Sunday, April 20, 2025
Google search engine

Homeಸ್ಥಳೀಯಭಾಷೆ, ಪುಸ್ತಕ ಪ್ರೀತಿ ಬೆಳೆಸುತ್ತಿರುವ ಪತ್ರಿಕೆಗಳು

ಭಾಷೆ, ಪುಸ್ತಕ ಪ್ರೀತಿ ಬೆಳೆಸುತ್ತಿರುವ ಪತ್ರಿಕೆಗಳು


ಮೈಸೂರು: ಕನ್ನಡ ಭಾಷೆ, ಪುಸ್ತಕ ಸಂಸ್ಕೃತಿ ಬೆಳೆಸುವಲ್ಲಿ ಪತ್ರಿಕೆಗಳ ಕೊಡುಗೆ ಅಪಾರ ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹೇಳಿದರು.
ಮೈಸೂರು ವಿವಿ ಯುಜಿಸಿ-ಮಾನವ ಸಂಪನ್ಮೂಲ ಕೇಂದ್ರದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ರಾಜ್ಯದ ಕನ್ನಡ ಸಹಾಯಕ ಪ್ರಾಧ್ಯಾಪಕರಿಗೆ ಏರ್ಪಡಿಸಿರುವ ೪೯ನೇ ಪುನಶ್ಚೇತನ ಕಾರ್ಯಕ್ರಮದಲ್ಲಿ ಕನ್ನಡ ಪತ್ರಿಕೆಗಳಲ್ಲಿ ಸಾಹಿತ್ಯ ಮತ್ತು ತಂತ್ರeನ ಬಳಕೆ ಕುರಿತು ಬುಧವಾರ ಉಪನ್ಯಾಸ ನೀಡಿದ ಅವರು, ಪತ್ರಿಕೋದ್ಯಮದ ಮೂಲ ದ್ರವ್ಯವೇ ಸಾಹಿತ್ಯ. ಸಾಹಿತ್ಯ ಇಲ್ಲದೇ ಪತ್ರಿಕೆಗಳನ್ನು ಊಹಿಸಲು ಸಾಧ್ಯವೇ ಇಲ್ಲ ಎಂದರು.
ಕಲೆ ಹಾಗೂ ಸಾಹಿತ್ಯ ಇಲ್ಲದೇ ಪತ್ರಿಕೋದ್ಯಮವೇ ಇಲ್ಲ. ಇವೆರಡು ಕ್ಷೇತ್ರಗಳು ಪತ್ರಿಕೋದ್ಯಮಕ್ಕೆ ತೀರಾ ಬೇಕಾದವು. ಕಲಾತ್ಮಕವಲ್ಲದ, ಸಾಹಿತ್ಯಕವಲ್ಲದ ಬರಹಗಳಿಗೆ ಪತ್ರಿಕೋದ್ಯಮದಲ್ಲಿ ಜಾಗವೇ ಇಲ್ಲ. ಉತ್ಕೃಷ್ಟ ಪತ್ರಿಕಾ ಬರಹಗಳಿಗೆ ಸಾಹಿತ್ಯದ ಸರಿಸಮನಾದ ಸ್ಥಾನವಿದೆ. ಇವತ್ತು ಸಾಹಿತ್ಯವು ಪತ್ರಿಕೆಯ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಹೇಳಿದರು.
ಸಮೂಹ ಮಾಧ್ಯಮದ ನೆಲೆ ಇರುವುದು ಸಾಹಿತ್ಯ, ಅಕ್ಷರ ಹಾಗೂ ಪದಗಳಲ್ಲಿ. ಹೀಗಾಗಿ ಪತ್ರಕರ್ತರಿಗೆ ಸಾಹಿತ್ಯದ ಅನುಭವ ಅಗತ್ಯ. ಭಾನುವಾರದ ಪುರವಣಿಗಳ ಮೂಲಕ ಸಾಹಿತ್ಯ ಹಾಗೂ ಸಾಹಿತಿಗಳನ್ನು ಎಲ್ಲರ ಮನೆ-ಮನಗಳಿಗೆ ತಲುಪಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.
ಸಾಹಿತ್ಯವೇ ಒಂದು ಮಾಧ್ಯಮ. ಪತ್ರಿಕೋದ್ಯಮವನ್ನು ಕೂಡ ಅವಸರದ ಸಾಹಿತ್ಯ ಎಂದೇ ಕರೆಯಲಾಗುತ್ತದೆ. ಸಾಹಿತ್ಯ ಮತ್ತು ಪತ್ರಿಕೋದ್ಯಮದ ನಡುವೆ ಪರಸ್ವರ ಸಹಕಾರ ಅಗತ್ಯ, ಎರಡಕ್ಕೂ ಬರವಣಿಗೆಯೇ ಮುಖ್ಯ. ಸಾಹಿತ್ಯ ಸೃಷ್ಟಿಯ ಸಾಹಿತಿಯ ಅಭಿವ್ಯಕ್ತಿಗಾಗಿ, ಆದರೆ ಮಾಧ್ಯಮ ಸೃಷ್ಟಿ ಓದುಗರಿಗಾಗಿ ಎಂದರು.
ಕಲ್ಲಚ್ಚು, ಮೊಳೆ ಜೋಡಿಸುವಿಕೆಯಿಂದ ಆರಂಭವಾದ ಮಾಧ್ಯಮದಲ್ಲಿ ಈಗ ಮಾಹಿತಿ ತಂತ್ರeನದ ಸ್ಫೋಟವಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆಯುವ ವಿದ್ಯಮಾನವನ್ನು ಕ್ಷಣಾರ್ಧದಲ್ಲಿ ಕುಳಿತ ಕಡೆಯೇ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನವ ಮಾಧ್ಯಮಗಳಿಂದಾಗಿ ಮಾಧ್ಯಮದ ಪರಿಧಿ ವಿಸ್ತರಣೆಯಾಗಿದೆ ಎಂದರು.
ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕನ್ನಡ ಮೇಷ್ಟ್ರುಗಳ ಕೊಡುಗೆಯೂ ಇದೆ. ಆದ್ದರಿಂದ ನೀವೆಲ್ಲಾ ಸಾಹಿತ್ಯ ಓದುವ ಹಾಗೂ ಬರೆಯುವ ಮೂಲಕ ಉತ್ತಮ ಕೃತಿಗಳನ್ನು ನೀಡಬೇಕು ಎಂದು ಅವರು ಸಲಹೆ ಮಾಡಿದರು.
ಶಿಬಿರದ ಸಂಚಾಲಕಿ ಪ್ರೊ.ಎನ್.ಕೆ. ಲೋಲಾಕ್ಷಿ ಮಾತನಾಡಿ, ಕನ್ನಡ ಸಾಹಿತ್ಯ- ಮಾಧ್ಯಮ- ಮಾಹಿತಿ ತಂತ್ರeನ ಕುರಿತ ಪುನಶ್ಚೇತನ ಕಾರ್ಯಕ್ರಮ ಇದಾಗಿದೆ ಎಂದರು.

RELATED ARTICLES
- Advertisment -
Google search engine

Most Popular