Friday, April 4, 2025
Google search engine

Homeರಾಜ್ಯಮಣಿಪಾಲ್ ಆಸ್ಪತ್ರೆಯಲ್ಲಿ ಶ್ವಾಸಕೋಶ ಚಿಕಿತ್ಸೆ

ಮಣಿಪಾಲ್ ಆಸ್ಪತ್ರೆಯಲ್ಲಿ ಶ್ವಾಸಕೋಶ ಚಿಕಿತ್ಸೆ


ಮೈಸೂರು: ಪಲ್ಮನರಿ ಆಲ್ಟಿಯೋಸ್ ಪ್ರೊಟೀನೋಸಿಸ್ ಎಂಬ ಅಪರೂಪದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಮೈಸೂರಿನಲ್ಲೇ ಇದೇ ಮೊದಲ ಬಾರಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ ಎಂದು ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ.ಲಕ್ಷ್ಮೀ ನರಸಿಂಹನ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ವಾಸಕೋಸದಲ್ಲಿನ ಕಫ ಮೊದಲಾದ ತ್ಯಾಜ್ಯ ಸ್ವಯಂ ಶುದ್ಧೀಕರಣ ಸಾಮರ್ಥ್ಯ ನಿಂತು ಹೋಗಿ ನಗರದ ಗೋಕುಲಂ ನಿವಾಸಿ ವ್ಯಕ್ತಿಯೊಬ್ಬರು ಕೆಲಸ ಮಾಡುವುದಿರಲಿ, ದಿನನಿತ್ಯದ ಶೌಚಕ್ರಿಯೆಗೂ ಸಮಸ್ಯೆ ಎದುರಿಸುತ್ತಿದ್ದರು. ಪ್ರತಿಯೊಬ್ಬರಲ್ಲಿಯೂ ಧೂಳು, ಇನ್ನಿತರ ಬಾಹ್ಯ ವಸ್ತು, ಆಂತರಿಕ ಕಾರಣದ ಕಫ ಉತ್ಪತ್ತಿ ವೇಳೆ ಅದನ್ನು ಸ್ವಯಂ ತಾನಾಗಿಯೇ ಶುದ್ಧೀಕರಿಸಿಕೊಳ್ಳುವ ಸಾಮರ್ಥ್ಯ ಇರುತ್ತದೆ. ಆದರೆ, ಈ ರೋಗಿಗೆ ಧೂಮಪಾನದ ಚಟವೂ ಇರಲಿಲ್ಲ. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಕಾರಣ ಧೂಳು ಸೇವನೆಯೂ ಇರಲಿಲ್ಲ. ಹೀಗಿದ್ದರೂ ಹತ್ತು ಲಕ್ಷ ಜನರಲ್ಲಿ ಒಬ್ಬರಿಗೆ ಬರುವ ಅಪರೂಪದ ಸಮಸ್ಯೆಯಿಂದಾಗಿ ಉಸಿರಾಡುವುದು, ನಿತ್ಯದ ಉದ್ಯೋಗಕ್ಕೂ ಹೋಗಲಾಗದ ಪರಿಸ್ಥಿತಿಯುಂಟಾಗಿತ್ತು. ಈ ಬಳಿಕ ಅವರು ಆಸ್ಪತ್ರೆಗೆ ಬಂದಾಗ ಸ್ಕ್ಯಾನ್ ಮಾಡಿದಾಗ ಶ್ವಾಸಕೋಶದಲ್ಲಿ ಬಿಳಿ ಬಣ್ಣದ ಕಫದ ಮಾದರಿ ತ್ಯಾಜ್ಯ ತುಂಬಿಕೊಂಡಿತ್ತು.
