ಮಂಗಳೂರು (ದಕ್ಷಿಣ ಕನ್ನಡ): ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಂಡಿದ್ದು, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಹಾಗೂ ಬಿಜೆಪಿ ಯುವ ನಾಯಕ ಕ್ಯಾಪ್ಟನ್ ಬ್ರಿಜೇಶ್ ಚೌಟಗೆ ಮಣೆ ಹಾಕಲಾಗಿದ್ದು, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಗೆ ಟಿಕೆಟ್ ಕೈತಪ್ಪಿದೆ. ಉಡುಪಿಯಲ್ಲಿ ಕೋಟಾ ಪೂಜಾರಿ ಸ್ಪರ್ಧೆ ಕಣದಲ್ಲಿದ್ದಾರೆ.
