Friday, April 4, 2025
Google search engine

HomeUncategorizedಮತ್ತೆ ಶುರುವಾಯ್ತು ವಿನಯ್‌ ರಾಜಕುಮಾರ್ ‘ಗ್ರಾಮಾಯಣ’

ಮತ್ತೆ ಶುರುವಾಯ್ತು ವಿನಯ್‌ ರಾಜಕುಮಾರ್ ‘ಗ್ರಾಮಾಯಣ’

 

ವಿನಯ್‌ ರಾಜ್‌ಕುಮಾರ್‌ “ಗ್ರಾಮಾಯಣ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದ ವಿಚಾರ ನಿಮಗೆ ಗೊತ್ತೇ ಇದೆ. ಪಕ್ಕಾ ಹಳ್ಳಿ ಹಿನ್ನೆಲೆಯ ಕಥೆ ಹೊಂದಿದ್ದ ಈ ಸಿನಿಮಾದ ಒಂದಷ್ಟು ಚಿತ್ರೀಕರಣ ಕೂಡಾ ಮುಗಿದಿತ್ತು. ದೇವನೂರು ಚಂದ್ರು ಈ ಸಿನಿಮಾದ ನಿರ್ದೇಶಕರು. ಆದರೆ, ಕೋವಿಡ್‌ ಸಮಯದಲ್ಲಿ ಈ ಚಿತ್ರದ ನಿರ್ಮಾಪಕರು ತೀರಿಕೊಳ್ಳುವ ಮೂಲಕ ಸಿನಿಮಾವೂ ಅರ್ಧಕ್ಕೆ ನಿಂತು ಹೋಯಿತು. ಈಗ ಮತ್ತೆ ಆ ಚಿತ್ರ ಆರಂಭವಾಗುತ್ತಿದೆ. ಹಾಗಂತ ಅರ್ಧದಿಂದ ಮತ್ತೆ ಶುರುವಾಗುತ್ತಿಲ್ಲ. ಹೊಸದಾಗಿ, ಹೊಸ ಮುಹೂರ್ತ ದೊಂದಿಗೆ ಸಿನಿಮಾ ಆರಂಭವಾಗುತ್ತಿದೆ. ಈ ಬಾರಿ ಸಿನಿಮಾವನ್ನು ನಿರ್ಮಿಸುತ್ತಿರುವುದು ಲಹರಿ ಫಿಲಂಸ್‌ ಹಾಗೂ ವೀನಸ್‌ ಎಂಟರ್‌ಟೈನರ್.ಈಗಾಗಲೇ ಈ ಬ್ಯಾನರ್‌ ಜೊತೆಯಾಗಿ ಉಪೇಂದ್ರ ಅವರ ನಟನೆ, ನಿರ್ದೆಶನದ “ಯು-ಐ’ ಚಿತ್ರವನ್ನು ನಿರ್ಮಿಸುತ್ತಿದೆ. ಈಗ ಎರಡನೇ ಸಿನಿಮಾವಾಗಿ “ಗ್ರಾಮಾಯಣ’ ಆರಂಭಿಸುತ್ತಿದೆ. ಈ ಚಿತ್ರದ ಮುಹೂರ್ತ ಗುರುವಾರ ಬಂಡೆಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆಯಲಿದೆ.ಈ ಕುರಿತು ಮಾತನಾಡುವ ವೀನಸ್‌ ಎಂಟರ್‌ಟೈನರ್ನ ನಿರ್ಮಾಪಕ ಕೆ.ಪಿ.ಶ್ರೀಕಾಂತ್‌, “ಗ್ರಾಮಾಯಣ ಸಿನಿಮಾವನ್ನು ಸಂಪೂರ್ಣವಾಗಿ ಹೊಸದಾಗಿ ಮಾಡುತ್ತಿದ್ದೇವೆ. ಚಿತ್ರದ ಮುಹೂರ್ತ ಗುರುವಾರ ನಡೆಯಲಿದೆ’ ಎನ್ನುತ್ತಾರೆ.

 

RELATED ARTICLES
- Advertisment -
Google search engine

Most Popular