Friday, April 18, 2025
Google search engine

Homeಸ್ಥಳೀಯಭಾರತದ ಯೋಗ ಇಂದು ವಿಶ್ವಮಾನ್ಯತೆ ಪಡೆದಿದೆ : ವೈದ್ಯ ನಟರಾಜ್

ಭಾರತದ ಯೋಗ ಇಂದು ವಿಶ್ವಮಾನ್ಯತೆ ಪಡೆದಿದೆ : ವೈದ್ಯ ನಟರಾಜ್


ಕೆ.ಆರ್.ನಗರ: ಭಾರತದಲ್ಲಿ ಪ್ರಾರಂಭವಾದ ಯೋಗ ಇಂದು ವಿಶ್ವಮಾನ್ಯತೆ ಪಡೆದುಕೊಂಡಿದೆ ಎಂದು ವೈದ್ಯರಾದ ನಟರಾಜ್ ಹೇಳಿದರು.
ಪಟ್ಟಣದ ಪತಂಜಲಿ ಯೋಗಾಶ್ರಮ ಟ್ರಸ್ಟ್‌ನ ವತಿಯಿಂದ ಯೋಗಭವನದಲ್ಲಿ ಏರ್ಪಡಿಸಿದ್ದ ೯ನೇ ಅಂತರಾಷ್ಟೀಯ ಯೋಗಾದಿನಾಚgಣೆಯಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಇಂದು ಯೋಗಕ್ಕೆ ತನ್ನದೇ ಅದ ಶಕ್ತಿ ಇದೆ ಅ ಶಕ್ತಿ ಇರುವುದರಿಂದಲೇ ವಿಶ್ವಸಂಸ್ಥೆಯಲ್ಲಿ ಮಾನ್ಯತೆ ಪಡೆದು ಇಂದು ಇಡೀ ವಿಶ್ವದಲ್ಲೇ ಸುಮಾರು ೧೮೦ ದೇಶಗಳಿ ಯೋಗದಿನಾಚರಣೆಯನ್ನು ಆಚರಣೆ ಮಾಡುತ್ತಿರುವುದಕ್ಕೆ ಸಾಕ್ಷಿ. ನಮ್ಮ ದೇಶಕ್ಕಿಂತ ಬೇರೆ ದೇಶಗಳು ಇಂದು ಯೋಗಕ್ಕೆ ಹೆಚ್ಚಿನ ಮಹತ್ವವನ್ನು ನೀಡಿವೆ ಎಂದರು.
ಈ ಯೋಗ ನಮ್ಮ ಪುರಾತನ ಕಾಲದಿಂದಲೂ ನಮ್ಮ ಭಾರತದಲ್ಲಿ ಇದೆ. ನಮ್ಮ ಪತಂಜಲಿ ಮುನಿಗಳು ಈ ಯೋಗವನ್ನು ಮಾಡುತ್ತಿದ್ದು ಸಾವಿರಾರು ವರ್ಷಗಳ ಇತಿಹಾಸವಿದೆ. ಸಾವಿರಾರು ವರ್ಷಗಳಿಂದ ಯೋಗಕ್ಕೆ ತನ್ನದೇ ಅದ ಮಹತ್ವವಿದ್ದು ಅಧುನಿಕ ಕಾಲದಲ್ಲಿ ಪ್ರತಿದಿನ ಯೋಗ ಮಾಡುವುದರಿಂದ ನಾವು ಒತ್ತಡವನ್ನು ಕಡಿಮೆ ಮಾಡುವುದಲ್ಲದೇ ದೇಹವನ್ನು ಸುಸ್ಥಿತಿಯಲ್ಲಿ ಇಡಬಹುದು ಮತ್ತು ಯೋಗ ಮುಕ್ತರಾಗಬಹುದು ಅದ್ದರಿಂದ ಪ್ರತಿದಿನ ಯೋಗ ಮಾಡಿ ರೋಗ ಮುಕ್ತರಾಗಿ ಎಂದು ಕಿವಿಮಾತು ಹೇಳಿದರು.
