Saturday, April 19, 2025
Google search engine

HomeUncategorizedಭಾರತದ ಸಣ್ಣ ರೈತರನ್ನು ಸಬಲರನ್ನಾಗಿ ಮಾಡಲು ಬಾಯರ್ ಮತ್ತು ಕಾರ್ಗಿಲ್ ಪಾಲುದಾರಿಕೆ

ಭಾರತದ ಸಣ್ಣ ರೈತರನ್ನು ಸಬಲರನ್ನಾಗಿ ಮಾಡಲು ಬಾಯರ್ ಮತ್ತು ಕಾರ್ಗಿಲ್ ಪಾಲುದಾರಿಕೆ

ಮೈಸೂರು: ಡಿಜಿಟಲ್ ಸಲೂಶನ್ ಮೂಲಕ ರೈತರ ನೆರವಿಗೆ ಧಾವಿಸಲಿರುವ ಪಾಲುದಾರಿಕೆ ಮುಂದಿನ ಐದು ವರ್ಷಗಳಲ್ಲಿ ಭಾರತದ ೩ ಮಿಲಿಯನ್ ಗೂ ಅಧಿಕ ರೈತರಿಗೆ ಪ್ರಯೋಜನದ ಗುರಿ ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಜಾರಿ, ಮುಂಬರುವ ದಿನಗಳಲ್ಲಿ ಇತರ ಭಾಗಗಳಿಗೂ ವಿಸ್ತರಣೆಯಾಗಿದೆ.

ಕೃಷಿ ಮತ್ತು ಆರೋಗ್ಯ ರಕ್ಷಣೆಯ ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಮುಖ ಸಂಸ್ಥೆಯಾಗಿರುವ ಬಾಯರ್ ಜಾಗತಿಕ ಮಟ್ಟದಲ್ಲಿ ಆಹಾರ ವ್ಯವಸ್ಥೆ ಕ್ಷೇತ್ರದಲ್ಲಿ ಸಂಪರ್ಕ ಕಲ್ಪಿಸುವಲ್ಲಿ ಮುಂಚೂಣಿಯಲ್ಲಿರುವ ಕಾರ್ಗಿಲ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಕಾರ್ಯತಂತ್ರದ ಪಾಲುದಾರಿಕೆಯು ರೈತರಿಗೆ ನವೀನ ಮಾದರಿಯ ಪರಿಹಾರಗಳನ್ನು ಒದಗಿಸುವ ಮೂಲಕ ಹಾಗೂ ಅವರ ಉತ್ಪನ್ನಗಳಿಗೆ ಸೂಕ್ತ ಬೆಲೆಯನ್ನು ಒದಗಿಸುವ ಮೂಲಕ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟು ಮಾಡುವ ಗುರಿಯನ್ನು ಹೊಂದಿದೆ. ಕಾರ್ಗಿಲ್ ನ ಹೈಪರ್ ಲೋಕಲೈಸ್ಡ್ ಅಗತ್ಯಗಳಿಗೆ ಅನುಗುಣವಾಗಿ ಮೊಟ್ಟ ಮೊದಲ ಮೊಬೈಲ್ ಎಐ ಚಾಲಿತ ಸೇವಾ ಪ್ಲಾಟ್ ಫಾರ್ಮ್ ಆಗಿರುವ `ಡಿಜಿಟಲ್ ಸಾಥಿ’ಯನ್ನು ವಿನ್ಯಾಸಗೊಳಿಸಲಾಗಿದೆ. ಇದೇ ವೇಳೆ, ಬಾಯರ್ ನ `ಬೆಟರ್ ಲೈಫ್ ಫಾರ್ಮಿಂಗ್ ಸೆಂಟರ್? ಗಳ ಮೂಲಕ ೫,೦೦,೦೦೦ ಅಧಿಕ ಸಣ್ಣ ಹಿಡುವಳಿದಾರರಿಗೆ ಬೆಂಬಲ ನೀಡಲಾಗುತ್ತಿದೆ. ಈ ಎರಡೂ ಸಂಸ್ಥೆಗಳು ಇದೀಗ ಒಟ್ಟಾಗಿ ರೈತರು ಮತ್ತು ಅದರಲ್ಲೂ ಸಣ್ಣ ಹಿಡುವಳಿದಾರರಿಗೆ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ಪ್ರವೇಶವನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಕೈಗೊಳ್ಳಲಿವೆ.