ಇದರಿಂದಾಗಿ ಆಮ್ಲಜನಕ ಸರಿಯಾಗಿ ಸೇರ್ಪಡೆ ಆಗುತ್ತಿರಲಿಲ್ಲ. ಕೃತಕ ಆಮ್ಲಜನಕ ಸೇವಿಸುವ ಪರಿಸ್ಥಿತಿ ಎದುರಾಗಿತ್ತು. ಇದನ್ನು ಗಮನಿಸಿದ ಬಳಿಕ ಮಣಿಪಾಲ್ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸಾಧನ, ತಜ್ಞರಿರುವ ಹಿನ್ನೆಲೆಯಲ್ಲಿ ಅರಿವಳಿಕೆ ನೀಡಿ, ಮೊದಲಿಗೆ ಎಡ ಶ್ವಾಸಕೋಶಕ್ಕೆ ಉಪ್ಪು ಮಿಶ್ರಿತ ನೀರನ್ನು ತುಂಬಿ ಅಲ್ಲಿದ್ದ ಬಿಳಿ ಬಣ್ಣದ ತ್ಯಾಜ್ಯ ಹೊರ ತೆಗೆಯಲಾಯಿತು. ಕೆಲ ದಿನಗಳ ನಂತರ ಬಲಬದಿಯ ಶ್ವಾಸಕೋಶವನ್ನೂ ಶುದ್ಧೀಕರಿಸಲಾಯಿತು ಎಂದರು.
ಇದಕ್ಕಾಗಿ ಒಮ್ಮೆಗೆ ಒಂದೂವರೆ ಲಕ್ಷದಂತೆ ಮೂರು ಲಕ್ಷ ವೆಚ್ಚ ತಗುಲಿದೆ. ಹಲವಾರು ಗಂಟೆ ಕಾಲ ಅರಿವಳಿಕೆಯಲ್ಲಿರಿಸಿ, ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಇರಿಸಿಕೊಳ್ಳಬೇಕಾದ ಕಾರಣ ಇಷ್ಟು ವೆಚ್ಚ ತಗುಲಿದೆ ಎಂದು ವಿವರಿಸಿದರು.
ಈ ಸಮಸ್ಯೆಯಿಂದ ಇಡೀ ಜಿಲ್ಲೆಯಲ್ಲಿ ಕೇವಲ ೧೫ ರಿಂದ ೨೦ ಮಂದಿಯಷ್ಟೇ ಬಳಲುತ್ತಿರಬಹುದು. ಆದರೆ ಈ ಸಮಸ್ಯೆ ಇದೆ ಎಂಬ ಅರಿವು ಅವರಿಗಿರುವುದಿಲ್ಲ. ಇದೇ ವೇಳೆ ಈ ರೀತಿಯ ಸಮಸ್ಯೆ ಕೊರೊನಾ ಹಾವಳಿ ವೇಳೆ ಹೆಚ್ಚಾಗಿದ್ದ ಕಾರಣ ಇವರಿಗೆ ನೀಡುವ ಜಿಎಂಎಫ್‌ಸಿ ಎಂಬ ಚುಚ್ಚುಮದ್ದು ಸುಲಭವಾಗಿ ಸಿಗುತ್ತಿತ್ತು. ಆದರೆ ಈಗ ದೊರಕುತ್ತಿಲ್ಲ. ಇದರಿಂದಾಗಿ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿಯೇ ಕೃತಕವಾಗಿ ಹೊರತೆಗೆಯುವ ಪರಿಸ್ಥಿತಿ ಏರ್ಪಟ್ಟಿದೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಚುಚ್ಚುಮದ್ದು ಲಭ್ಯವಾಗುವಂತೆ ಮಾಡಬೇಕು ಮನವಿ ಮಾಡಿದರು.
ಚಿಕಿತ್ಸೆಗೆ ಒಳಗಾದ ರೋಗಿ ಹಾಗೂ ಅವರ ಪತ್ನಿ ಹಾಜರಿದ್ದರು. ಇವರು ಸಹಾ ಜಿಎಂಎಫ್‌ಸಿ ಚುಚ್ಚುಮದ್ದು ಸುಲಭವಾಗಿ ಲಭ್ಯವಾಗುವಂತೆ ಸರ್ಕಾರ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.

RELATED ARTICLES
- Advertisment -
Google search engine

Most Popular