Friday, April 4, 2025
Google search engine

Homeರಾಜ್ಯಮತದಾರರ ಪಟ್ಟಿ ಪರಿಷ್ಕರಣೆ ಶುರು

ಮತದಾರರ ಪಟ್ಟಿ ಪರಿಷ್ಕರಣೆ ಶುರು

ಮೈಸೂರು: ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ೨೦೨೪ರ ಜನವರಿ ೧ರ ಅರ್ಹತಾ ದಿನಾಂಕಕ್ಕೆ ಅನ್ವಯವಾಗುವಂತೆ ಪರಿಷ್ಕರಿಸಲು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ಅದರಂತೆ, ಜೂ.೧ರಿಂದ ಜುಲೈ ೨೦ರ ವರೆಗೆ ಇಆರ್‌ಒ, ಎಇಆರ್‌ಒ, ಬಿಎಲ್‌ಆರ್‌ಗಳಿಗೆ ತರಬೇತಿ, ಜುಲೈ ೨೧ರಿಂದ ಆಗಸ್ಟ್ ೨೧ರ ವರೆಗೆ ಮತದಾರರ ಪಟ್ಟಿ ಸುಧಾರಣೆ ಸಂಬಂಧ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

 

ಆಗಸ್ಟ್ ೨೨ರಿಂದ ಸೆಪ್ಟೆಂಬರ್ ೨೯ರ ವರೆಗೆ ಮತಗಟ್ಟೆಗಳ ರ?ಯಾಷನಲೈಜೇಷನ್, ಮರು ವ್ಯವಸ್ಥೆಗೊಳಿಸುವ ಪ್ರಕ್ರಿಯೆ ಜರುಗಲಿದೆ. ಜತೆಗೆ, ಮತದಾರರ ಪಟ್ಟಿ ಮತ್ತು ಚುನಾವಣಾ ಗುರುತಿನ 

ಚೀಟಿಗಳಲ್ಲಿರುವ ದೋಷಗಳನ್ನು ಸರಿಪಡಿಸಿ ದೋಷಮುಕ್ತ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ಮತದಾರರ ಭಾವಚಿತ್ರದ ಗುಣಮಟ್ಟ ಪರಿಶೀಲಿಸಿ ದೋಷ ಕಂಡುಬಂದಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಅವಶ್ಯವಿರುವ ಮತಗಟ್ಟೆಗಳ ವಿಭಾಗಗಳು, ಭಾಗಗಳನ್ನು ಮರು ಸ್ಥಾಪಿಸಲಾಗುತ್ತದೆ. ಮತಗಟ್ಟೆಗಳ ಸ್ಥಳಗಳು, ಮತಗಟ್ಟೆಗಳ ಪಟ್ಟಿಗೆ ಅನುಮೋದನೆಯನ್ನು ಪಡೆಯಲಾಗುತ್ತದೆ. ದೋಷಗಳು, ನ್ಯೂನತೆಗಳನ್ನು ಗುರುತಿಸುವುದು ಹಾಗೂ ಸದರಿ ದೋಷಗಳು, ನ್ಯೂನತೆಗಳನ್ನು ಸರಿಪಡಿಸಲು ಕಾರ್ಯತಂತ್ರ ಕೈಗೊಳ್ಳಲಾಗುವುದು. ಕಂಟ್ರೋಲ್ ಟೇಬಲ್ ಅನ್ನು ಕಾಲೋಚಿತಗೊಳಿಸಲಾಗುವುದು. ಸೆಪ್ಟೆಂಬರ್ ೩೦ರಿಂದ ಅಕ್ಟೋಬರ್ ೧೬ರ ವರೆಗೆ ನಮೂನೆ ೧ ರಿಂದ ೮ರ ವರೆಗೆ ಪಟ್ಟಿ ತಯಾರಿಸುವುದು. ಮುಂದಿನ ಜನವರಿ ೧ರಂದು ಪೂರಕ ಮತ್ತು ಕರಡು ಮತದಾರರ ಪಟ್ಟಿ ತಯಾರಿಸುವುದು ಎಂದು ಪ್ರಕಟಣೆಯಲ್ಲಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದ್ದಾರೆ.

ಪರಿಷ್ಕರಣೆ ಕಾರ್ಯಕ್ರಮ:
ಅಕ್ಟೋಬರ್ ೧೭ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ, ಅಕ್ಟೋಬರ್ ೧೭ರಿಂದ ನವೆಂಬರ್ ೩೦ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯಲ್ಲಿನ ೨ ಶನಿವಾರಗಳು ಮತ್ತು ೨ ಭಾನುವಾರಗಳಂದು ವಿಶೇಷ ಆಂದೋಲನ ನಡೆಯಲಿದೆ.

ಡಿಸೆಂಬರ್ ೨೬ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಮಾಡಲಾಗುತ್ತದೆ. ಜ.೧ರ ಒಳಗಾಗಿ ಅಂತಿಮ ಮತದಾರರ ಪಟ್ಟಿಯ ಗುಣಮಟ್ಟ ಪರಿಶೀಲನೆ, ಪ್ರಕಟಣೆಗೆ ಆಯೋಗದಿಂದ ಅನುಮತಿ ಪಡೆಯಲಾಗುತ್ತದೆ. ಡಾಟಬೇಸ್ ಅನ್ನು ಕಾಲೋಚಿತಗೊಳಿಸುವುದು ಮತ್ತು ಸಪ್ಲಿಮೆಂಟರಿ ಪಟ್ಟಿಗಳ ಮುದ್ರಣ, ಜ.೫ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಮಾಡಲಾಗುತ್ತದೆ.

ಜನವರಿ ೧ರಂದು ೧೮ ವರ್ಷ ಪೂರೈಸುವ ಹಾಗೂ ಮತದಾರರ ಪಟ್ಟಿಗಳಲ್ಲಿ ಈವರೆಗೂ ಹೆಸರನ್ನು ನೋಂದಾಯಿಸದೆ ಇರುವ ಅರ್ಹ ಮತದಾರರ ಹೆಸರ ಸೇರಿಸಲು ಅರ್ಜಿ ವೇಳಾಪಟ್ಟಿಯನ್ವಯ ಆನ್‌ಲೈನ್ ಮೂಲಕ (?ಖಟಠಿಛ್ಟಿ ಏಛ್ಝಿಟ್ಝಜ್ಞಿಛಿ ಅಟ್ಝಜ್ಚಿಠಿಜಿಟ್ಞ, ಘ್ಖೆಖ ಛಿಚಿಜಿಠಿಛಿ) ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಸ್ವೀಕರಿಸಲಾಗುವುದು.

ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಸಂಬಂಧ ಯಾವುದೇ ಮಾಹಿತಿಯ ಅವಶ್ಯಕತೆ ಇದ್ದಲ್ಲಿ ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿ ಅಥವಾ ಮತದಾರರ ನೋಂದಣಿ ಅಧಿಕಾರಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತರು, ಮೈಸೂರು ಮತ್ತು ಹುಣಸೂರು ಉಪವಿಭಾಗಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಜಿಲ್ಲೆಯ ಎಲ್ಲ ತಾಲೂಕು ತಹಸೀಲ್ದಾರ್ ಕಚೇರಿಗಳಲ್ಲಿ ಪಡೆಯಬಹುದಾಗಿದೆ. ಅರ್ಹ ಮತದಾರರು ಮತದಾರರ ಪಟ್ಟಿಗೆ ಅವರ ಹೆಸರನ್ನು ಚುನಾವಣಾ ಆಯೋಗವು ನಿಗದಿಪಡಿಸುವ ದಿನಾಂಕದವರೆವಿಗೂ ಸೇರ್ಪಡೆಗೊಳ್ಳಲು ಅವಕಾಶವಿದೆ ಎಂದು ರಾಜೇಂದ್ರ ತಿಳಿಸಿದ್ದಾರೆ

ಹೆಸರು ಸೇರ್ಪಡೆ ನಮೂನೆಗಳ ವಿವರ:
ನಮೂನೆ-೬ ಹೆಸರು ಸೇರ್ಪಡೆ, ನಮೂನೆ-೬ಎ ಅನಿವಾಸಿ ಭಾರತೀಯರು ಅವರ ಹೆಸರನ್ನು ನೋಂದಾಯಿಸಿಕೊಳ್ಳಲು, ನಮೂನೆ-೬ಬಿ ಮತದಾರರ ಪಟ್ಟಿಯೊಂದಿಗೆ ಆಧಾರ್ ಜೋಡಣೆ ಮಾಡಲು, ನಮೂನೆ-೭ ಹೆಸರು ತೆಗೆದು ಹಾಕುವುದು (ಮರಣ, ಸ್ಥಳಾಂತರ, ಪುನರಾವರ್ತನೆ), ನಮೂನೆ-೮ ಮತದಾರರ ಹೆಸರು, ವಿಳಾಸ ಮತ್ತು ಭಾವಚಿತ್ರಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ, ಒಂದು ವಿಧಾನಸಭಾ ಕ್ಷೇತ್ರದಿಂದ ಬೇರೆ ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆ, ಒಂದು ವಿಧಾನಸಭಾ ಕ್ಷೇತ್ರದಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವರ್ಗಾವಣೆ, ಬದಲಿ ಎಪಿಕ್‌ಗಾಗಿ ಮನವಿ, ಅಂಗವೈಕಲ್ಯ ಹೊಂದಿರುವ ಮತದಾರರ ಅವರ ಅಂಗವೈಕಲ್ಯ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

 

RELATED ARTICLES
- Advertisment -
Google search engine

Most Popular