ಬಾಯರ್ ಮತ್ತು ಕಾರ್ಗಿಲ್ ಒಟ್ಟಾಗಿ ಚರ್ಚಾ ವೇದಿಕೆಗಳನ್ನು ಸಿದ್ಧಪಡಿಸುವುದು, ಮಾರುಕಟ್ಟೆ ಬೆಲೆಗಳು ಸಮಗ್ರ ಮಾಹಿತಿ, ಹವಾಮಾನ ಮುನ್ಸೂಚನೆಗಳು ಮತ್ತು ಕೊಯ್ಲಿನ ನಂತರದಲ್ಲಿನ ಚಟುವಟಿಕೆಗಳನ್ನು ಒಳಗೊಂಡಂತೆ ಡಿಜಿಟಲ್ ಪರಿಹಾರಗಳನ್ನು ಒದಗಿಸುವ ಮೂಲಕ ರೈತರನ್ನು ಸಜ್ಜುಗೊಳಿಸುವ ಬದ್ಧತೆಯನ್ನು ಹೊಂದಿವೆ. ಬಾಯರ್ ನ ಇ-ಕಾಮರ್ಸ್ ತಂತ್ರವು ಡಿಜಿಟಲ್ ಸಾಥಿ ಅಪ್ಲಿಕೇಶನ್ ನ ಮೂಲಕ ಸೂಕ್ತವಾದ ಪರಿಹಾರಗಳನ್ನು ವಿಸ್ತರಣೆ ಮಾಡುವುದನ್ನು ಒಳಗೊಂಡಿರುತ್ತದೆ. ಕರ್ನಾಟಕದಲ್ಲಿ ಮೆಕ್ಕೆಜೋಳ ಕೃಷಿಯಿಂದ ಆರಂಭವಾಗಿ ನಂತರ ಇತರ ಬೆಳೆಗಳು ಮತ್ತು ಪ್ರದೇಶಗಳಿಗೂ ವಿಸ್ತರಣೆ ಮಾಡಲಾಗುತ್ತದೆ. ಆಹಾರ ಮೌಲ್ಯ ಸರಪಳಿ ಪಾಲುದಾರರೊಂದಿಗೆ ಸಹಯೋಗ ಮಾಡುವ ಮೂಲಕ ಕೃಷಿ ಕ್ಷೇತ್ರದ ಮೇಲೆ ಕ್ರಾಂತಿಕಾರಕ ಮತ್ತು ಸುಸ್ಥಿರ ಪರಿಣಾಮ ಬೀರುವುದು ಗುರಿಯಾಗಿದೆ. ಈ ಪಾಲುದಾರಿಕೆಯು ರೈತರಿಗೆ ಡಿಜಿಟಲ್ ಸಾಥಿ ಪ್ಲಾಟ್ ಫಾರ್ಮ್ ನಲ್ಲಿ ಬಾಯರ್ ನ ಪ್ರಮುಖ ಕಾರ್ನ್ ಪೋರ್ಟ್ ಫೋಲಿಯೋ, ಆಇಏಂಐಃಲ ಗೆ ಪ್ರವೇಶವನ್ನು ಕಲ್ಪಿಸಲಿದ್ದು, ಅವರ ಕೃಷಿ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.

