ಮಂಡ್ಯ: ಇಂದಿನಿಂದ 2024- 2025 ನೇ ಸಾಲಿನ ಕಬ್ಬು ಅರೆಯುವ ಕಾರ್ಯಕ್ಕೆ ಮೈಶುಗರ್ ಕಾರ್ಖಾನೆಯಲ್ಲಿ ಪೂಜೆ ಸಲ್ಲಿಸಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಸಚಿವ ಎನ್.ಚಲುವರಾಯಸ್ವಾಮಿಯಿಂದ ಚಾಲನೆ ದೊರಕಿದ್ದು,ಇದೇ ವೇಳೆ ಶಾಸಕರಾದ ಗಣಿಗ ರವಿಕುಮಾರ್, ಕದಲೂರು ಉದಯ್,ರಮೇಶ್ ಬಾಬು ಬಂಡಿಸಿದ್ದೇಗೌಡ, ಮೈ ಶುಗರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿಡಿ ಗಂಗಾಧರ್, ಸೇರಿ ಅಧಿಕಾರಿ ವರ್ಗ ಭಾಗಿಯಾಗಿದ್ದರು.
ಮಂಡ್ಯದಲ್ಲಿ ಸಚಿವ ಶಿವಾನಂದ ಶಿವಾನಂದ ಪಾಟೀಲ್ ಮಾತನಾಡಿ , ಕಾರ್ಖಾನೆಗೆ ಕಬ್ಬು ಸಾಕಷ್ಟು ಪ್ರಮಾಣದಲ್ಲಿ ಇದೆ. ಸಿಎಂ ಗೆ ಮೊದಲು ಕೃತಜ್ಞತೆ ಸಲ್ಲಿಸಬೇಕು. ಕಳೆದ ಬಾರಿ ಕಾರ್ಖಾನೆಗೆ 50ಕೋಟಿಯನ್ನ ನೀಡಿದ್ದರು. ಆದರಿಂದ ಮೈಶುಗರ್ ಕಾರ್ಖಾನೆಗೆ ಜೀವ ಬಂದಿದೆ. ಇತಿಹಾಸದಲ್ಲಿ 2007 ರ ನಂತರ ಮೊಟ್ಟ ಮೊದಲ ಬಾರಿಗೆ 2.40ಲಕ್ಷ ಟನ್ ಕ್ರಸಿಂಗ್ ಮಾಡಿದ್ದೇವೆ. ರೈತರ ಬಾಕಿಯನ್ನ ತೀರಿಸಿದ್ದಾರೆ. ಕಾರ್ಖಾನೆ ಇವತ್ತು ಲಾಭದ ಕಡೆ ಹೋಗುವ ಅವಕಾಶ ಇದೆ. ಬರಗಾಲ ಎಲ್ಲ ಕಡೆ ಇಲ್ಲ, 4 ಲಕ್ಷ ಮೆಟ್ರಿಕ್ ಟನ್ ಕಬ್ಬು ಅವಶ್ಯಕತೆ ಇದೆ. ಯಾವುದೇ ತೊಂದರೆ ಇಲ್ಲದೆ ಕಬ್ಬು ಸಿಗುತ್ತೆ. ಹೊಸ ಕಾರ್ಖಾನೆಯನ್ನು ಕೂಡ ಮಾಡ್ತೇವೆ. ಕಳೆದ ಬಾರಿ ಹೆಚ್ಚು ಕಬ್ಬು ನುರಿದಿದೆ ಭವಿಷ್ಯದಲ್ಲು ಹೆಚ್ಚು ನುರಿಸುವ ಕೆಲಸ ಹಾಗುತ್ತೆ ಎಂದು ಹೇಳಿದರು.
ನಂತರ ಸಚಿವ ಎನ್.ಚಲುವರಾಯಸ್ವಾಮಿ ಜೆಡಿಎಸ್-ಬಿಜೆಪಿ ಪಾದಯಾತ್ರೆ ವಿಚಾರವಾಗಿ ಮಾತನಾಡಿ ಅವರು ಯಾಕೆ ಪಾದಯಾತ್ರೆ ಮಾಡ್ತಾರೆ ಗೊತ್ತಿಲ್ಲ. 150 ಜನರ ಹಗರಣ ಸಿಎಂ ದಾಖಲೆ ಬಿಡುಗಡೆ ಮಾಡಿದ್ದಾರೆ. ಜೆಡಿಎಸ್-ಬಿಜೆಪಿ ಅಷ್ಟು ಜನ ಅನಾಧಿಕೃತವಾಗಿ ಸೈಟ್ ತಕೊಂಡಿದ್ದಾರೆ. ಯಾರ ವಿರುದ್ಧ ಹೋರಾಟ ಮಾಡ್ತಾರೋ ಗೊತ್ತಿಲ್ಲ. ಮುಖ್ಯಮಂತ್ರಿಗಳ ಶ್ರೀಮತಿ ಅವರ ಲ್ಯಾಂಡ್ ಹೋಗಿರೋದಕ್ಕೆ ಪರ್ಯಾಯವಾಗಿ ಕೊಡಿ ಅಂತ ಕೇಳಿದ್ದಾರೆ. ಕೊಟ್ಟಿರಿವವರು ಯಾರು? ಬಿಜೆಪಿಯವರು. ಯಾರ ವಿರುದ್ದ ಮಾಡ್ತಾರೆ ನನಗೆ ಅರ್ಥವಾಗ್ತಿಲ್ಲ. ಕುಮಾರಸ್ವಾಮಿ ತಕೊಂಡಿದ್ದು ಕಾನೂನು ಬದ್ದನೋ ಏನೋ. ಯಾರದು ಸತ್ಯ. ತನಿಖಾ ಕಮಿಟಿ ಹಾಗಿದೆ ಗೊತ್ತಾಗುತ್ತೆ. ಪೊಲೀಸ್ ಅಧಿಕಾರಿ ಆದ್ರೆ ಒತ್ತಡ ಮಾಡಿದ್ರು ಅಂತಾರೆ. ಜುಡಿಷಿಯಲ್ ಕಮಿಟಿಯಾದ್ರೆ ಜೀವನ ಪೂರ್ತಿ ನ್ಯಾಯಂಗದಲ್ಲಿ ಕುಳಿತು ತೀರ್ಮಾನ ಕೊಟ್ಟವರು. ಅಷ್ಟು ಸುಲಭವಾಗಿ ತಪ್ಪು ಮಾಡಲ್ಲ ಅನ್ನೋ ನಂಬಿಕೆ. ಸಂವಿಧಾನದಲ್ಲಿ ಉಳಿದಿರುವುದೆ ಜುಡಿಷಿಯಲ್ ವ್ಯವಸ್ಥೆ. ತೀರ್ಮಾನ ಬರಲಿ ನೋಡೋಣ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದಾಗ ಸಿಬಿಐಗೆ ಕೊಡಿ ಅಂದಾಗ ಯಾಕೆ ಕೊಡಲಿಲ್ಲ? ಇವಾಗ ಸಿಬಿಐ ಬೇಕಾ? ಎಂದು ಹೇಳಿದರು.