ಬೆಲೆಬಾಳುವ ಸಿಸಿಕ್ಯಾಮರ, ಪೀಡ್ಜ್ ಸೇರಿದಂತೆ ೩ಲಕ್ಷಕ್ಕೂ ಹೆಚ್ಚು ನಷ್ಟ
ಸರಗೂರು: ಪಟ್ಟದಲ್ಲಿ ಬೇಕರಿಗೆ ಬೆಂಕಿ ತಗುಲಿ ಅಪಾರ ಪದಾರ್ಥಗಳು ಸುಟ್ಟು ಕರಕಲಾಗಿದೆ, ಬೆಲೆಬಾಳುವ ಸಿಸಿಕ್ಯಾಮರ, ಪೀಡ್ಜ್ ಸೇರಿದಂತೆ ತಿಂಡಿತಿನಸುಗಳು ಬೆಂಕಿಗೆ ಹಾವುತಿಯಾಗಿದ್ದು ೩ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.
ಪಟ್ಟಣದಲ್ಲಿ ನ್ಯೂ ಹಾಸನ್ ಅಯ್ಯಾಗರ್ ಬೇಕರಿ ಮಾಲಿಕರಾದ ನಟರಾಜ್ ೧೩ ವರ್ಷಗಳಿಂದ ಬೇಕರಿ ನಡೆಸಿಕೋಂಡು ಬರುತ್ತಿದ್ದರು, ಎಂದಿನಂತೆ ಬುಧವಾರ ರಾತ್ರಿ ತಮ್ಮ ಕೆಲಸಮುಗಿಸಿ ಬೇಕರಿ ಮುಚ್ಚಿ ಮನೆಗೆ ತೆರಳಿದ್ದಾರೆ, ಸುಮಾರು ರಾತ್ರಿ ೧೧ ಗಂಟೆ ಹೋತ್ತಿಗೆ ಬೇಕರಿಯಲ್ಲಿ ಬೆಂಕಿ ಹೋಗೆ ಕಾಣುತ್ತಿದ್ದನ್ನು ಪಕ್ಕದ ಮನೆಯವರು ನೋಡಿ ನಟರಾಜ್ ರವರ ಮೋಬೈಲ್ ನಂಬರಿಗೆ ಕರೆ ಮಾಡಿ ತಿಳಿಸಿದ್ದಾರೆ, ತಕ್ಷಣ ಬಂದು ಬಾಗಿಲು ತೆಗೆದು ನೋಡಿದಾಗ ಬೆಂಕಿಯ ಜ್ವಾಲೆಯಿಂದ ಒಳಗಿದ್ದ ಸಮಾನುಗಳು ಉರಿಯುತ್ತಿದ್ದು ಕಂಡ ಮಾಲಿಕ ನಟರಾಜ್ ಹಾಗೂ ಸ್ನೇಹಿತರು ಸೇರಿ ನೀರನ್ನು ಎರಚಿದರು ಯಾವುದೇ ಪ್ರಯೋಜನವಾಗಲಿಲ್ಲಾ, ನೋಡು ನೋಡುತ್ತಿದಂತೆ ಬೆಂಕಿಯ ಜ್ವಾಲೆಗೆ ಅಂಗಡಿಯಲಿದ್ದ ಎಲ್ಲಾ ಪದಾರ್ಥವು ಸುಟ್ಟು ಕರಕಲಾಗಿದೆ.
ಬೇರೆ ಊರಿನಿಂದ ಹೋಟ್ಟೆ ಪಾಡಿಗಾಗಿ ಅಂಗಡಿ ಬಾಡಿಗೆಗೆ ಪಡೆದು ಕೈಸಾಲ ಪಡೆದು ಬೇಕರಿ ವ್ಯಾಪರ ನಡೆಸಿಕೊಂಡು ಹೋಗಿತ್ತಿದ್ದೆ, ಇಂದು ಬೇಕಿಹಾವುತಿಯಿಂದ ಎಲ್ಲವನ್ನು ಕಳೆದುಕೊಂಡಿದ್ದೇನೆ ಎಂದು ಬಾವುಕರಾಗಿ ತಮ್ಮ ಕಸ್ಟವನ್ನು ತೋಡಿಕೊಂಡರು, ಬೇಂಕಿ ಯಾವರೀತಿ ಕಾಣಿಸಿಕೊಂಡಿದೆ ಎಂಬುದೆ ಅನುಮಾನದ ಪ್ರಶ್ನೇಯಾಗಿದೆ, ಇಂತಹ ಪರಿಸ್ಥಿತಿಯಲ್ಲಿ ವರ್ತಕರು ಸಂಘ ಸಂಸ್ಥೆಗಳು ಇವರ ನೆರವಿಗೆ ದಾವಿಸಬೇಕಿದೆ.