ಹೆಚ್ಚುವರಿಯಾಗಿ, ಕಾರ್ಗಿಲ್ ನ ಡಿಜಿಟಲ್ ಸಾಥಿ ಪ್ಲಾಟ್ ಫಾರ್ಮ್ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಾಪ್ ಇನ್ಪುಟ್ ಇ-ಕಾಮರ್ಸ್ ಮತ್ತು ಕ್ರಾಪ್ ಸೆಲ್ ಆಫರ್ ವೈಶಿಷ್ಟ್ಯತೆಗಳನ್ನು ನೀಡುತ್ತದೆ. ಈ ಮೂಲಕ ರೈತರು ಉತ್ತಮ-ಗುಣಮಟ್ಟದ ಕ್ರಾಪ್ ಇನ್ಪುಟ್ ಗಳಿಗೆ ಸುಧಾರಿತ ಪ್ರವೇಶವನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ. ಅದೇ ರೀತಿ, ಡಿಜಿಟಲ್ ಸಕ್ರಿಯಗೊಂಡ ಮಾರುಕಟ್ಟೆಗಳ ಮೂಲಕ ರೈತರು ಹಾಗೂ ವ್ಯಾಪಾರಿಗಳ ನಡುವೆ ಉತ್ತಮ ರೀತಿಯ ಮಾರುಕಟ್ಟೆ ಸಂಪರ್ಕವನ್ನು ಕಲ್ಪಿಸುತ್ತದೆ. ಈ ಸಂಯೋಜಿತ ವಿಧಾನವು ರೈತರು ತಮ್ಮ ಉತ್ಪನ್ನಗಳ ಮಾರಾಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯಗಳನ್ನು ಹೆಚ್ಚಿಸಲು, ಕೃಷಿ ಕಾರ್ಯಾಚರಣೆಗಳನ್ನು ಸುಗಮಗೊಳಿಸುವುದು ಹಾಗೂ ಕೃಷಿ ಪರಿಸರ ವ್ಯವಸ್ಥೆಯೊಳಗೆ ಸಮರ್ಥವಾದ ಹಾಗೂ ತಡೆರಹಿತವಾದ ಸಂಪರ್ಕಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಡಿಜಿಟಲ್ ಸಾಥಿಯಲ್ಲಿ ಈಗಾಗಲೇ ೫೦,೦೦೦ ಸಣ್ಣ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ೨೦೨೭ ರ ವೇಳೆಗೆ ಕರ್ನಾಟಕ ಮತ್ತು ಮಧ್ಯಪ್ರದೇಶ ಸೇರಿದಂತೆ ಎಂಟು ರಾಜ್ಯಗಳ ೩ ಮಿಲಿಯನ್ ಗೂ ಅಧಿಕ ಸಣ್ಣ ರೈತರನ್ನು ನೋಂದಣಿ ಮಾಡಿಸುವ ಮೂಲಕ ಸೇವೆಯನ್ನು ವಿಸ್ತರಣೆ ಮಾಡುವ ಗುರಿಯನ್ನು ಹೊಂದಲಾಗಿದೆ. ೨೦೩೦ ರ ವೇಳೆಗೆ ೧೦ ಮಿಲಯನ್ ಗೂ ಅಧಿಕ ರೈತರಿಗೆ ಸುಸ್ಥಿರವಾದ ಕೃಷಿ ಪದ್ಧತಿಗಳ ಬಗ್ಗೆ ತರಬೇತಿ ಮತ್ತು ಅವರ ಮಾರುಕಟ್ಟೆ ಪ್ರವೇಶ ಪ್ರಕ್ರಿಯೆಯನ್ನು ಸುಧಾರಣೆ ಮಾಡುವ ಕಾರ್ಗಿಲ್ ನ ಜಾಗತಿಕ ಉದ್ದೇಶದ ಹಿನ್ನೆಲೆಯಲ್ಲಿ ಡಿಜಿಟಲ್ ಸಾಥಿಯನ್ನು ಪರಿಚಯಿಸಲಾಗಿದ್ದು, ಈ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಮುನ್ನಡಿ ಇಡಲಾಗಿದೆ.