ಡಾ.ರಾಜ್‌ಕುಮಾರ್ ರವರು ಯೋಗಾಸನದಲ್ಲಿ ರಾಜ್ಯಕ್ಕೆ ಮಾಡಲ್ ಆಗಿದ್ದರು ತಮ್ಮ ಇಳಿವಯಸ್ಸಿನಲ್ಲೂ ಕೂಡ ಯೋಗವನ್ನು ಅಭ್ಯಾಸ ಮಾಡಿ ದೇಹವನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡಿದ್ದರು. ಇವರು ಅನೇಕ ಚಿತ್ರಗಳಲ್ಲಿ ಯೋಗವನ್ನು ಪ್ರಚಾರ ಮಾಡಿ ಯೋಗದ ಮಹತ್ವವನ್ನು ಸಾರಿದ್ದರು. ಇವರು ಅತ್ಯಂತ ಕಠಿಣ ಅಸನಗಳ ಜೊತೆಗೆ ಪ್ರಾಣಾಯಾಮವನ್ನು ಕೂಡು ಅತ್ಯಂತ ಶ್ರದ್ದಭಕ್ತಿಯಿಂದ ಮಾಡುತ್ತಿದ್ದರು ಎಂದು ಡಾ.ರಾಜ್ ಕುಮಾರ್ ರವರ ಯೋಗಸನವನ್ನು ನೆನಪಿಸಿದರು.
ನಮ್ಮ ಆರೋಗ್ಯ ಉತ್ತಮವಾಗಿರಬೇಕಾದರೆ ಉಸಿರಾಟ ಅತಿಮುಖ್ಯ ಅದ್ದರಿಂದ ನಾವು ಅತಿಹೆಚ್ಚು ಹೆಚ್ಚು ಉಸಿರಾಟಕ್ಕೆ ಸಂಬಂಧಿಸಿದ ಪ್ರಾಣಾಯಾಮಗಳನ್ನು ಮಾಡಬೇಕು. ನಾವು ಉಸಿರಾಟವನ್ನು ನಿಯಂತ್ರಣ ಮಾಡಿದರೇ ನಾವು ಧೀರ್ಘಾಯುಷಿಗಳಾಗಬಹುದು. ನಮ್ಮ ಆರೋಗ್ಯ ಉತ್ತಮ ಸ್ಥಿತಿಯಲ್ಲಿರಬೇಕಾದರೆ ವ್ಯಾಯಾಮ, ಯೋಗಾಸನದ ಜೊತೆಗೆ ಆಹಾರ ಪದ್ದತಿಯೂ ಅತಿ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗಾಶ್ರಮ ಟ್ರಸ್ಟ್‌ನ ಅಧ್ಯಕ್ಷರಾದ ಪಿ.ಆರ್.ವಿಶ್ವನಾಥ್‌ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಿ.ಟಿ.ಪ್ರಸಾದ್, ಅತಿಥಿ ಉಪನ್ಯಾಸಕ ಹೆಚ್.ಡಿ.ರಾಘವೇಂದ್ರ, ಯೋಗ ಬಂಧುಗಳಾದ ವೈ.ಎಸ್.ಕುಮಾರ್, ರಾಜಶ್ರೀಕಾಂತ್, ಅಣ್ಣಯ್ಯ, ಭದ್ರಪ್ಪ, ಬ್ಯಾಂಕ್ ರಮೇಶ್, ಕೆ.ವಿ.ಜಗದೀಶ್, ಶಿವಕುಮಾರ್, ಶ್ರೀಧರ್, ಮಹದೇವರಾವ್, ಹೆಚ್.ಸೋಮಶೇಖರ್, ರಾ.ಸುರೇಶ್, ಆನಂದ್, ಲೋಕೇಶ್, ಶ್ಯಾಮ್ ಸುಂದರ್, ರಾಮಣ್ಣ, ಸ್ಪಿನ್ ಕೃಷ್ಣ, ಚೈತನ್ಯ, ಯೋಗಮಣಿ, ರೇವಣ್ಣ, ಅಭಿ, ರಾಜೇಶ್, ಟೀಚರ್ ಭಾಸ್ಕರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular