ್ಯಾಲೆಂಡರ್‌ನ ಹನ್ನೆರಡನೇ ತಿಂಗಳಾದ ಜುಲ್ ಹಿಜ್ಜಾ/ದುಲ್ ಅಲ್-ಹಿಜ್ಜಾ ತಿಂಗಳಲ್ಲಿ ಈ ಹಬ್ಬವನ್ನ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಪ್ರವಾದಿ ಇಬ್ರಾಹಿಂ ಅವರ ಅಲ್ಲಾನಿಗೆ ತನ್ನದೆಲ್ಲವನ್ನ ಸಮರ್ಪಣೆ ಮಾಡಿಕೊಂಡಿದ್ದರು ಎನ್ನುವ ನಂಬಿಕೆ ಇದೆ. ಈ ದಿನ, ಈದ್ಗಾಗಳಲ್ಲಿ ಮತ್ತು ಮಸೀದಿಗಳಲ್ಲಿ ಜಮಾತ್ ಜೊತೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬಕ್ರೀದ್ ದಿನದಂದು ಬೆಳಗ್ಗೆ ನಮಾಝ್ ಅರ್ಪಿಸುವುದರೊಂದಿಗೆ ಆಚರಣೆ ಪ್ರಾರಂಭವಾಗುತ್ತದೆ. ಈ ಸಂತೋ?ದ ಸಂದರ್ಭಗಳಲ್ಲಿ ಬಡವರಿಗೆ ಸಹಾಯ ಮಾಡಬೇಕೆಂದು ಇಸ್ಲಾಂನಲ್ಲಿ ಹೇಳಲಾಗಿದೆ ಎಂದರು.
ದುಲ್ ಅಜ್-ಹಿಜ್ಜಾದ ಹತ್ತನೇ ದಿನದಂದು, ಪ್ರಪಂಚದಾದ್ಯಂತದ ಮುಸ್ಲಿಮರು ಈದ್-ಉಲ್-ಅಧಾವನ್ನು ಒಂದು ಪ್ರಾಣಿಯನ್ನು .ಸಾಮಾನ್ಯವಾಗಿ ಸಾಮಾನ್ಯವಾಗಿ ಕುರಿ, ಮೇಕೆಯನ್ನ ದೇವರಿಗೆ ಸ್ಮರಣಾರ್ಥ ಬಲಿ ಕೊಡುವ ಮೂಲಕ ಆಚರಿಸಲಾಗುತ್ತದೆ. ಈ ಹಬ್ಬವನ್ನ ಪ್ರಪಂಚದಾದ್ಯಂತ ವಿವಿಧ ಸಮಯದಲ್ಲಿ ಆಚರಿಸಲಾಗುತ್ತದೆ. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ನಮಾಜ್ ಸಮಯದ ವಿಭಿನ್ನವಾಗಿದೆ. ಕ್ರೀದ್ ಹಬ್ಬವು ಮುಸ್ಲಿಂ ಸಮುದಾಯದವರ ಪವಿತ್ರ ಹಬ್ಬವಾಗಿದ್ದು, ಇದು ಇಬ್ರಾಹಿಂನ ತ್ಯಾಗವನ್ನು ಮತ್ತು ಭಕ್ತರ ಮೇಲೆ ಅಲ್ಲಾಹುವಿಗಿದ್ದ ಭಕ್ತಿಯನ್ನು ನೆನೆಯುವ ದಿನವಾಗಿದೆ ಎಂದು ಹೇಳಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ ತ್ಯಾಗ ಮತ್ತು ಬಲಿದಾನದ ಬಕ್ರೀದ್ ಹಬ್ಬದ ಶುಭವನ್ನು ಕೋರಿ ಮಾತನಾಡಿದ ಶಾಸಕರು ನಿವು ನನ್ನಗೆ ಶಕ್ತಿ ತುಂಬಿ ಹಾಗೂ ಬೆಂಬಲಿಸಿ ಶಾಸಕರನ್ನಾಗಿ ಮಾಡಿದ್ದಿರಿ ಹಾಗೂ ಮುಸ್ಲಿಂ ಬಡಾಬಣೆಯ ಅಭಿವೃದ್ಧಿ ಕಾರ್ಯಗಳು ಮತ್ತು ಮೂಲ ಸೌಕರ್ಯ ಗಳಿಗೆ ಹೆಚ್ಚು ವತ್ತು ನೀಡಲಾಗುವುದು ಮತ್ತು ಸಚಿವರಾದ ಝಮೀರ್ ಅಹಮ್ಮದ್ ರವರ ಜೊತೆ ಅಭಿವೃದ್ದಿಗೆ ಅಂದಾಜು ಪಟ್ಟಿ ಯನ್ನು ಸಿದ್ದಪಡಿಸಿಲಾಗುವುದು ಎಂದರರು.
ಜಾಮೀಯ ಮಸ್ಜಿದ್ ಮುಂಭಾಗ ವಿರುವ ಮಿಲಾದ್ ಪಾರ್ಕಿನಲ್ಲಿರುವ ಕಾರ್ಯಕ್ರಮದ ಮಂಟಪದ ಕಾಮಗಾರಿ ಹಾಗೇ ಉಳಿದಿದ್ದು ಮುಂದೆ ಮಿಲಾದ್ ಹಬ್ಬ ಬರುವ ಮುನ್ನ ಅಭಿವೃದ್ಧಿ ಪಡಿಸಲಾಗುವುದು ಮತ್ತು ಸಮುದಾಯ ಭವನವನ್ನು ಸಹ ಇಲಾಖೆಯ ಅಧಿಕಾರಗಳ ಜೊತೆ ಚರ್ಚಿಸಿ ಅನುದಾನ ತಂದು ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಮೌಲಾನಾ ಆಲಿ ಹುಸೇನ್, ಖ್ಯಾತ ಮೂಳೆ ತಜ್ಞ ಹಾಗೂ ಸಮುದಾಯದ ಮುಖಂಡ ಡಾ.ಮೆಹಬೂಬ್ ಖಾನ್, ಪುರಸಭಾ ಸದಸ್ಯ ಜಾಮೀದ್ ಪಾಷ, ಸೈಯಾದ್ ಸಿದ್ದಿಕ್, ಮಾಜಿ ಸದಸ್ಯ ಸೈಯಾದ್ ಅಸ್ಲಂ, ಮುಹಮ್ಮದ್ ಸಿರಾಜ್, ಜಾಮೀಯ ಮಸ್ಜಿದ್ ಅಧ್ಯಕ್ಷ ಅಫ್ಸರ್ ಬಾಬು, ಕಾರ್ಯದರ್ಶಿ ತಸವ್ವರ್ ಪಾಷ, ಸದಸ್ಯರಾದ ಇರ್ಷಾದ್ ಪಾಷ, ನಸೀರ್, ಮುಜಾಹೀದ್, ತಾಜ್ ವಸೀಂ, ಫರೋಕ್, ಸಮುದಾಯದ ಮುಖಂಡರಾದ ನವೀದ್, ನವಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು.