ಪಾಲುದಾರಿಕೆ ಬಗ್ಗೆ ಮಾತನಾಡಿದ ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಬಾಯರ್ ನ ಕ್ರಾಪ್ ಸೈನ್ಸ್ ಡಿವಿಶನ್ ನ ಕಂಟ್ರಿ ಡಿವಿಶನ್ ಹೆಡ್ ಸೈಮನ್-ಥಾರ್ಸ್ಟೆನ್ ವಿಬುಶ್ ಅವರು, “ಸಣ್ಣ ಹಿಡುವಳಿದಾರರು ಅಥವಾ ಸಣ್ಣ ರೈತರ ಮೌಲ್ಯಗಳನ್ನು ಅನ್ಲಾಕ್ ಮಾಡುವ ನಿಟ್ಟಿನಲ್ಲಿ ಸಲಹೆಗಳು, ಗುಣಮಟ್ಟದ ಇನ್ಪುಟ್ ಗಳು, ಕ್ರೆಡಿಟ್, ತಂತ್ರಜ್ಞಾನಗಳು ಅಥವಾ ಮಾರುಕಟ್ಟೆಗಳಿಗೆ ಪ್ರವೇಶವನ್ನು ಕಲ್ಪಿಸುವ ಪ್ರಕ್ರಿಯೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ದಿಸೆಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಈ ಒಪ್ಪಂದದ ಪಾತ್ರವೂ ಪ್ರಮುಖವಾಗಿದೆ. ಡಿಜಿಟಲೀಕರಣವು ಈ ಪ್ರಕ್ರಿಯೆಯಲ್ಲಿ ಪ್ರಮುಖವಾಗಿದೆ ಎಂಬುದನ್ನು ನಾವು ನಂಬುತ್ತೇವೆ. ಈ ಹಿನ್ನೆಲೆಯಲ್ಲಿ ಸಣ್ಣ ರೈತರಿಗೆ ಹೆಚ್ಚಿನ ಮೌಲ್ಯವನ್ನು ತಂದುಕೊಡಲು ಮತ್ತು ಅವರಿಗೆ ಉತ್ತಮವಾದ ವೇದಿಕೆಯನ್ನು ರಚಿಸುವ ನಿಟ್ಟಿನಲ್ಲಿ ನಾವು ಸಮರ್ಥರಾಗಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸಂಬಂಧಿತ ಡಿಜಿಟಲ್ ಸಾಧನಗಳ ಬಳಕೆಯನ್ನು ಎದುರು ನೋಡುತ್ತಿದ್ದೇವೆ ಎಂದರು.

ಭಾರತದಲ್ಲಿ ಕಾರ್ಗಿಲ್ ನ ಅಧ್ಯಕ್ಷ ಸೈಮನ್ ಜಾರ್ಜ್ ಅವರು ಮಾತನಾಡಿ, “ಕಾರ್ಗಿಲ್ ನಲ್ಲಿ ನಾವು ನವೀನ ಮಾದರಿಯ ಡಿಜಿಟಲ್ ಸಲೂಶನ್ ಗಳನ್ನು ರಚನೆ ಮಾಡುವಲ್ಲಿ ನಿರತರಾಗಿದ್ದೇವೆ. ಭಾರತದಾದ್ಯಂತ ಇರುವ ರೈತರಿಗೆ ಉತ್ಪಾದಕತೆ ಮತ್ತು ಲಾಭದಾಯಕ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಾಯರ್ ನೊಂದಿಗೆ ಸಹಭಾಗಿತ್ವ ಹೊಂದುತ್ತಿರುವುದಕ್ಕೆ ನಮಗೆ ಸಂತೋಷವೆನಿಸುತ್ತಿದೆ. ಈ ಪಾಲುದಾರಿಕೆಯು ಸುಸ್ಥಿರ ಮತ್ತು ಸಮೃದ್ಧ ಕೃಷಿಯತ್ತ ನಮ್ಮ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸುತ್ತದೆ. ನಮ್ಮ ಈ ಸಂಯೋಜಿತ ಸಾಮರ್ಥ್ಯ, ಪರಿಣತಿ ಮತ್ತು ಜಾಗತಿಕ ಸಂಪರ್ಕಜಾಲಗಳನ್ನು ನಿಯಂತ್ರಿಸುವ ಮೂಲದ ವಿಶ್ವದಾದ್ಯಂತ ರೈತರಿಗೆ ಬೆಂಬಲ ನೀಡುವುದು ಮತ್ತು ಅವರ ಆರ್ಥಿಕ ಪರಿಸ್ಥಿತಿಯನ್ನು ಚೇತರಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು.

