Saturday, April 19, 2025
Google search engine

Homeಸ್ಥಳೀಯಬಡವರ, ಶ್ರಮಿಕರ, ಮಹಿಳೆಯರ ಸಬಲೀಕರಣಕ್ಕಾಗಿ ಪೂಜ್ಯ ಖಾವಂದರ ಕನಸ್ಸಿನ ಕೂಸುಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸದಾ...

ಬಡವರ, ಶ್ರಮಿಕರ, ಮಹಿಳೆಯರ ಸಬಲೀಕರಣಕ್ಕಾಗಿ ಪೂಜ್ಯ ಖಾವಂದರ ಕನಸ್ಸಿನ ಕೂಸುಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸದಾ ಸಿದ್ದ

 

 

ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್‌ಕುಮಾರ್ ಎಸ್ ಎಸ್ ಅಭಿಮತಕೆ

ಆರ್.ನಗರ: ಮಹಿಳೆಯರು ಈ ಹಿಂದೆ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಸಂದರ್ಭದಲ್ಲಿ ಮಾತೃಶ್ರೀ ಅಮ್ಮನವರು ನೀಡಿದ ಅದ್ಭುತ ಪರಿಕಲ್ಪನೆಯ ಜ್ಞಾನವಿಕಾಸ ಕೇಂದ್ರಗಳು ಮಹಿಳೆಯರು ಎದುರಿಸುತ್ತಿದ್ದ ಆರೋಗ್ಯ, ನೈರ್ಮಲ್ಯ, ಶಿಕ್ಷಣ, ಕಾನೂನಿನ ಬಗ್ಗೆ ಅವರಿಗೆ ಮಾರ್ಗದರ್ಶನ ನೀಡಿದೆ, ಮುಂದೆಯೂ ಕೂಡಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಪೂಜ್ಯ ಖಾವಂದರು ಹಾಗೂ ಮಾತೃಶ್ರೀ ಅಮ್ಮನವರ ಅಶಯದಂತೆ ಸಂಸ್ಥೆ ಸಿದ್ದವಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್‌ಕುಮಾರ್ ಎಸ್ ಎಸ್ ತಿಳಿಸಿದರು

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ) ವತಿಯಿಂದ ಆಯೋಜಿಸಿದ್ದ ಜ್ಞಾನ ವಿಕಾಸ ಕೇಂದ್ರಗಳ ಉದ್ಘಾಟನೆ, ಸ್ವ-ಉದ್ಯೋಗ ಕಾರ್ಯಕ್ರಮದಡಿ ಹೊಲಿಗೆ ಯಂತ್ರಗಳ ವಿತರಣೆ ಹಾಗೂ ಬೀದಿ ಬದಿ ವ್ಯಾಪಾರಿಗಳ ಸ್ವಸಹಾಯ ಸಂಘವನ್ನು ಉದ್ಘಾಟಿಸಿ ಮಾತಾನಾಡಿದ ಅವರು ಮೂರು ದಶಕಗಳ ಹಿಂದೆ ಸಂಸ್ಥೆಯ ವತಿಯಿಂದ ಇಂತಹ ಕಾರ್ಯಕ್ರಮ ಆಯೋಜಿಸಿ ಫಲಾನುಭವಿಗಳಿಗೆ ಸ್ವ-ಉದ್ಯೋಗಕ್ಕೆ ನೆರವಾಗುವ ಯಂತ್ರಗಳ ವಿತರಿಸಲಾಗುತ್ತಿತ್ತು ಆದರೆ ಇಂದು ಕೆ.ಆರ್.ನಗರದಲ್ಲಿ ಅಂತಹ ಇತಿಹಾಸ ಮರುಕಳಿಸಿದೆ ಎಂದರಲ್ಲದೇ ಜೆವಿಕೆ ಕೇಂದ್ರಗಳು ದೂರದೃಷ್ಠಿಯ ಮಾತೃಶ್ರೀ ಅಮ್ಮನವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು,ಈ ಕೇಂದ್ರಗಳಿಂದ ಮಹಿಳೆಯರ ಸಬಲೀಕರಣಕ್ಕೆ ಎಲ್ಲಾ ರೀತಿಯ ಜ್ಞಾನ ನೀಡುವುದು ಈ ಯೋಜನೆಯ ಧ್ಯೇಯವಾಗಿದೆ, ಹಾಗಾಗಿ ಇಂದು ರಾಜ್ಯದಲ್ಲಿ ಇದರಿಂದ ೩ ಲಕ್ಷ ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ, ಅಲ್ಲದೇ ಕುಟುಂಬದ ಸಮಗ್ರ ಅಭಿವೃದ್ದಿ, ಮಹಿಳೆಯರ ಆರೋಗ್ಯ ಸೇರಿದಂತೆ ೬ ಆಯಾಮಗಳಲ್ಲಿ ಇದು ಕರ್ತವ್ಯ ನಿರ್ವಹಿಸುತ್ತಿದ್ದು, ವಾತ್ಸಲ್ಯ ಕಿಟ್, ವಾತ್ಸಲ್ಯಮಿಕ್ಸ್, ಸೂರಿಲ್ಲದ ಕಡುಬಡವರಿಗೆ ವಾತ್ಸಲ್ಯ ಮನೆ ಸೇರಿದಂತೆ ಆನೇಕ ಆರ್ಥಿಕ ನೇರವು ನೀಡುವ ವಾತ್ಸಲ್ಯಮಯಿ ಕಾರ್ಯಕ್ರಮವಾಗಿದೆ ಎಂದರು.

ಬೀದಿಬದಿ ವ್ಯಾಪಾರಿಗಳನ್ನು ಉದ್ದೇಶಿಸಿ ಇಂದಿನ ನಮ್ಮ ವ್ಯಾಪಾರಿಗಳು ಸ್ವತಂತ್ರಪೂರ್ವದಿಂದಲೂ ೩ ತಲೆಮಾರುಗಳು ಕೂಡ ಸೈಕಲ್‌ನಲ್ಲಿ ವ್ಯಾಪಾರ ಮಾಡುತ್ತಾ ಬಂದಿದ್ದಾರೆ ಇದು ನಿಜಕ್ಕೂ ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿ ನಿಮ್ಮ ಸಂಘಟನೆಯ ಕೂಗು ವಿಧಾನಸೌಧಕ್ಕೂ ಕೇಳಲ್ಲ, ಪಾರ್ಲಿಮೆಂಟ್‌ಗೂ ಕೇಳಲ್ಲ, ಆದ್ದರಿಂದ ನಿಮ್ಮ ಕೂಗು ನಿಮ್ಮಿಂದಲೇ ಬಗೆಹರಿಯಲಿ ಅದಕ್ಕಾಗಿ ಯೋಜನೆ ನಿಮ್ಮ ಜೊತೆಯಲ್ಲಿ ಎಂದಿಗೂ ಇರುತ್ತದೆ, ನೀವು ವ್ಯಾಪಾರ ಮಾಡುವ ಸ್ಥಳಗಳಲ್ಲಿ ಕುಡಿಯಲು ಶುದ್ದ ನೀರು ಕೂಡ ಇರುವುದಿಲ್ಲ, ಸರಿಯಾದ ಆಹಾರ ಇರುವುದಿಲ್ಲ ಇದರಿಂದ ನಿಮ್ಮ ಆರೋಗ್ಯವೂ ಹಾಳಾಗುತ್ತಿದೆ, ಹಾಗಾಗಿ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ನೀಡಲು ತಿಳಿಸಿದರಲ್ಲದೆ, ಪ್ರಸ್ತುತ ಬೆಳಗ್ಗೆಯಿಂದ ರಾತ್ರಿಯವರೆಗೆ ಬಡ ವ್ಯಾಪಾರಿಗಳಾದ ನೀವು ಬಂಡವಾಳಕ್ಕಾಗಿ ಬೆಳಗ್ಗೆ ಉಳ್ಳವರ ಬಳಿ ಹೆಚ್ಚು ಬಡ್ಡಿಗೆ ಸಾಲ ಪಡೆದು ರಾತ್ರಿಗೆ ೧೦೦೦ ಕ್ಕೆ ೧೧೦೦ ರೂ ಕಟ್ಟಬೇಕಾದ ಸ್ಥಿತಿ ಇದೆ, ಇದರಿಂದ ನೀವು ದುಡಿದ ಲಾಭವನ್ನು ಬಡ್ಡಿಯಾಗಿ ಕಟ್ಟಿದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಸಬಲವಾಗಲೂ ಹೇಗೆ ಸಾಧ್ಯ ಎಂದು ವಿಮರ್ಶೆ ನಡೆಸಿದ ಅವರು ಅದಕ್ಕಾಗಿ ನಿಮ್ಮನ್ನು ಸಂಘಟಿರಾಗಿಸಲು ಸ್ವ-ಸಹಾಯ ಸಂಘಗಳನ್ನು ಮಾಡಿ ಮೊದಲ ಬಾರಿಗೆ ಕಡಿಮೆ ಬಡ್ಡಿ ದರದಲ್ಲಿ ೩೫೦೦೦/- ಸಾಲ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಂತರ ಸಾಂಕೇತಿಕವಾಗಿ ೫೮ ಮಂದಿ ಹೊಲಿಗೆ ತರಬೇತಿ ಪಡೆದ ಫಲಾನುಭವಿಗಳಿಗೆ ಹೊಲಿಗೆ ಯಂತ್ರವನ್ನು ವಿತರಿಸಿದರು ಹಾಗೂ ಜ್ಙಾನವಿಕಾಸ ಕೇಂದ್ರಗಳು ಹಾಗೂ ಬೀದಿಬದಿ ವ್ಯಾಪಾರಿಗಳ ಸ್ವಸಹಾಯ ಸಂಘ ಉದ್ಘಾಟಿಸಿ ದಾಖಲಾತಿ ಹಸ್ತಾಂತರಿಸಿದರು.
