Saturday, April 19, 2025
Google search engine

Homeಬ್ರೇಕಿಂಗ್ ನ್ಯೂಸ್ಮೂವರು ಖದೀಮರ ಬಂಧನ: ೧೮ ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ

ಮೂವರು ಖದೀಮರ ಬಂಧನ: ೧೮ ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ

ಮೈಸೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ಸೇರಿದಂತೆ ನಗದು ದೋಚುತ್ತಿದ್ದ ಮೂವರು ವೃತ್ತಿ ನಿರತ ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ೧೮ ಲP ರೂ.ಮೌಲ್ಯದ ೨೮೯ ಗ್ರಾಂ ಚಿನ್ನಾಭರಣ ಮತ್ತು ೨.೪ ಕೆಜಿ ಬೆಳ್ಳಿ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ ತಿಂಗಳಲ್ಲಿ ಹುಣಸೂರು ಪಟ್ಟಣದ ಮಾರುತಿ, ಮಂಜುನಾಥ ಬಡಾವಣೆಯಲ್ಲಿ ನಡೆದಿದ್ದ ಮನೆ ಕಳವು ಪ್ರಕರಣ ಸಂಬಂಧ ತನಿಖೆ ಆರಂಭಿಸಿದ್ದ ಹುಣಸೂರು ಪಟ್ಟಣ ಪೊಲೀಸರು, ಹಾಸನ ಜಿಯ ಚನ್ನರಾಯಪ್ಪಣ್ಣದ ಮಂಜುನಾಥ್ ಅಲಿಯಾಸ್ ಚೂಟಿ ಮಂಜು (೪೦), ಮುರುಗೇಶ್ ಅಲಿಯಾಸ್ ಕಪ್ಪೆ (೪೦), ಹುಣಸೂರಿನ ಗೋಪಿಕೃಷ್ಣ ಅಲಿಯಾಸ್ ಗೋಪಿ (೫೮) ಎಂಬ ವೃತ್ತಿನಿರತ ಖದೀಮರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಹುಣಸೂರು ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿ ಬಡಾವಣೆ ಮತ್ತು ಮಂಜುನಾಥ ಬಡಾವಣೆಗಳಲ್ಲಿ ರಾತ್ರಿ ಕಳವು ಪ್ರಕರಣಗಳು ಆಗಿದ್ದವು. ಈ ಸಂಬಂಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಮೇ ತಿಂಗಳಿನಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀPಕಿ ಡಾ.ನಂದಿನಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ತಂಡ ಮೂವರು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ವಿರುದ್ಧ ಹುಣಸೂರು ಪಟ್ಟಣ ಠಾಣೆಯಲ್ಲಿ ೫, ಪಿರಿಯಾಪಟ್ಟಣ ಠಾಣೆಯಲ್ಲಿ ೧, ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ೧, ಒಟ್ಟು ಮೈಸೂರು ಜಿಯಲ್ಲಿ ೭ ಪ್ರಕರಣಗಳು ಇವರ ವಿರುದ್ಧ ದಾಖಲಾಗಿರುವುದು ಕಂಡು ಬಂದಿದೆ ಎಂದರು.
ಬಂಧಿತರಿಂದ ೧೮ ಲP ರೂ.ಮೌಲ್ಯದ ೨೮೯ ಗ್ರಾಂ ಚಿನ್ನಾಭರಣ ಮತ್ತು ೨.೪ ಕೆಜಿ ಬೆಳ್ಳಿ ಪದಾರ್ಥಗಳು ಮತ್ತು ಮನೆಗಳ ಬಾಗಿಲ ಲಾಕ್ ಮುರಿಯಲು ಬಳಸುತ್ತಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಕಳವು ಮಾಡಿದ ಸ್ವತ್ತನ್ನು ಗಿರವಿ ಇಡಲು ಹೋಗುವ ವೇಳೆ ಇಬ್ಬರನ್ನು ಹುಣಸೂರಿನಲ್ಲಿ ಮತ್ತು ಒಬ್ಬರನ್ನು ಕೆ.ಆರ್.ನಗರದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.
ಮೂವರು ಆರೋಪಿಗಳು ಹಳೆಯ ಕಳ್ಳರೇ (ಎಂಒಬಿ) ಆಗಿzರೆ. ಬೇರೆ ಜಿಗಳಲ್ಲಿ ಇವರ ವಿರುದ್ಧ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ವಿಚಾರಣಾಧೀನ ಕೈದಿಗಳಾಗಿದ್ದಾರೆ. ಇವರಲ್ಲಿ ಇಬ್ಬರು ಜ್ಯುಡಿಷಿಯಲ್ ಕಸ್ಟಡಿಯಲ್ಲಿ ಶಿಕ್ಷೆ ಅನುಭವಿಸಿ ಹೊರಗೆ ಬಂದಿzರೆ. ಜತೆಗೆ ಈ ಮೂವರು ಜೈಲಿನಲ್ಲಿರುವಾಗಲೇ ಸ್ನೇಹಿತರಾಗಿದ್ದವರಾಗಿzರೆ ಎಂದರು.
ಮಧಮ ವರ್ಗದ ಕುಟುಂಬಗಳ ಮನೆಗಳನ್ನೇ ಗುರಿಯಾಗಿಸಿಕೊಳ್ಳುತ್ತಿದ್ದ ಖದೀಮರ ತಂಡ, ಯಾವ ಮನೆ ಲಾಕ್ ಆಗಿದೆ ಎಂಬುದನ್ನು ಪತ್ತೆ ಮಾಡಿಕೊಂಡು ರಾತ್ರಿ ವೇಳೆ ಕಬ್ಬಿಣದ ಸಲಕರಣೆಗಳನ್ನು ಬಳಸಿ ಮನೆಯ ಮುಂಬಾಗಿಲ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿವೆ ೨೮ ಬ್ಲಾಕ್ ಸ್ಪಾಟ್: ಇತ್ತೀಚೆಗೆ ತಿ.ನರಸೀಪುರದ ಮೂಗೂರು ಬಳಿಯ ಹೆದ್ದಾರಿಯಲ್ಲಿ ನಡೆದಿದ್ದ ಅಪಘಾತಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಹೆzರಿ ಪ್ರಾಧಿಕಾರ ಹೈವೇಯಲ್ಲಿ ಅಪಘಾತ ತಡೆಗೆ ತPಣಕ್ಕೆ ಮತ್ತು ದೀರ್ಘಕಾಲಿಕವಾಗಿ ಏನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಒಂದು ಸಲಹೆ ನೀಡಿzವೆ. ಜತೆಗೆ ನಮ್ಮ ಪೊಲೀಸ್ ಇಲಾಖೆಯಿಂದ ಜಿಯಲ್ಲಿ ೨೮ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಅಪಘಾತ ತಡೆಗೆ ಮುನ್ನೆಚ್ಚರಿಕೆ ವಹಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಎಸ್ಪಿ ಸೀಮಾ ಲಾಟ್ಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀPಕಿ ಡಾ.ನಂದಿನಿ, ಹುಣಸೂರು ಉಪವಿಭಾಗದ ಡಿಎಸ್ಪಿ ಎಂ.ಕೆ.ಮಹೇಶ್, ಹುಣಸೂರು ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಸ್.ಎಂ.ದೇವೇಂದ್ರ, ಎಎಸ್‌ಐ ಪುಟ್ಟನಾಯಕ ಹಾಗೂ ಸಿಬ್ಬಂದಿ ಇದ್ದರು.


RELATED ARTICLES
- Advertisment -
Google search engine

Most Popular