ಪಾಲುದಾರಿಕೆ ಬಗ್ಗೆ ಮಾತನಾಡಿದ ಡಿಜಿಟಲ್ ಸಾಥಿಯ ಸಂಸ್ಥಾಪಕ ರಾಮನ್ ಸಕ್ಸೇನಾ ಅವರು, “ನಾವು ಈ ವರ್ಷದ ಆರಂಭದಲ್ಲಿ ನಮ್ಮ ಪ್ಲಾಟ್ ಫಾರ್ಮ್ ನಲ್ಲಿ ಕೃಷಿ ಸಲಹಾ ಚಂದಾದಾರಿಕೆ ಮತ್ತು ಕೃಷಿ ನಿರ್ವಹಣಾ ಸೇವೆಗಳ (ಮಣ್ಣು ಪರೀಕ್ಷೆ) ನ್ನು ಪರಿಚಯಿಸಿದ್ದೇವೆ. ರೈತರಿಗೆ ಅವರ ಕೃಷಿ ಅಗತ್ಯಗಳಿಗೆ ಸಮಗ್ರ ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಈ ಪಾಲುದಾರಿಕೆ ಮೂಲಕ ಕೃಷಿ ಇನ್ಪುಟ್ ಮಾರುಕಟ್ಟೆ ಮೂಲಕ ರೈತರಿಗೆ ವ್ಯಾಪಕವಾದ ಶ್ರೇಣಿಯ ಗುಣಮಟ್ಟದ ಇನ್ಪುಟ್ ಗಳು ಮತ್ತು ಉಪಕರಣಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಈ ಸೇವೆಗಳ ಮೂಲಕ ರೈತರು ತಮ್ಮ ಬೆಳೆಗಳ ಇಳುವರಿಯನ್ನು ಸುಧಾರಣೆ ಮಾಡಿಕೊಳ್ಳಬಹುದು ಮತ್ತು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಡಿಜಿಟಲ್ ಸಾಥಿ ಇಂಗ್ಲೀಷ್, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ. ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯಗಳ ರೈತರನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದ್ದು, ರೈತರು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಬಾಯರ್ ಮತ್ತು ಕಾರ್ಗಿಲ್ ಸಹಭಾಗಿತ್ವವು ಮುಂದಿನ ಐದು ವರ್ಷಗಳಲ್ಲಿ ಭಾರತದಾದ್ಯಂತ ೩ ಮಿಲಿಯನ್ ಗೂ ಅಧಿಕ ರೈತರನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದ್ದು, ಆರಂಭಿಕ ಹಂತದಲ್ಲಿ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಸಹಭಾಗಿತ್ವದ ಯೋಜನೆಗಳು ಜಾರಿಗೆ ಬರಲಿದ್ದು, ಮುಂಬರುವ ದಿನಗಳಲ್ಲಿ ದೇಶದ ಇತರ ಭಾಗಗಳಿಗೂ ವಿಸ್ತರಣೆ ಮಾಡಲಾಗುತ್ತದೆ.

RELATED ARTICLES
- Advertisment -
Google search engine

Most Popular