ಪ್ರಾದೇಶಿಕ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯರವರು ಮಾತನಾಡಿ ಇದುವರೆಗೂ ಜಿಲ್ಲೆಯಲ್ಲಿ ೬ ಹೊಲಿಗೆ ಯಂತ್ರ ತರಬೇತಿ ನಡೆಸಲಾಗಿದ್ದು, ಇದರಲ್ಲಿ ತರಬೇತಿ ಪಡೆದವರು ಹಣಕಾಸಿನ ಕೊರತೆಯಿಂದಾಗಿ ಸ್ವ-ಉದ್ಯೋಗದಿಂದ ವಂಚಿತರಾಗಿದ್ದರೂ ಹಾಗಾಗಿ ಅಂತಹವರಿಗೆ ಪ್ರೇರಣೆ ನೀಡಿ ಪ್ರಗತಿನಿಧಿ ಮೂಲಕ ಆರ್ಥಿಕ ನೇರವು ಒದಗಿಸಿ ಇಂದು
ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದೆ ಹಾಗೂ ತಾಲೂಕಿನಲ್ಲಿ ೨೫ ಜ್ಞಾನಕಾಸ ಕೇಂದ್ರಗಳು ಕಾರ್ಯಚರಣೆ ನಡೆಸುತ್ತಿದ್ದು, ಪ್ರಸ್ತುತ ಕೆ.ಆರ್.ನಗರ ಯೋಜನಾ ಕಛೇರಿಯನ್ನು ೨ ಯೋಜನಾ ಕಛೇರಿಯಾಗಿ ವಿಂಗಡಿಸಲಾಗುತ್ತಿದ್ದು, ೨ ಯೋಜನಾ ಕಛೇರಿಗಳಿಂದ ಇದೀಗ ೫೦ ಕೇಂದ್ರಗಳನ್ನು ಮಾಡುವ ಗುರಿ ಹೊಂದಿದ್ದು, ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸಂಸ್ಥೆ ಸದಾ ಸಿದ್ದವಿದೆ ಎಂದು ಭರವಸೆ ನೀಡಿದರು.
ಪುರಸಭಾ ಸಿಎಓ ಡಾ.ಬಿ.ಎಸ್.ಶಂಕರ್‌ರವರು ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಇನ್ನೂ ಮುಂದೆ ಸಂಸ್ಥೆಯೊಂದಿಗೆ ಸೇರಿ ಇತರೆ ಸವಲತ್ತುಗಲನ್ನು ವ್ಯಾಪಾರಿಗಳಿಗೆ ತಲುಪಿಸುವ ಕೆಲಸ ಮಾಡುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಮುರಳೀಧರ್ ಹೆಚ್ ಎಲ್, ಒಕ್ಕೂಟದ ಅಧ್ಯಕ್ಷೆ ಶಿಲ್ಪ, ಬೀದಿ ಬದಿ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷ ಮಹದೇವ್, ಪುರಸಭಾ ಸದಸ್ಯರಾದ ಮಂಜುಳಾ ಚಿಕ್ಕವೀರು, ಮಾಜಿ ಸದಸ್ಯೆ ನಾಗರತ್ನಮ್ಮ, ಜನಜಾಗೃತಿ ವೇದಿಕೆ ಸದಸ್ಯರಾದ ಸಂಪತ್‌ಕುಮಾರ್, ಶೇಖರ್, ಶಕುಂತಲ ಹಾಗೂ ಸಂಸ್ಥೆಯ ಯೋಜನಾಧಿಕಾರಿಗಳಾದ ರಮೇಶ್, ಧನಂಜಯ್, ಪ್ರಭಾ ಕೆ ಶೆಟ್ಟಿ ಇತರರು ಇದ್ದರು.

RELATED ARTICLES
- Advertisment -
Google search engine

Most Popular